ರಾಜಸ್ಥಾನದಲ್ಲಿ ಬೃಹತ್ ಲಿಥಿಯಂ ನಿಕ್ಷೇಪ ಪತ್ತೆ; ದೇಶದ ಬೇಡಿಕೆಯ ಶೇ.80ರಷ್ಟು ಪೂರೈಕೆ ಸಾಮರ್ಥ್ಯ

ರಾಜಸ್ಥಾನದ ಸರ್ಕಾರಿ ಅಧಿಕಾರಿಗಳು ಮತ್ತು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ವರದಿಗಳ ಪ್ರಕಾರ, ರಾಜಸ್ಥಾನದ ನಾಗೌರ್ ಜಿಲ್ಲೆಯ ದೇಗಾನಾ ಪುರಸಭೆ ವ್ಯಾಪ್ತಿಯಲ್ಲಿ ಲಿಥಿಯಂನ ಗಣನೀಯ ಪ್ರಮಾಣದ ನಿಕ್ಷೇಪಗಳು ಪತ್ತೆಯಾಗಿವೆ.

ಇತ್ತೀಚೆಗಷ್ಟೇ ಭಾರತದಲ್ಲಿ ಮೊದಲ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿತ್ತು. ಇದೀಗ 3 ತಿಂಗಳ ಬಳಿಕ ರಾಜಸ್ಥಾನದಲ್ಲಿ ಭಾರೀ ಪ್ರಮಾಣದ ಲಿಥಿಯಂ ಪತ್ತೆಯಾಗಿದೆ.

Huge Lithium Reserve Discovered In Rajasthan; Supply Capacity Of 80% of the Indiass Demand

ರಾಜಸ್ಥಾನದಲ್ಲಿ ಪತ್ತೆಯಾದ ನಿಕ್ಷೇಪಗಳು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಡುಬಂದಿರುವ 5.9 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಲಿಥಿಯಂ ಶೇಖರಣೆಯನ್ನು ಒಳಗೊಂಡಿವೆ ಎಂದು ಹೇಳಲಾಗಿದೆ.

ರಾಜಸ್ಥಾನದಲ್ಲಿ ಕಂಡುಬರುವ ಲಿಥಿಯಂ ಪ್ರಮಾಣವು ದೇಶದ ಬೇಡಿಕೆ ಮತ್ತು ಅವಶ್ಯಕತೆಯ ಸುಮಾರು ಶೇ.80 ರಷ್ಟು ಪೂರೈಸುತ್ತದೆ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳು ಹೇಳಿದ್ದಾರೆ.

ಲಿಥಿಯಂ ಪ್ರಪಂಚದಾದ್ಯಂತ ಹಗುರವಾದ ಮತ್ತು ಮೃದುವಾದ ಲೋಹವಾಗಿದ್ದು, ನಾನ್ ಫೆರಸ್ ಲೋಹ. ಇದು ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ ಮತ್ತು EV (ಎಲೆಕ್ಟ್ರಿಕ್ ವಾಹನ) ಬ್ಯಾಟರಿಗಳಲ್ಲಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

Huge Lithium Reserve Discovered In Rajasthan; Supply Capacity Of 80% of the Indiass Demand

ಪ್ರಸ್ತುತ ಭಾರತ ಲಿಥಿಯಂನಂತಹ ಖನಿಜಗಳಾದ ನಿಕಲ್, ಕೋಬಾಲ್ಟ್‌ಗಳ ಆಮದುಗಳ ಮೇಲೆ ಅವಲಂಬಿತವಾಗಿದೆ. ಈ ಪ್ರಮುಖ ಖನಿಜಗಳ ಪೂರೈಕೆಯನ್ನು ಭಾರತ ಬಲಪಡಿಸಲು ಪ್ರಯತ್ನಿಸುತ್ತಿದೆ. ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ವಿಸ್ತರಿಸುವ ಯೋಜನೆಯನ್ನು ಹೆಚ್ಚಿಸಲು ಮುಂದಾಗಿದೆ.

