ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ: ಇದರಿಂದಾಗುವ ಉಪಯೋಗಗಳೇನು?
Hyderabad Bengaluru Industrial corridor: ಇಂದು (ಜುಲೈ 23) ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡುತ್ತಿದ್ದು, ಬಜೆಟ್‌ನಲ್ಲಿ ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಬಜೆಟ್ ಮಂಡನೆ ವೇಳೆ ವಿವಿಧ ಕೈಗಾರಿಕಾ ಕಾರಿಡಾರ್‌ಗಳ ಉಲ್ಲೇಖಸಿದ್ದು, ಇದೇ ವೇಳೆ ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದರು. ಸುಮಾರು 26 ಸಾವಿರ ಕೋಟಿ ವೆಚ್ಚದಲ್ಲಿ ರೈಲು ಯೋಜನೆಗಳನ್ನೂ ಆರಂಭಿಸುವುದಾಗಿಯೂ ತಿಳಿಸಿದ್ದಾರೆ.

ವಿಶಾಖಪಟ್ಟಣ ಚೆನ್ನೈ ಕೈಗಾರಿಕಾ ಕಾರಿಡಾರ್, ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡುವುದಾಗಿ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. 26,000 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲು ಯೋಜನೆಗಳ ಆರಂಭ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದು. ಆಂಧ್ರಪ್ರದೇಶ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಇಂಧನ, ರೈಲು, ರಸ್ತೆ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗುವುದು, ಪೋಲಾವರಂ ಪ್ರಾಜೆಕ್ಟ್‌ಗೆ ಕೇಂದ್ರ ಸರ್ಕಾರದಿಂದ ಅನುದಾನ ನೀಡಲಾಗುವುದು ಎಂದರು.
ಈ ಕಾರಿಡಾರ್ ನಿರ್ಮಾಣವಾದರೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಎರಡು ಪ್ರಮುಖ ರಾಜ್ಯಗಳ ನಡುವೆ ನಿರ್ಮಿಸಲು ಉದ್ದೇಶಿಸಲಾಗಿರುವ ಮೆಗಾ ಇಂಡಸ್ಟ್ರಿಯಲ್ ಹಬ್. ಇದು ಆಂಧ್ರ ಪ್ರದೇಶದ ಕುರ್ನೂಲ್ ಜಿಲ್ಲೆಯಿಂದ ಆರಂಭವಾಗಿ ಬೆಂಗಳೂರಿನವರೆಗೆ ಇರಲಿದೆ. ನ್ಯಾಷನಲ್ ಇಂಡಸ್ಟ್ರಿಯಲ್ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ ವತಿಯಿಂದ ನಡೆಯುವ ಬೃಹತ್ ಯೋಜನೆ ಆಗಿದೆ.
ಕೈಗಾರಿಕಾ ಕಾರಿಡಾರ್‌ಗಳಿಂದ ಕೈಗಾರಿಕಾ ಉತ್ಪಾದನೆಯೊಂದಿಗೆ ಉದ್ಯೋಗಾವಕಾಶ ಹೆಚ್ಚಳವಾಗಿದೆ. ಇಂತಹ ಕಾರಿಡಾರ್‌ಗಳು ಹಲವು ಪ್ರತ್ಯಕ್ಷ ಮತ್ತು ಪರೋಕ್ಷ ಪ್ರಯೋಜನಗಳನ್ನು ಹೊಂದಿದೆ. ಹೆದ್ದಾರಿಗಳು, ರೈಲ್ವೆ, ವಿಮಾನನಿಲ್ದಾಣಗಳು ಮತ್ತು ಬಂದರುಗಳಿಗೆ ಅತ್ಯುತ್ತಮ ಯೋಜಿತ ಕಾರಿಡಾರ್‌ಗಳು ಇವಾಗಿರಲಿದ್ದು, ಇದರಿಂದ ಜನರು ಮತ್ತು ಸರಕುಗಳ ಸಾಗಾಟ ಸುಲಭ ಆಗುತ್ತದೆ. ನಿರ್ದಿಷ್ಟ ಸ್ಥಳಗಳಲ್ಲಿ ಕೈಗರಿಕಾ ಕ್ಲಸ್ಟರ್‌ಗಳ ಸ್ಥಾಪನೆಗೆ ನೆರವಾಗಲಿದೆ. ಇಂತಹ ಕೈಗಾರಿಕೆಗಳಿಗೆ ಪೂರಕವಾದ ಲಾಜಿಸ್ಟಿಕ್ ವ್ಯವಸ್ಥೆಯೂ ಇರಲಿದೆ. ಉದ್ಯೋಗ ಮತ್ತು ಹೂಡಿಕೆ ಹೆಚ್ಚಳಕ್ಕೂ ನೆರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ನಿರ್ಮಾಣಗೊಳ್ಳುತ್ತಿರು 11 ಕಾರಿಡಾರ್‌ಗಳಿವು
* ದೆಹಲಿ ಮುಂಬೈ ಕೈಗಾರಿಕಾ ಕಾರಿಡಾರ್
* ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್
* ಅಮೃತಸರ ಕೋಲ್ಕತ್ತಾ ಇಂಡಸ್ಟ್ರಿಯಲ್ ಕಾರಿಡಾರ್
* ಈಸ್ಟ್ ಕೋಸ್ಟ್ ಇಂಡಸ್ಟ್ರಿಯಲ್ ಕಾರಿಡಾರ್
* ವೈಜಾಗ್ ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್
* ಬೆಂಗಳೂರು ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್
* ಕೊಯಮತ್ತೂರು ಮೂಲಕ ಕೊಯಮತ್ತೂರು
* ಹೈದರಾಬಾದ್ ನಾಗ್ಪುರ ಇಂಡಸ್ಟ್ರಿಯಲ್ ಕಾರಿಡಾರ್
* ಹೈದರಾಬಾದ್ ವಾರಂಗಲ್ ಕೈಗಾರಿಕಾ ಕಾರಿಡಾರ್
* ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್
* ಒಡಿಶಾ ಆರ್ಥಿಕ ಕಾರಿಡಾರ್
* ದೆಹಲಿ ನಾಗ್ಪುರ ಕೈಗಾರಿಕಾ ಕಾರಿಡಾರ್












Click it and Unblock the Notifications