School Holiday: ಫೆಬ್ರವರಿ 14, 15 & 16ರಂದು ಶಾಲಾ-ಕಾಲೇಜುಗಳಿಗೆ ರಜೆ

School Holiday: ಸಾಮಾನ್ಯವಾಗಿ ಹಬ್ಬಗಳು, ವಿದ್ಯಾರ್ಥಿಗಳಿಗೆ ಪ್ರಕೃತಿ ವಿಕೋಪದಿಂದ ತೊಂದರೆ ಆಗುವಂತಹ ಮುನ್ಸೂಚನೆ ಸಮಯದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಆದರೆ, ಇದೀಗ ಈ ಭಾಗಗಳಲ್ಲಿ 2025ರ ಫೆಬ್ರವರಿ 14, 15 ಮತ್ತು 16 ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಗಾದರೆ ಕಾರಣ ಏನು ಹಾಗೂ ಎಲ್ಲಲ್ಲಿ ಎನ್ನುವ ಸಂಪೂರ್ಣ ಮಾಹಿತಿನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಜೆ ಬಂತೆಂದರೆ ಸಾಕು ವಿದ್ಯಾರ್ಥಿಗಳ ಮುಖದಲ್ಲಿ ಮಂದಾಹಾಸ ಮೂಡಿಬಿಡುತ್ತದೆ. ಹಾಗೆಯೇ ಇದೀಗ ಈ ಭಾಗಗಳಲ್ಲಿ ಫೆಬ್ರವರಿ 14, 15 ಮತ್ತು 16 ಮೂರು ದಿನ ರಜೆ ಘೋಷಿಸಲಾಗಿದೆ. ತೆಲಂಗಾಣ ರಾಜ್ಯದಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಸರಣಿ ರಜೆಗಳು ಬರುವ ಸಾಧ್ಯತೆಗಳು ಇವೆ.

Holiday to School and College in These Parts on February 14 15 and 16

ತೆಲಂಗಾಣದಲ್ಲಿ ಸರ್ಕಾರವು ಫೆಬ್ರವರಿ 14ರಂದು ಶಬ್-ಎ-ಬರಾತ್ ಸಂದರ್ಭದಲ್ಲಿ ಐಚ್ಛಿಕ ರಜೆಯನ್ನು ಘೋಷಿಸಿದೆ. ಕೆಲವು ಶಾಲೆಗಳು ರಜೆ ಘೋಷಿಸದಿದೆ. ಈ ದಿನ ರಾಜ್ಯದಲ್ಲಿ ಹೆಚ್ಚಿನ ಶಾಲೆಗಳಿಗೆ ರಜೆ ಇರಲಿದೆ. ಅದರಲ್ಲೂ ಹೈದರಾಬಾದ್‌ನ ಹಳೆಯ ನಗರ ಪ್ರದೇಶದಲ್ಲಿನ ಶಾಲಾ-ಕಾಲೇಜುಗಳಿಗೆ ಫೆಬ್ರವರಿ 14ರಂದು ರಜೆ ಇರಲಿದೆ. ಇತರ ಇಲಾಖೆಗಳಿಗೂ ರಜೆ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಫೆಬ್ರವರಿ 14 ರಂದು ಪ್ರೇಮಿಗಳ ದಿನ ಇದ್ದು, ಆ ದಿನ ಐಚ್ಛಿಕ ರಜೆ ಇರುವುದರಿಂದ ಕಾಲೇಜು ಯುವಕರಲ್ಲಿ ಸಂತಸ ಮೂಡಿಸಿದೆ ಎನ್ನಲಾಗುತ್ತಿದೆ. ಅದು ಎಲ್ಲಾ ಕಡೆ ಈ ದಿನ ರಜೆ ಇರುವುದಿಲ್ಲ, ಕೆಲವೆಡೆ ಮಾತ್ರ ಶಾಲಾ-ಕಾಲೇಜು ಹಾಗೂ ಕಚೇರಿಗಳಿಗೆ ರಜೆ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಫೆಬ್ರವರಿ 15 ರಂದು ಬಂಜಾರರು ಪೂಜಿಸುವ ಸಂತ ಸೇವಾಲಾಲ್ ಮಹಾರಾಜರ ಜಯಂತಿಯ ಹಿನ್ನೆಲೆ ತೆಲಂಗಾಣದಲ್ಲಿ ಹೆಚ್ಚಿನ ಸಂಖ್ಯೆಯ ಬಂಜಾರ ಜನರು ಸೇರುತ್ತಾರೆ. ಹಿಂದಿನಿಂದಲೂ ಸಹ ಬಂಜಾರ ಸಮುದಾಯದವರು ಈ ದಿನವನ್ನು ಸರ್ಕಾರಿ ರಜಾ ದಿನವೆಂದು ಘೋಷಣೆ ಮಾಡಬೇಕೆಂದು ಒತ್ತಾಯ ಮಾಡಿದ್ದರು. ಇನ್ನು ಕಳೆದ ವರ್ಷ ಸರ್ಕಾರವು ಸೇವಾಲಾಲ್ ಜಯಂತಿಯನ್ನು ಐಚ್ಛಿಕ ರಜಾದಿನ ಎಂದು ಘೋಷಣೆ ಮಾಡಿತು. ಈಗ ಸಹ ಅದೇ ರಜೆ ನೀಡುವಂತೆ ಇಲ್ಲಿನ ಸಮುದಾಯದವರು ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಫೆಬ್ರವರಿ 16 ಭಾನುವಾರ ಆಗಿರುವುದರಂದ ಸಾಮಾನ್ಯವಾಗಿ ದೇಶದ ಎಲ್ಲಾ ರಾಜ್ಯಗಳ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಬ್ಯಾಂಕ್‌ಗಳಿಗೆ ರಜೆ ಇದ್ದೇ ಇರುತ್ತದೆ. ಒಟ್ಟಿನಲ್ಲಿ ಈ ಮೂಲಕ ತೆಲಂಗಾಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮೂರು ದಿನ ಸಿಕ್ಕಂತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+