Bank Holiday: ಫೆಬ್ರವರಿ 19ರಂದು ಬ್ಯಾಂಕ್‌ಗಳಿಗೆ ರಜೆ

Bank Holiday: ಸಾಮಾನ್ಯವಾಗಿ ಸರ್ಕಾರಿ ರಜೆಗಳು, ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರದಂದು ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗುತ್ತಿದೆ. ಆದರೆ. ಇದೀಗ ಬೇರೆಯದ್ದೇ ಕಾರಣಕ್ಕೆ ಈ ಭಾಗದ ಬ್ಯಾಂಕ್‌ಗಳಿಗೆ ಇಂದು (ಫೆಬ್ರವರಿ 19) ರಜೆ ಇರಲಿದೆ. ಹಾಗಾದರೆ ಕಾರಣ ಹಾಗೂ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಎಲ್ಲಾ ರಾಷ್ಟ್ರೀಯ ಮತ್ತು ಸ್ಥಳೀಯ ಹಬ್ಬಗಳು, ವಾರ್ಷಿಕೋತ್ಸವಗಳು, ಭಾನುವಾರದಂದು, ಎರಡನೇ ಶನಿವಾರ ಹಾಗೂ ಪ್ರತಿ ತಿಂಗಳ ನಾಲ್ಕನೇ ಶನಿವಾರ ಬ್ಯಾಂಕ್‌ಗಳು ಕ್ಲೋಸ್‌ ಆಗಲಿದೆ. ಎಲ್ಲಾ ಬ್ಯಾಂಕ್ ಶಾಖೆಗಳು ಮೊದಲ, ಮೂರನೇ ಮತ್ತು ಐದನೇ ಶನಿವಾರದಂದು ತೆರೆದಿರುತ್ತವೆ. ಫೆಬ್ರವರಿ ತಿಂಗಳಲ್ಲಿ 14 ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

Holiday Declared to Banks on February 19

ಇನ್ನು ಇಂದು (ಫೆಬ್ರವರಿ 19) ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಬುಧವಾರ ಬ್ಯಾಂಕ್‌ಗಳು ಏಕೆ ಮುಚ್ಚಲ್ಪಡುತ್ತವೆ ಎಂಬುದು ಬ್ಯಾಂಕ್ ಗ್ರಾಹಕರ ಪ್ರಶ್ನೆಯಾಗಿದೆ. ಮಹಾರಾಷ್ಟ್ರದಲ್ಲಿ ಇಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆದರೆ ಉಳಿದ ಎಲ್ಲಾ ರಾಜ್ಯಗಳಲ್ಲೂ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ. ಗ್ರಾಹಕರಿಗೆ ನೆಟ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ಸೇವೆಗಳು ಎಂದಿನಂತೆ ಇರಲಿವೆ.

ಇಂದು ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಹಿನ್ನೆಲೆ ಬೇಲಾಪುರ, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕ್‌ಗಳು ಮುಚ್ಚಲಿವೆ. ಮಹಾರಾಷ್ಟ್ರದಾದ್ಯಂತ ಪ್ರತಿ ವರ್ಷ ಫೆಬ್ರವರಿ 19 ರಂದು ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆದ್ದರಿಂದ ಈ ಭಾಗದ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಶಿವಾಜಿ ಮಹಾರಾಜ್ ಜಯಂತಿ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಡಲಾಗಿದೆ. ಅಲ್ಲದೆ ಈ ದಿನವನ್ನು ಅವರ ಶೌರ್ಯವನ್ನು ಸ್ಮರಿಸಲು ಜನರಿಗೆ ಒಂದು ಉತ್ತಮ ಅವಕಾಶವಾಗಿದೆ. ಆದ್ದರಿಂದ, ಮಹಾರಾಷ್ಟ್ರದ ಎಲ್ಲಾ ಬ್ಯಾಂಕುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

