Union Budget 2025: ಕೇಂದ್ರ ಬಜೆಟ್‌ಗೆ ನಿಮ್ಮದೊಂದು ಸಲಹೆ ತಿಳಿಸ್ಬೇಕಾ? ಇಲ್ಲಿದೆ ಅವಕಾಶ
Union Budget 2025: ಕೇಂದ್ರ ಬಜೆಟ್ ಮಂಡನೆ ದಿನಾಂಕ ಸಮೀಪಿಸುತ್ತಲೇ ಇದೆ. ಈ ಹಿನ್ನೆಲೆ ಬಹುತೇಕರ ಕಣ್ಣು ಬಜೆಟ್ ಮೇಲಿದ್ದು, ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದರಲ್ಲೂ ಮಧ್ಯಮ ವರ್ಗದವರು ತುಂಬಾ ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ಇನ್ನು ಜನರು ತಮ್ಮ ಅನಿಸಿಕೆಗಳನ್ನು ತಿಳಿಸಲು ಕೂಡ ಅವಕಾಶ ಕಲ್ಪಿಸಿಕೊಡಲಾಗದೆ. ಮಾಹಿತಿ ಇಲ್ಲಿದೆ ಗಮನಿಸಿ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 8ನೇ ಬಾರಿಗೆ ಬಜೆಟ್ ಮಂಡಿಸಲು ಸಿದ್ದತೆ ನಡೆಸಿದ್ದಾರೆ. ಫೆಬ್ರವರಿ 1ರಂದು 2025-2026ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ನೀವು ಏನಾದರೂ ಸಲಹೆ ಇದೆ, ತಿಳಿಸುವುದು ಹೇಗೆ ಎಂದು ಚಿಂತೆ ಮಾಡಬೇಡಿ. ಇಲ್ಲಿ ನಿಮಗೂ ಸಹ ಸಲಹೆ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಸಲಹೆ ತಿಳಿಸುವುದು ಹೇಗೆ?: ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಜನರ ಸಹಭಾಗಿತ್ವದ ಆಡಳಿತ ನೀಡುವುದಕ್ಕೆ mygov ಎಂಬ ವೇದಿಕೆಯನ್ನು ಆರಂಭ ಮಾಡಿತ್ತು. ಅದೇ ಪೇಜ್‌ನಲ್ಲಿ ಈಗ ಕೇಂದ್ರ ಬಜೆಟ್‌ಗೆ ಜನರು ತಮ್ಮ ಸಲಹೆಗಳನ್ನು ನೀಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಹಣಕಾಸು ಸಚಿವಾಲಯವು 2025-26ರ ಕೇಂದ್ರ ಬಜೆಟ್‌ನಲ್ಲಿ ಅನುಷ್ಠಾನಗೊಳಿಸುವುದಕ್ಕೆ ಯೋಗ್ಯವಾದಂತಹ ಓಪಿನಿಯನ್‌ಗಳನ್ನು ಸಂಗ್ರಹಿಸಲು ಮುಂದಾಗಿದೆ. ಈ ಆಲೋಚನೆಗಳು ಜನರ ಆಕಾಂಕ್ಷೆಗಳು ಮತ್ತು ಅಗತ್ಯಗಳನ್ನು ಪ್ರತಿಬಿಂಬಿಸುವಂತಿರಲಿ. ವಿದ್ಯಾರ್ಥಿಗಳಾಗಿರಬಹುದು, ವೃತ್ತಿಪರರೇ ಇರಬಹುದು, ಗೃಹಿಣಿಯೇ ಇರಬಹುದು ಅಥವಾ ನಿವೃತ್ತರೇ ಆಗಿರಬಹುದು ನೀವು ಕೊಡುವ ಸಲಹೆಗಳು ಜನಪರ ಆಡಳಿತಕ್ಕೆ ಬಹು ಮುಖ್ಯ ಆಗುತ್ತದೆ.
ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ನಿಮ್ಮ ಆಲೋಚನೆಗಳಿಗೆ ಇರುತ್ತವೆ. ಅವುಗಳನ್ನು ಹಂಚಿಕೊಳ್ಳಿ ಎಂದು ಹಣಕಾಸು ಸಚಿವಾಲಯವು ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಕೇಂದ್ರ ಸರ್ಕಾರ ನಿರ್ವಹಿಸುತ್ತಿರುವ mygov ವೆಬ್‌ಸೈಟ್ ಭೇಟಿ ನೀಡಿ. ಬಳಿಕ ಅಲ್ಲಿ ನಿಮ್ಮ ಸಲಹೆಗಳನ್ನು ನೀಡಬಹುದಾಗಿದೆ.
