School Holiday: ಏಪ್ರಿಲ್ 12, 13 ಮತ್ತು 14 ರಂದು ಶಾಲೆಗಳಿಗೆ ರಜೆ
School Holiday: ಈ ವರ್ಷ ಆರಂಭದಿಂದಲೂ ಇಲ್ಲಿವರೆಗೂ ಹಲವೆಡೆ ಶಾಲೆಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಹಾಗೆಯೇ ಇದೀಗ ಮತ್ತೆ ಸತತ ಮೂರು ದಿನ ರಜೆಗಳನ್ನು ಘೋಷಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಕದಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆಗಳು, ವಿಶೇಷ ಕಾರ್ಯಕ್ರಮಗಳ ವೇಳೆ ಶಾಲೆಗಳಿಗೆ ರಜೆಗಳನ್ನು ಘೋಷಣೆ ಮಾಡಲಾಗಿದೆ. ಈ ಮೂಲಕ ಈವರೆಗೂ ಸಾಲು ರಜೆಗಳೇ ಸಿಕ್ಕಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ. ರಾಜ್ಯದಲ್ಲಿ ಈಗಾಗಲೇ ಪರೀಕ್ಷೆಗಳು ಕೂಡ ಮುಕ್ತಾಯ ಆಗಿದ್ದು, ಕೆಲವೇ ದಿನಗಳಲ್ಲಿ ಬೇಸಿಗೆ ರಜೆ ಕೂಡ ಘೋಷಣೆಯಾಗಲಿದೆ.

ಮತ್ತೊಂದೆಡೆ ಬೇರೆ ರಾಜ್ಯಗಳಲ್ಲೂ ಕೂಡ ಈ ತಿಂಗಳಿನಿಂದಲೇ ಬೇಸಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಇದಕ್ಕೂ ಮುಂಚೆ ಕೆಲವು ರಜೆಗಳು ಬರಲಿವೆ. ತೆಲಂಗಾಣದಲ್ಲಿ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸತತ ಮೂರು ದಿನಗಳ ರಜೆ ಇರಲಿದೆ. ಕ್ರಮವಾಗಿ ಏಪ್ರಿಲ್ 12, 13 ಮತ್ತು 14 ರಂದು ರಜೆ ಘೋಷಣೆ ಮಾಡಲಾಗಿದೆ.
ಬೇಸಿಗೆ ರಜೆ ಏಪ್ರಿಲ್ 24ರಿಂದ ಪ್ರಾರಂಭ ಆಗಲಿವೆ. ಇದಕ್ಕೂ ಮುಂಚೆ ಏಪ್ರಿಲ್ 12, 13 ಮತ್ತು 14ರಂದು ಕ್ರಮವಾಗಿ ಶಾಲೆಗಳಿಗೆ ರಜೆ ಇರುತ್ತದೆ. ಏಪ್ರಿಲ್ 12ರ ಎರಡನೇ ಶನಿವಾರ ಮತ್ತು 13ರ ಭಾನುವಾರ ಇರುವುದರಿಂದ ಶಾಲೆಗಳಿಗೆ ರಜೆ ಇರಲಿದೆ. ಇನ್ನು ಏಪ್ರಿಲ್ 14ರಂದು ಸೋಮವಾರ ಅಂಬೇಡ್ಕರ್ ಜಯಂತಿ ಹಿನ್ನೆಲೆ ತೆಲಾಂಗಣ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಏಪ್ರಿಲ್ 10ರಂದು ಮಹಾವೀರ ಜಯಂತಿ, ಏಪ್ರಿಲ್ 18ರಂದು ಗುಡ್ ಫ್ರೈಡೇ ಆಚರಣೆ ಹಿನ್ನೆಲೆ ಈ ದಿನಗಳಂದು ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ. ಅಲ್ಲದೆ, ಏಪ್ರಿಲ್ 6, 13, 20, ಮತ್ತು 27 ಭಾನುವಾರಗಳು ಆಗಿದ್ದು, ಈ ದಿನಗಳಲ್ಲಿ ಎಲ್ಲಾ ಶಾಲೆಗಳು-ಕಾಲೇಜುಗಳು ಮತ್ತು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಈಗಾಗಲೇ ಏಪ್ರಿಲ್ 5ರಂದು ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು ಏಪ್ರಿಲ್ 24ರಿಂದ ರಾಜ್ಯದಲ್ಲಿ ಸಲಾಗಿದೆ ಶಾಲೆಗಳಿಗೆ ಬೇಸಿಗೆ ರಜೆ ಪ್ರಾರಂಭ ಆಗಲಿದೆ. ಒಟ್ಟಿನಲ್ಲಿ ಈ ವರ್ಷದ ಆರಂಭದಿಂದಲೂ ಇಲ್ಲಿಯವರೆಗೂ ಶಾಲೆಗಳಿಗೆ ಸಾಲು ರಜೆಗಳೇ ಸಿಕ್ಕಂತಾಗಿದೆ.