ಇದೇ ವೇಳೆ ವಿಶ್ವದ ಲಿಥಿಯಂ ಉತ್ಪಾದನೆಯ ಶೇ.47ರಷ್ಟು ಆಸ್ಟ್ರೇಲಿಯಾದಲ್ಲಿ, 30 ಪ್ರತಿಶತ ಚಿಲಿಯಲ್ಲಿ ಮತ್ತು 15 ಪ್ರತಿಶತ ಚೀನಾದಲ್ಲಿ ನಡೆಯುತ್ತದೆ. ಆದರೆ, ಖನಿಜದ ಸಂಸ್ಕರಣೆಯ 58 ಪ್ರತಿಶತ ಚೀನಾದಲ್ಲಿ, 29 ಚಿಲಿಯಲ್ಲಿ ಮತ್ತು 10 ಪ್ರತಿಶತ ಅರ್ಜೆಂಟೀನಾದಲ್ಲಿ ನಡೆಯುತ್ತದೆ.

ಈ ಕುರಿತು ಕ್ಯಾಪಿಟಲ್ ಎ ಸಂಸ್ಥಾಪಕ ಮತ್ತು ಲೀಡ್ ಇನ್ವೆಸ್ಟರ್ ಅಂಕಿತ್ ಕೆಡಿಯಾ ಮಾತನಾಡಿ, "ವಿದ್ಯುತ್ ಚಾಲಿತ ವಾಹನಗಳಿಗೆ ಲಿಥಿಯಂ-ಐಯಾನ್ ಬ್ಯಾಟರಿಗಳು ಅತ್ಯಂತ ಪರಿಣಾಮಕಾರಿ, ಸುರಕ್ಷಿತ ಮತ್ತು ಹಗುರವಾದ ಬ್ಯಾಟರಿ ಆಯ್ಕೆಗಳಾಗಿವೆ. ಭಾರತದ ವಿವಿಧ ಭಾಗಗಳಲ್ಲಿ ಲಿಥಿಯಂ ನಿಕ್ಷೇಪಗಳ ಆವಿಷ್ಕಾರವು ಉತ್ತಮವಾಗಿದೆ," ಎಂದು ಹೇಳಿದ್ದಾರೆ.

ಬ್ಯಾಟರಿ ಉತ್ಪಾದನಾ ಉದ್ಯಮ, EV ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವಲ್ಲಿ ದೇಶೀಯವಾಗಿ ಉತ್ಪಾದಿಸಲಾದ ಲಿಥಿಯಂ ಬಳಕೆಯ ಸಾಮರ್ಥ್ಯವು ದೊಡ್ಡದಾಗಿದೆ. ಇದು ದೇಶೀಯ ಮಾರುಕಟ್ಟೆಗಳಲ್ಲಿ ಹೆಚ್ಚು ಅಗತ್ಯವಾದ ಉತ್ತೇಜನವನ್ನು ತರುತ್ತದೆ. ಭಾರತದಲ್ಲಿ EV (ವಿದ್ಯುತ್ ಚಾಲಿತ ವಾಹನ) ಅಳವಡಿಕೆಯು ದೊಡ್ಡ ರೀತಿಯಲ್ಲಿ ಪ್ರಾರಂಭವಾಗಿದೆ ಎಂದರು.

ಚಾರ್ಜ್‌ಅಪ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ವರುಣ್ ಗೋಯೆಂಕಾ ಮಾತನಾಡಿ, "ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೆ ಪತ್ತೆಯಾದ ನಿಕ್ಷೇಪಗಳ ಜೊತೆಗೆ, ಭಾರತವು ರಾಜಸ್ಥಾನದಲ್ಲಿ ಗಮನಾರ್ಹವಾದ ಲಿಥಿಯಂ ನಿಕ್ಷೇಪಗಳನ್ನು ಕಂಡುಹಿಡಿದಿರುವುದರಿಂದ, ಮುಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಭಾರತ 3ನೇ ಅತಿದೊಡ್ಡ ಮಾರುಕಟ್ಟೆಯಾಗಲಿದೆ. ಬ್ಯಾಟರಿ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಚೀನಾ ಪ್ರಾಬಲ್ಯ ಹೊಂದಿರುವ ಏಕೈಕ ಅತಿ ದೊಡ್ಡ ದೇಶವಾಗಿದೆ," ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+