Bengaluru Real Estate: ಬೆಂಗಳೂರಲ್ಲಿ ಮನೆ ಮಾರಾಟ, ಖರೀದಿಗೆ ಶಾಕಿಂಗ್ ರಿಪೋರ್ಟ್, ಏನದು ?
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 8 ನಗರಗಳಲ್ಲಿ ಮನೆ ಮಾರಾಟದಲ್ಲಿ ಗಣನೀಯ ಪ್ರಮಾಣದ ಇಳಿಕೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಮನೆಗಳ ಮಾರಾಟ ಅಥವಾ ಖರೀದಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 8 ನಗರಗಳಲ್ಲಿ ಇಳಿಕೆ ಕಂಡಿದೆ ಎಂದು ಡಿಜಿಟಲ್ ರಿಯಲ್ ಎಸ್ಟೇಟ್ ವಹಿವಾಟು ಹಾಗೂ ಸಲಹಾ ಸಂಸ್ಥೆಯಾಗಿರುವ PropTiger.com ವರದಿ ಮಾಡಿದೆ. ಈಚೆಗಷ್ಟೇ ಬೆಂಗಳೂರು ಸೇರಿದಂತೆ ದೇಶದ ಮೆಟ್ರೋ ಸಿಟಿಗಳಲ್ಲಿ ಫ್ಲಾಟ್ ಹಾಗೂ ಮನೆಗಳ ಬೆಲೆ ಭರ್ಜರಿ ಹೆಚ್ಚಳವಾಗಿದೆ ಎನ್ನುವ ವರದಿ ಬಂದಿತ್ತು. ಈ ವರದಿಯಿಂದ ಮನೆ ಹಾಗೂ ಫ್ಲಾಟ್ ಖರೀದಿ ಮಾಡುವ ಲೆಕ್ಕಾಚಾರದಲ್ಲಿ ಇದ್ದವರು ಆಘಾತಕ್ಕೆ ಒಳಗಾಗಿದ್ದರು. ಇದೀಗ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಹಾಗೂ ಅಭಿವೃದ್ಧಿ ಹೊಂದಿರುವ ನಗರಗಳಲ್ಲಿ ಮನೆಗಳ ಬೆಲೆ ಶೇಕಡ 26ರಷ್ಟು ಕುಸಿತವಾಗಿರುವುದು ವರದಿಯಾಗಿದೆ. ಹಾಗಾದರೆ ಬೆಂಗಳೂರು ಸೇರಿದಂತೆ ವಿವಿಧೆಡೆ ಮನೆ ಮಾರಾಟ ಹಾಗೂ ಖರೀದಿ ಇಳಿಕೆಗೆ ಕಾರಣವೇನು ಎನ್ನುವುದನ್ನು ತಿಳಿಯೋಣ.
ಬೆಂಗಳೂರು ಸೇರಿದಂತೆ ದೇಶದ ಪ್ರತಿಷ್ಠಿತ ನಗರಗಳಲ್ಲಿ ಮನೆ ಹಾಗೂ ಫ್ಲಾಟ್‌ಗಳನ್ನು ಖರೀದಿ ಮಾಡುವುದು ದಿಢೀರ್ ಕುಸಿತ ಕಂಡಿದೆ. ಭಾರತದ 8 ಪ್ರಮುಖ ನಗರಗಳಲ್ಲಿ ಮನೆ ಮಾರಾಟವು 2024ರ ಅಕ್ಟೋಬರ್ ಹಾಗೂ ಡಿಸೆಂಬರ್ ಅವಧಿಯಲ್ಲಿ ಕಳೆದ ವರ್ಷದ ಅಂದರೆ 2023ರ ಇದೇ ಮೂರು ತಿಂಗಳ ಅವಧಿಗೆ ಹೋಲಿಕೆ ಮಾಡಿದರೆ ಬರೋಬ್ಬರಿ ಶೇ.26 ರಷ್ಟು ಕುಸಿತ ಕಂಡಿದೆ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಮನೆಗಳನ್ನು ಖರೀದಿ ಮಾಡುವುದಕ್ಕೆ ಜನ ಹಿಂದೇಟು ಹಾಕ್ತಿದ್ದಾರೆ. ಅದಕ್ಕೆ ಕಾರಣವೇನು ಅಂತ ನೋಡೋಣ..

ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಮನೆ ಮಾರಾಟದ ಬೆಲೆ ಕುಸಿತ ಕಂಡಿದೆ. ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯದ ಪ್ರಮುಖ ನಗರಗಳು ಈ ಪಟ್ಟಿಯಲ್ಲಿ ಇವೆ. ಇನ್ನು ಹರಿಯಾಣ ಹಾಗೂ ಮಹಾರಾಷ್ಟ್ರದಲ್ಲಿ ಈಚೆಗೆ ವಿಧಾನಸಭೆ ಚುನಾವಣೆ ನಡೆದಿತ್ತು. ಈ ಎರಡೂ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ಹಾಗೂ ಇಲ್ಲಿ ಆಸ್ತಿ ಬೆಲೆ ಹೆಚ್ಚಳವಾಗಿರುವುದರಿಂದ ಮನೆ ಮಾರಾಟಕ್ಕೆ ಹೊಡೆತ ಬಿದ್ದಿದೆ. ದೆಹಲಿ ಹಾಗೂ ಎನ್‌ಸಿಆರ್ ಹೊರತುಪಡಿಸಿ ಉಳಿದ ಪ್ರಮುಖ ನಗರಗಳಲ್ಲಿ ಮನೆ ಮಾರಾಟ ಕುಸಿತ ಕಂಡಿದೆ ಎನ್ನಲಾಗಿದೆ. ಈ ರಾಜ್ಯದಲ್ಲಿ ಚುನಾವಣೆಗಳು ನಡೆದ ಹಿನ್ನೆಲೆಯಲ್ಲಿ ಮನೆ ಮಾರಾಟಕ್ಕೆ ಹಿನ್ನಡೆ ಆಗಿದೆ. 2024ರಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಬರೋಬ್ಬರಿ ಶೇ 33% ರಷ್ಟು ಮನೆ ಮಾರಾಟ ಕುಸಿತ ಕಂಡಿದೆ .