ಸಾರ್ವತ್ರಿಕ ರಜಾ ದಿನಗಳ ಪಟ್ಟಿ
* 2025ರ ಜನವರಿ 14ರ: ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
* 2025ರ ಜನವರಿ 26: ಗಣರಾಜ್ಯೋತ್ಸವ
* 2025ರ ಫೆಬ್ರವರಿ 26 ಬುಧವಾರ - ಮಹಾ ಶಿವರಾತ್ರಿ
* 2025ರ ಮಾರ್ಚ್ 31 ಸೋಮವಾರ: ಖುತುಬ್ ಎ ರಂಜಾನ್
* 2025ರ ಏಪ್ರಿಲ್ 10 ಗುರುವಾರ: ಮಹಾವೀರ ಜಯಂತಿ
* 2025ರ ಏಪ್ರಿಲ್ 14 ಸೋಮವಾರ: ಡಾ.ಬಿಆರ್ ಅಂಬೇಡ್ಕರ್ ಜಯಂತಿ
* 2025ರ ಏಪ್ರಿಲ್ 18 ಶುಕ್ರವಾರ: ಗುಡ್ ಫ್ರೈಡೆ
* 2025ರ ಏಪ್ರಿಲ್ 30 ಬುಧವಾರ: ಬಸವ ಜಯಂತಿ, ಅಕ್ಷಯ ತೃತೀಯ
* 2025ರ ಮೇ 01 ಗುರುವಾರ: ಕಾರ್ಮಿಕ ದಿನಾಚರಣೆ
* 2025ರ ಜೂನ್ 07 ಶನಿವಾರ: ಬಕ್ರೀದ್
* 2025ರ ಆಗಸ್ಟ್ 15 ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ
* 2025ರ ಆಗಸ್ಟ್ 27 ಬುಧವಾರ: ಗಣೇಶ ಚತುರ್ಥಿ
* 2025ರ ಸೆಪ್ಟೆಂಬರ್ 05 ಶುಕ್ರವಾರ: ಈದ್ ಮಿಲಾದ್
* 2025ರ ಅಕ್ಟೋಬರ್ 1 ಬುಧವಾರ: ಮಹಾನವಮಿ, ಆಯುಧಪೂಜೆ, ವಿಜಯದಶಮಿ
* 2025ರ ಅಕ್ಟೋಬರ್ 2 ಗುರುವಾರ: ಗಾಂಧಿ ಜಯಂತಿ
* 2025ರ ಅಕ್ಟೋಬರ್ 7 ಮಂಗಳವಾರ: ಮಹರ್ಷಿ ವಾಲ್ಮೀಕಿ ಜಯಂತಿ
* 2025ರ ಅಕ್ಟೋಬರ್ 20 ಸೋಮವಾರ: ನರಕ ಚತುರ್ದಶಿ
* 2025ರ ಅಕ್ಟೋಬರ್ 22 ಬುಧವಾರ: ಬಲಿಪಾಡ್ಯಮಿ, ದೀಪಾವಳಿ
* 2025ರ ನವೆಂಬರ್ 01 ಶನಿವಾರ -ಕನ್ನಡ ರಾಜ್ಯೋತ್ಸವ
* 2025ರ ಡಿಸೆಂಬರ್ 25 ಗುರುವಾರ: ಕ್ರಿಸ್ ಮಸ್












Click it and Unblock the Notifications