ಏನಿದು ವರ್ಚ್ಯುವಲ್ ಆಧಾರ್ ನಂಬರ್? ಪಡೆಯುವುದು ಹೇಗೆ?

Posted By:
Subscribe to Oneindia Kannada
   ವರ್ಚ್ಯುವಲ್ ಆಧಾರ್ ನಂಬರ್ ಎಂದರೇನು ? ಪಡೆಯುವುದು ಹೇಗೆ? | Oneindia Kannada

   ನವದೆಹಲಿ, ಜನವರಿ 11: ಸರ್ಕಾರದ ಹಲವು ಯೋಜನೆಗಳಿಗೆ, ಮತ್ತು ಬಹುಪಾಲು ಎಲ್ಲಾ ದಾಖಲೆಗಳೊಂದಿಗೆ ಆಧಾರ್ ಜೋಡಿಸುವುದು ಕಡ್ಡಾಯ. ಆದರೆ ಇದರಿಂದ ಖಾಸಗೀತನಕ್ಕೆ ದಕ್ಕೆಯಾಗುತ್ತದೆ ಮತ್ತು ಇದು ದುರಪಯೋಗವಾಗುವ ಸಾಧ್ಯತೆ ಹೆಚ್ಚು ಎಂಬ ಕೂಗನ್ನು ತಣ್ಣಗಾಗಿಸಲು ಯುಐಡಿಎಐ (Unique Identification Authority of India) ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದೆ.

   ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಖಾಸಗೀ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇದನ್ನು ತಪ್ಪಿಸುವುದಕ್ಕೆಂದೇ ಜಾರಿಗೆ ಬಂದಿದ್ದು ವರ್ಚ್ಯುವಲ್ ಆಧಾರ್ ಎಂಬ ಹೊಸ ಪರಿಕಲ್ಪನೆ.

   ಸಂಕ್ರಾಂತಿ ವಿಶೇಷ ಪುಟ

   ಅಷ್ಟಕ್ಕೂ ಏನಿದು ಆಧಾರ್ ನ ವರ್ಚ್ಯುವಲ್ ಐಡಿ? ಇದರಿಂದ ಆಧಾರ್ ದುರುಪಯೋಗ ತಡೆಯುವುದಕ್ಕೆ ಹೇಗೆ ಸಾಧ್ಯ? ಇದನ್ನು ಪಡೆಯುವುದು ಹೇಗೆ ಎಂಬಿತ್ಯಾದಿ ಮಾಹಿತಿ ನಿಮಗಾಗಿ ಇಲ್ಲಿದೆ.

   ಏನಿದು ಆಧಾರ್ ವರ್ಚ್ಯುವಲ್ ಐಡಿ?

   ಏನಿದು ಆಧಾರ್ ವರ್ಚ್ಯುವಲ್ ಐಡಿ?

   ವರ್ಚ್ಯುವಲ್ ಆಧಾರ್ ಸಂಖ್ಯೆ ಎಂದರೆ 16 ಅಂಕಿಯ ತಾತ್ಕಾಲಿಕ ಗುರುತಿನ ಸಂಖ್ಯೆ. ಎಲ್ಲೆಲ್ಲಿ ಆಧಾರ್ ಸಂಖ್ಯೆಯ ಅಗತ್ಯ ಬೀಳುತ್ತದೋ, ಅಲ್ಲಿ ವರ್ಚ್ಯವಲ್ ಐಡಿ ಬಳಸುವುದರಿಂದ ಖಾಸಗಿ ಮಾಹಿತಿ ಸೋರಿಕೆಯಾಗದಂತೆ ತಡೆಯಬಹುದು. ಖಾಸಗಿ ಕಂಪೆನಿಗಳೊಂದಿಗಿನ ಪ್ರತಿ ವ್ಯವಹಾರಕ್ಕೂ ಈಗೀಗ ಆಧಾರ್ ಕಾರ್ಡ್ ನೀಡುವುದು ಕಡ್ಡಾಯವಾಗಿತ್ತು. ಆದರೆ ಜೂನ್ ನಂತರ ಯುಐಡಿಐಎ ನಿಂದ ಪಡೆವ ವರ್ಚ್ಯುವಲ್ ಐಡಿ ನಂಬರ್ ಅನ್ನೇ ಗ್ರಾಹಕರು ಬಳಸಬಹುದು. ಗ್ರಾಹಕರು ನೀಡುವ ಈ ನಂಬರ್ ಅನ್ನು ಆಧಾರ್ ಬದಲಾಗಿ ಕಂಪೆನಿಗಳು ಪಡೆದುಕೊಳ್ಳಬೇಕು. ಯಾವುದೇ ರೀತಿಯಲ್ಲೂ ತಕರಾರು ಮಾಡುವಂತಿಲ್ಲ!

   ವರ್ಚ್ಯುವಲ್ ಐಡಿ ಪಡೆಯುವುದು ಹೇಗೆ?

   ವರ್ಚ್ಯುವಲ್ ಐಡಿ ಪಡೆಯುವುದು ಹೇಗೆ?

   ವರ್ಚ್ಯುವಲ್ ಐಡಿಯನ್ನು ಗ್ರಾಹಕರು ಯುಐಡಿಎಐ ವೆಬ್ ಸೈಟ್, mAadhaar ಮೊಬೈಲ್ app ಅಥವಾ ಆಧಾರ್ ಎನ್ರೋಲ್ ಮೆಂಟ್ ಕೇಂದ್ರಗಳಿಂದ ಪಡೆಯಬಹುದಾಗಿದೆ. ಈ ತಾತ್ಕಾಲಿಕ ಐಡಿ ಗೆ ಯುಐಡಿಎಐ ಕನಿಷ್ಠ ಕಾಲಾವಧಿಯನ್ನು ನಿಗದಿಗೊಳಿಸಿರುತ್ತದೆ. ಆ ಕಾಲಾವಧಿಯ ನಂತರ ವರ್ಚ್ಯುವಲ್ ಐಡಿಯನ್ನು ಬದಲಿಸಿಕೊಳ್ಳಬಹುದು.