ಇನ್ನು ದೇಶದಲ್ಲೇ ದೆಹಲಿ ಹಾಗೂ ಮಹಾರಾಷ್ಟ್ರದ ಪುಣೆಯಲ್ಲಿ ಮನೆ ಮಾರಾಟ ಪ್ರಮಾಣ ತುಸು ಹೆಚ್ಚಳವಾಗಿದೆ ಅಂತ ಹೇಳಲಾಗಿದೆ.
ಹಲವು ಕಾರಣ: ಇನ್ನು ಮನೆ ಹಾಗೂ ಆಸ್ತಿ ಮಾರಾಟದಲ್ಲಿ ಹಿನ್ನಡೆಯಾಗಿರುವುದಕ್ಕೆ ಹಲವು ಕಾರಣಗಳನ್ನು ಕೊಡಲಾಗಿದೆ. ಮುಖ್ಯವಾಗಿ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಉಂಟಾದ ಅನಿಶ್ಚಿತತೆ. ಡಾಲರ್‌ನ ಮುಂದೆ ರೂಪಾಯಿ ನಿರಂತವಾಗಿ ಕುಸಿತ ಕಂಡಿದ್ದು ಹಾಗೂ ದೇಶದಲ್ಲಿನ ಷೇರುಮಾರುಕಟ್ಟೆಯ ಏರಿಳಿತ. ರಿಯಲ್ ಎಸ್ಟೇಟ್‌ನಲ್ಲಿ ಏಜೆನ್ಸಿದಾರರು ಹಾಗೂ ಮನೆ ಮಾರಾಟ ಮಾಡುವವರು ಕಾದು ನೋಡುವ ತಂತ್ರವನ್ನು ಅನುಸರಿಸಿದ್ದು ಸೇರಿದಂತೆ ಹಲವು ಕಾರಣಗಳಿಂದ ಮನೆ ಮಾರಾಟದಲ್ಲಿ ಕುಸಿತ ಕಂಡಿದೆ ಎಂದು ಹೇಳಲಾಗಿದೆ.
ಬೆಂಗಳೂರಲ್ಲಿ ಮನೆ ಮಾರಾಟ ಕಡಿಮೆ: ಇನ್ನು ಆಘಾತಕಾರಿ ಹಾಗೂ ಅಚ್ಚರಿಯ ವಿಷಯವೆಂದರೆ ಕಳೆದ ವರ್ಷ ಹಾಗೂ ಈ ವರ್ಷದ ಪ್ರಾರಂಭದ ಮೊದಲ ವಾರದಲ್ಲಿ ಮನೆಗಳ ಮಾರಾಟವು ಬೆಂಗಳೂರಿನಲ್ಲೂ ಕುಸಿತ ಕಂಡಿದೆ. ಬೆಂಗಳೂರಿನಲ್ಲಿ ಯಾವ ಕಾರಣಕ್ಕೆ ಮನೆ ಮಾರಾಟ ಕಡಿಮೆ ಆಗಿದೆ ಎನ್ನುವುದು ನಿಖರವಾಗಿ ತಿಳಿದು ಬಂದಿಲ್ಲ. ಆದರೆ ಬೆಂಗಳೂರಿನಲ್ಲಿ ಮನೆ ಹಾಗೂ ಫ್ಲಾಟ್‌ಗಳ ಬೆಲೆ ಏರಿಕೆಯಾಗಿದ್ದೇ ಇದಕ್ಕೆ ಕಾರಣ ಅಂತ ವಿಶ್ಲೇಷಿಸಲಾಗಿದೆ. ಬೆಂಗಳೂರಿನಲ್ಲಿ 2023ನೇ ಸಾಲಿಗೆ ಹೋಲಿಕೆ ಮಾಡಿದರೆ ಶೇ 23ರಷ್ಟು ಮನೆ ಮಾರಾಟದಲ್ಲಿ ಇಳಿಕೆ ಕಂಡು ಬಂದಿದೆ.
ದಕ್ಷಿಣದಲ್ಲಿ ಹೇಗಿದೆ ಮನೆ ಮಾರಾಟ: ಇನ್ನು ದಕ್ಷಿಣ ಭಾರತದ ನಗರಗಳಲ್ಲಿ ಬೆಂಗಳೂರಿನಲ್ಲಿ ಮಾತ್ರ ಮನೆ ಮಾರಾಟ ತುಸು ಹೇಳಿಕೊಳ್ಳುವಂತೆ ಇದೆ. ಬೆಂಗಳೂರಿನಲ್ಲಿ 13,236 ಯೂನಿಟ್‌ನಷ್ಟು ಮಾರಾಟವಾಗಿದೆ. ಹೈದರಾಬಾದ್‌ನಲ್ಲಿ ಶೇ 36% ಮನೆ ಮಾರಾಟ ಇಳಿಕೆಯಾಗಿದ್ದರೆ. ಚೆನ್ನೈನಲ್ಲಿ ಶೇ 5% ಮಾರಾಟ ಇಳಿಕೆ ಆಗಿರುವುದು ವರದಿಯಾಗಿದೆ.












Click it and Unblock the Notifications