ನೀವು ಮಾಡಬೇಕಾದ ಕೆಲಸ ಇಷ್ಟೇ
* ಕೇಂದ್ರ ಸರ್ಕಾರದ ವೆಬ್‌ಸೈಟ್ ಆದ mygov.inಗೆ ಭೇಟಿ ನೀಡಿ.
* ಬಲಗಡೆ ಮೇಲ್ಭಾಗದಲ್ಲಿರುವ ಲಾಗಿನ್ ಬಟನ್ ಕ್ಲಿಕ್ ಮಾಡಿ. ಮೊದಲ ಬಾರಿಗೆ ಲಾಗಿನ್ ಆಗುವವರಾದರೆ ನಿಮ್ಮ ಹೆಸರು ವಿಳಾಸ, ಮೊಬೈಲ್ ನಂಬರ್ ವಿವರ ಸಮೂದಿಸಿ ನೋಂದಣಿ ಮಾಡಿಕೊಂಡು ಬಳಿಕ ಲಾಗಿನ್ ಆಗಿ.
* ಲಾಗಿನ್ ಇನ್ ಆಗಲು ನೋಂದಾಯಿತ ಮೊಬೈಲ್ ನಂಬರ್ ಬಳಸಿ.
* ಬಳಿಕ ಒಟಿಪಿ ಬರುತ್ತದೆ. ಆ ಒಟಿಪಿಯನ್ನು ನಿಗದಿತ ಸ್ಥಳದಲ್ಲಿ ನಮೂದಿಸಿ.
* mygov.in ವೆಬ್‌ಸೈಟ್‌ನ ಡ್ಯಾಶ್‌ಬೋರ್ಡ್ ತೆರೆದುಕೊಳ್ಳುತ್ತದೆ.
* Inviting Ideas and Suggestions for Union Budget 2025-2026 ಮೇಲೆ ಕ್ಲಿಕ್ ಮಾಡಬೇಕು.
* ಸಲಹೆ ನೀಡಬೇಕಾದ ಪುಟ ತೆರೆದುಕೊಳ್ಳುತ್ತದೆ. ಆ ನೇರ ಲಿಂಕ್ ಮಾಡಿದರೆ ಲಾಗಿನ್ ಆಗಿ ಬಳಸಬಹುದು.
* ಬಳಿಕ ಚರ್ಚೆ ಅಂದರೆ ನೀವು ಸಲಹೆ ನೀಡಬೇಕಾದ ಪುಟ ತೆರೆದುಕೊಳ್ಳುತ್ತದೆ.
* ಪುಟ ತೆರೆದ ಬಳಿಕ ಅಲ್ಲಿ ಕಾಮೆಂಟ್ ಮಾಡುವುದಕ್ಕೆ ಒಂದು ಆಯತಾಕಾರದ ಪುಟ್ಟ ಬಾಕ್ಸ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನಿಮ್ಮ ಸಲಹೆಯನ್ನು ಟೈಪ್ ಮಾಡಬಹುದು.
* ಮೊದಲೇ ಸಿದ್ಧ ಮಾಡಿಟ್ಟುಕೊಂಡಿದ್ದರೆ ಅದಕ್ಕೆ ಪೇಸ್ಟ್ ಮಾಡಿ ಸೇವ್ ಕೊಡಿ.
* 1,000 ಅಕ್ಷರಗಳನ್ನು ಟೈಪ್ ಮಾಡಲು ಸ್ಥಳಾವಕಾಶ ಇದೆ.
* ವಿಸ್ತೃತವಾದ ಸಲಹೆ ನೀಡುವುದಾದರೆ, 1,000 ಅಕ್ಷರಗಳಲ್ಲಿ ಸಲಹೆಯ ಸಾರಾಂಶವನ್ನು ಕೊಟ್ಟು, ಸಲಹೆ ಬರೆದಿಟ್ಟ ಪೇಪರ್‌ನ ಇಮೇಜ್ ಅಥವಾ ಪಿಡಿಎಫ್ ಅನ್ನು ಅಟ್ಯಾಚ್ ಸಹ ಮಾಡಬಹುದು. ಅಲ್ಲದೆ, ಬೇರೆಯವರು ನೀಡಿರುವ ಸಲಹೆಗಳನ್ನು ಕೂಡ ನೀವು ವೀಕ್ಷಣೆ ಮಾಡಬಹುದಾಗಿದೆ.
* https://secure.mygov.in/group-issue/inviting-ideas-and-suggestions-union-budget-2025-2026/












Click it and Unblock the Notifications