   ಆಧಾರ್ ಕಾರ್ಡ್ ಸ್ಥಗಿತಗೊಂಡಿದೆಯೇ? ಕಂಡುಹಿಡಿಯೋದು ಹೇಗೆ?

   ವರ್ಚ್ಯುವಲ್ ಐಡಿಗೆ ಮಿತಿಯಿಲ್ಲ!

   ವರ್ಚ್ಯುವಲ್ ಐಡಿಗೆ ಮಿತಿಯಿಲ್ಲ!

   ಒಬ್ಬ ವ್ಯಕ್ತಿ ಎಷ್ಟು ವರ್ಚ್ಯುವಲ್ ಐಡಿಯನ್ನಾದರೂ ಪಡೆಯಬಹುದಾದರೂ, ಏಕಕಾಲಕ್ಕೆ ಒಬ್ಬ ವ್ಯಕ್ತೊ ಒಂದೇ ವರ್ಚ್ಯವಲ್ ಐಡಿ ಹೊಂದಬಹುದಾಗಿದೆ. ವರ್ಚ್ಯವಲ್ ಐಡಿ ಸಂಖ್ಯೆಯನ್ನು ಎಷ್ಟು ಬಾರಿಯಾದರೂ ಬದಲಿಸಬಹುದು. ಹೊಸ ವರ್ಚ್ಯುವಲ್ ಐಡಿ ಪಡೆಯುತ್ತಿದ್ದಂತೆಯೇ ಹಳೆಯದು ತನ್ನಿಂತಾನೇ ನಿಷ್ಕ್ರಿಯವಾಗುತ್ತದೆ.

   ಆಧಾರ್ ಕಡ್ಡಾಯ!

   ಆಧಾರ್ ಕಡ್ಡಾಯ!

   ಒಂದು ವಿಷಯ ನೆನಪಿರಲಿ, ಈ ವರ್ಚ್ಯವಲ್ ಐಡಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ. ಆಧಾರ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ಐಡಿ ನೀಡಲಾಗುತ್ತದೆ. ಜೂನ್ 1, 2018 ರಿಂದ ಎಲ್ಲಾ ಏಜೆನ್ಸಿಗಳೂ ವರ್ಚ್ಯುವಲ್ ಐಡಿಯನ್ನು ಪಡೆಯುವುದು ಕಡ್ಡಾಯವಾಗುತ್ತದೆ.

   ಆಧಾರ್ ಸುರಕ್ಷತೆಗೆ ಎರಡು ಕ್ರಮ ಘೋಷಿಸಿದ ಯುಐಎಡಿಐ

   ವರ್ಚ್ಯುವಲ್ ಐಡಿಯ ಉಪಯೋಗವೇನು?

   ವರ್ಚ್ಯುವಲ್ ಐಡಿಯ ಉಪಯೋಗವೇನು?

   ಆಧಾರ್ ಕಾರ್ಡಿಗೆಂದು ವ್ಯಕ್ತಿ ನೀಡುವ ಬೆರಳಚ್ಚು ಮುಂತಾದ ದಾಖಲೆಗಳಿಂದ ಖಾಸಗೀತನಕ್ಕೆ ದಕ್ಕೆ ಬರುತ್ತದೆ ಎಂಬುದು ಹಲವರ ವಾದ. ಅದಕ್ಕೆಂದೇ ಆಧಾರ್ ಪ್ರಕರಣವಿನ್ನೂ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥವಾಗದೆ ಉಳಿದಿದೆ. ಆದರೆ ವರ್ಚ್ಯುವಲ್ ಐಡಿಯಲ್ಲಿ ನಮ್ಮ ನೈಜ ಆಧಾರ್ ಸಂಖ್ಯೆಯನ್ನು ಬಳಸದಿರುವುದರಿಂದ ಖಾಸಗಿ ಮಾಹಿತಿ ಸೋರಿಕೆಯಾಗುವುದಿಲ್ಲ. ಗೊತ್ತು ಗುರಿ ಇಲ್ಲದ ಏಜೆನ್ಸಿಗಳು, ಕಂಪೆನಿಗಳು ಸಣ್ಣ ಪುಟ್ಟ ಕೆಲಸಗಳಿಗೂ ಈಗೀಗ ಆಧಾರ್ ದಾಖಲೆ ಕೇಳುತ್ತವೆ. ಅಂಥ ಸಂದರ್ಭದಲ್ಲಿ ಆಧಾರ್ ಸುರಕ್ಷತೆಯ ಕುರಿತು ಆತಂಕ ಏಳುವುದು ಸಹಜ. ಆದರೆ ಈ ವರ್ಚ್ಯುವಲ್ ಐಡಿ ನೀಡುವುದರಿಂದ ಗ್ರಾಹಕನ ಕುರಿತು ಕಂಪೆನಿಗೆ ಅನಗತ್ಯ ಮಾಹಿತಿಗಳ್ಯಾವವೂ ಲಭ್ಯವಾಗುವುದಿಲ್ಲ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   To keep privacy of Aadhaar, the Unique Identification Authority of India (UIDAI) has introduced a temporary 16-digit virtual ID for Aadhaar holders that can be used in place of their Aadhaar numbers for authentication purposes. Here is a details about how to get this virtual id and what are the benifits of this. And how it helps to avoid misuse of Aadhaar number.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