School Holidays: ಶಾಲೆಗಳಿಗೆ 8 ದಿನ ರಜೆ
School Holiday: 2025ರ ವರ್ಷದ ಆರಂಭದಿಂದಲೇ ಕೆಲವೆಡೆ ವಿದ್ಯಾರ್ಥಿಗಳಿಗೆ ಸಾಲು ರಜೆಗಳೇ ಸಿಕ್ಕಿವೆ. ಫೆಬ್ರವರಿ ತಿಂಗಳು ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಮಾರ್ಚ್‌ನಲ್ಲಿ ಈ ಭಾಗಗಲ್ಲಿ ಶಾಲೆಗಳಿಗೆ 8 ದಿನಗಳು ರಜೆಯಿವೆ. ಹಾಗಾದರೆ ಯಾಕೆ ಹಾಗೂ ಎಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ 2025ರ ಜನವರಿ ಆರಂಭದಿಂದಲೂ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವೇ ಸಿಕ್ಕಂತಾಗಿದೆ. ಹಾಗೆಯೇ ಇದೀಗ ಮಾರ್ಚ್ ತಿಂಗಳ ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಬಾಕಿಯಿದ್ದು, ಈ ತಿಂಗಳಿನಲ್ಲಿ ಈ ಭಾಗದಲ್ಲಿ 8 ದಿನ ರಜೆ ಇರಲಿದೆ.

ಹರಿಯಾಣದ ಶಾಲಾ ವಿದ್ಯಾರ್ಥಿಗಳಿಗೆ ದೊಡ್ಡ ಶುಭ ಸುದ್ದಿಯೊಂದು ಇದೆ. ಹರಿಯಾಣ ಸರ್ಕಾರ ಮಾರ್ಚ್ ತಿಂಗಳ ರಜಾದಿನಗಳ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ. ಇದರನ್ನವಯ ಮಾರ್ಚ್ ತಿಂಗಳಿನಲ್ಲಿ ಶಾಲೆಗಳು 8 ದಿನಗಳ ಕಾಲ ಮುಚ್ಚಲ್ಪಡುತ್ತವೆ ಎಂದು ತಿಳಿದುಬಂದಿದೆ.
ಮಾರ್ಚ್ ತಿಂಗಳ ರಜೆಗಳ ಪಟ್ಟಿ
* ಮಾರ್ಚ್ 02 - ಭಾನುವಾರ
* ಮಾರ್ಚ್ 08 - ಎರಡನೇ ಶನಿವಾರ
* ಮಾರ್ಚ್ 09 - ಭಾನುವಾರ
* ಮಾರ್ಚ್ 14 - ಹೋಳಿ, ಶುಕ್ರವಾರ
* ಮಾರ್ಚ್ 16 - ಭಾನುವಾರ
* ಮಾರ್ಚ್ 23 - ಭಾನುವಾರ
* ಮಾರ್ಚ್ 30 - ಭಾನುವಾರ
* ಮಾರ್ಚ್ 31 - ಈದ್ ಉಲ್ ಫಿತರ್, ಸೋಮವಾರ
ಶಾಲಾ ಸಮಯ: ಬೆಳಗ್ಗೆ 8 ರಿಂದ ಮಧ್ಯಾಹ್ನ 2:30ರ ವರೆಗೆ ಈ ರಾಜ್ಯದಲ್ಲಿ ತರಗತಿಗಳು ನಡೆಯುತ್ತವೆ. ಇನ್ನು ಹರಿಯಾಣದಲ್ಲಿ ಮಾರ್ಚ್ ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗಳು ಮುಗಿದ ಬಳಿಕ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ. ನಂತರ, ಮುಂದಿನ ಹಂತದಲ್ಲಿ ಶಾಲೆಗಳು ಏಪ್ರಿಲ್ 01, 2025ರಿಂದ ತೆರೆಯಲ್ಪಡುತ್ತವೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ಇದೀಗ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಪ್ರತಿ ನಿತ್ಯವೂ ಕೊಟ್ಯಾಂತರ ಮಂದಿ ಭೇಟಿ ಕೊಡುತ್ತಿದ್ದಾರೆ. ಹೀಗೆ ಭಾರೀ ಸಂಖ್ಯೆಯಲ್ಲಿ ಬರುವ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಗ್‌ರಾಜ್ ಜಿಲ್ಲಾಡಳಿತ ಈ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಅನ್ವಹಿಸುವಂತೆ ರಜೆಯ ಆದೇಶವನ್ನು ಹೊರಡಿಸಿದೆ.
ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ 2025ರ ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮನಿಸುತ್ತಲೇ ಇದ್ದಾರೆ. ಹೀಗೆ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಈ ಧಾರ್ಮಿಕ ನಗರದ ಸಂಚಾರ ಮತ್ತು ಇತರ ವ್ಯವಸ್ಥೆಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಈ ಭಾಗದ ಶಾಲೆಗಳಿಗೆ ರಜೆಯನ್ನು ಫೆಬ್ರವರಿ 20ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಫೆಬ್ರವರಿ 26ರ ವರೆಗೆ ಮಹಾಕುಂಭ ಮೇಳ ನಡೆಯುತ್ತಿದ್ದು, ಪ್ರತಿದಿನ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆ ಇಲ್ಲಿನ ಜಿಲ್ಲಾಡಳಿತವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಆ ಪ್ರಕಾರ, ಪ್ರಯಾಗ್‌ರಾಜ್‌ನಲ್ಲಿ ಫೆಬ್ರವರಿ 20ರ ವರೆಗೆ 8ನೇ ತರಗತಿವರರಗಿನ ಎಲ್ಲಾ ಶಾಲೆಗಳು ಮುಚ್ಚಲ್ಪಡುತ್ತವೆ. ಆದರೆ ಆನ್‌ಲೈನ್ ತರಗತಿಗಳು ನಡೆಯುತ್ತವೆ ಎಂದು ತಿಳಿಸಿದೆ.












Click it and Unblock the Notifications