2025ರ ಬ್ಯಾಂಕ್ ರಜಾ ದಿನಗಳ ಪಟ್ಟಿ

* 1 ಜನವರಿ 2025: ಹೊಸ ವರ್ಷ
* 6 ಜನವರಿ 2025: ಗುರು ಗೋಬಿಂದ್ ಸಿಂಗ್‌ ಜಯಂತಿ
* 12 ಜನವರಿ 2025: ಸ್ವಾಮಿ ವಿವೇಕಾನಂದ ಜಯಂತಿ
* 14 ಜನವರಿ 2025: ಮಕರ ಸಂಕ್ರಾಂತಿ, ಪೊಂಗಲ್
* 23 ಜನವರಿ 2025: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ- ತ್ರಿಪುರಾ, ಒಡಿಶಾ, ಪಂಜಾಬ್, ಸಿಕ್ಕಿಂ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ನವದೆಹಲಿ
* 26 ಜನವರಿ 2025: ಗಣರಾಜ್ಯೋತ್ಸವ
* 3 ಫೆಬ್ರವರಿ 2025: ವಸಂತ್ ಪಂಚಮಿ
* 12 ಫೆಬ್ರವರಿ 2025: ಗುರು ರವಿದಾಸ್ ಜಿ ಜಯಂತಿ
* 26 ಫೆಬ್ರವರಿ 2025: ಮಹಾಶಿವರಾತ್ರಿ
* 14 ಮಾರ್ಚ್ 2025: ಹೋಳಿ
* ಮಾರ್ಚ್ 30: ಯುಗಾದಿ
* 1 ಏಪ್ರಿಲ್ 2025: ಬ್ಯಾಂಕ್ ಖಾತೆಗಳ ವಾರ್ಷಿಕ ಮುಚ್ಚುವಿಕೆ
* 5 ಏಪ್ರಿಲ್ 2025: ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ
* 10 ಏಪ್ರಿಲ್ 2025: ಮಹಾವೀರ ಜಯಂತಿ
* 14 ಏಪ್ರಿಲ್ 2025: ತಮಿಳು ಹೊಸ ವರ್ಷ
* 7 ಮೇ 2025: ಗುರು ರವೀಂದ್ರನಾಥ ಠಾಕೂರರ ಜನ್ಮದಿನ
* 7 ಜೂನ್ 2025: ಈದ್-ಉಲ್-ಜುಹಾ (ಬಕ್ರೀದ್)
* 12 ಮೇ 2025: ಬುದ್ಧ ಪೂರ್ಣಿಮೆ
* 10 ಜೂನ್ 2025: ಶ್ರೀ ಗುರು ಅರ್ಜುನ್ ದೇವ್ ಜಿಯವರ ಹುತಾತ್ಮ ದಿನ
* 27 ಜೂನ್ 2025: ರಥಯಾತ್ರೆ
* 6 ಜುಲೈ 2025: ಮೊಹರಂ
* 9 ಆಗಸ್ಟ್ 2025: ರಕ್ಷಾ ಬಂಧನ
15 ಆಗಸ್ಟ್ 2025: ಸ್ವಾತಂತ್ರ್ಯ ದಿನಾಚರಣೆ
* 25 ಆಗಸ್ಟ್ 2025: ಶ್ರೀಮಂತ ಶಂಕರದೇವ ತಿಥಿ
* 26 ಆಗಸ್ಟ್ 2025: ವಿನಾಯಕ ಚತುರ್ಥಿ
* 5 ಸೆಪ್ಟೆಂಬರ್ 2025: ತಿರುವೋಣಂ
* 1 ಅಕ್ಟೋಬರ್ 2025: ಬ್ಯಾಂಕ್ ಖಾತೆಗಳ ಅರ್ಧ-ವಾರ್ಷಿಕ ಮುಚ್ಚುವಿಕೆ
* 2 ಅಕ್ಟೋಬರ್ 2025: ಗಾಂಧಿಜಯಂತಿ, ದಸರಾ
* 20 ಅಕ್ಟೋಬರ್ 2025: ದೀಪಾವಳಿ
* 22 ಅಕ್ಟೋಬರ್ 2025: ಗೋವರ್ಧನ ಪೂಜೆ
* 28 ಅಕ್ಟೋಬರ್ 2025: ಛತ್ ಪೂಜೆ
* 5 ನವೆಂಬರ್ 2025: ಗುರುನಾನಕ್ ಜಯಂತಿ
* 25 ಡಿಸೆಂಬರ್ 2025 ಕ್ರಿಸ್ಮಸ್ ದಿನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+