HP Election Results 2022 : ಹಿಮಾಚಲ ಪ್ರದೇಶ: ಅಸಲಿ ಆಟ ಆಗಲೇ ಶುರು ಹಚ್ಚಿಕೊಂಡ ಬಿಜೆಪಿ?

ಶಿಮ್ಲಾ, ಡಿ 8: ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ಗುಜರಾತ್ ಚುನಾವಣಾ ಫಲಿತಾಂಶ ಭಾರೀ ಆಘಾತವನ್ನು ನೀಡಿದೆ. ಇನ್ನು, ಹಿಮಾಚಲ ಪ್ರದೇಶದಲ್ಲಿ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ.

ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮಾಡಿದ ಮೋಡಿ ಗುಜರಾತ್ ಮತ್ತು ಹಿಮಾಚಲದಲ್ಲೂ ನಡೆಯಬಹುದು ಎನ್ನುವ ರಾಜಕೀಯ ಲೆಕ್ಕಾಚಾರ ಉಲ್ಟಾ ಹೊಡೆದಿದೆ.

Recommended Video

      Gujarat Election Results: 150ಕ್ಕೂ ಸೀಟ್ ಗೆಲ್ಲುವತ್ತ ಬಿಜೆಪಿ, 7 ನೇ ಬಾರಿ ಸರ್ಕಾರ ರಚನೆ ಖಚಿತ | Oneindia

      ಹಿಮಾಚಲ ಪ್ರದೇಶದ 68 ಕ್ಷೇತ್ರಗಳ ಸದ್ಯದ ಟ್ರೆಂಡ್ ಪ್ರಕಾರ ಯಾವ ಪಕ್ಷಕ್ಕೂ ಬಹುಮತ ಸಿಗುವ ಸಾಧ್ಯತೆಯಿಲ್ಲ. ಬಿಜೆಪಿ 34, ಕಾಂಗ್ರೆಸ್ 30 ಮತ್ತು ಪಕ್ಷೇತರರು ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದಾರೆ.

      Himachal Pradesh Election Trending Shows Possible Of Horse Trading After Result

      ಅಧಿಕಾರಕ್ಕೇರಲು 35ಸ್ಥಾನಗಳ ಅವಶ್ಯಕತೆ ಇರುವುದರಿಂದ, ಯಾವುದೇ ಪಕ್ಷಕ್ಕೂ ಇತರ ಪಕ್ಷ ಅಥವಾ ಪಕ್ಷೇತರರ ಬೆಂಬಲ ಬೇಕಿದೆ. ಹಾಗಾಗಿ, ಅಲ್ಲಿ ಚುನಾವಣಾ ಫಲಿತಾಂಶ ಸಂಪೂರ್ಣವಾಗಿ ಹೊರಬೀಳುವ ಮುನ್ನವೇ ಕುದುರೆ ವ್ಯಾಪಾರ ಆರಂಭವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

      ತಮ್ಮ ಶಾಸಕರು ಆಮಿಷಕ್ಕೆ ಒಳಗಾಗ ಬಹುದು ಎನ್ನುವ ಭೀತಿಯಲ್ಲಿರುವ ಕಾಂಗ್ರೆಸ್ ಮುಖಂಡರು, ತಮ್ಮ ಅಭ್ಯರ್ಥಿಗಳನ್ನು ಛತ್ತೀಸಗಢದ ರೆಸಾರ್ಟಿಗೆ ಶಿಫ್ಟ್ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

      ಹಿಮಾಚಲ ಪ್ರದೇಶದ ಅಸೆಂಬ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ನಾಯಕರು ಕುದುರೆ ವ್ಯಾಪಾರದ ಭೀತಿಯಲ್ಲಿದ್ದರು. "ಒಂದು ವೇಳೆ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಬಿಜೆಪಿಯು ಕೇಂದ್ರೀಯ ತನಿಖಾ ಸಂಸ್ಥೆಯಾದ ಇಡಿ ಮತ್ತು ಸಿಬಿಐ ಅನ್ನು ಬಳಸಿಕೊಂಡು ಕುದುರೆ ವ್ಯಾಪಾರ ನಡೆಸಬಹುದು"ಎಂದು ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ಭವಿಷ್ಯ ನುಡಿದಿದ್ದರು.

      "ನಮ್ಮ ಪಕ್ಷವು 35ಕ್ಕೂ ಹೆಚ್ಚು ಸ್ಥಾನವನ್ನು ಗೆದ್ದರೂ ಕೂಡಾ ಕಾಂಗ್ರೆಸ್ ಪಕ್ಷವೇ ಸರಕಾರ ರಚಿಸುತ್ತದೆ ಎಂದು ಹೇಳುವ ಪರಿಸ್ಥಿತಿಯಲ್ಲಿ ನಾವಿಲ್ಲ. ಅಧಿಕಾರಕ್ಕಾಗಿ ಬಿಜೆಪಿ ಯಾವಾ ಮಟ್ಟಕ್ಕಾದರೂ ಇಳಿಯಬಹುದು"ಎಂದು ಸಿಂಗ್ ಹೇಳಿದ್ದರು. ಸದ್ಯದ ಲಭ್ಯ ಮಾಹಿತಿಯ ಪ್ರಕಾರ, ಹಿಮಾಚಲದ ರಾಜಕೀಯ ಅದೇ ನಿಟ್ಟಿನಲ್ಲಿ ಸಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+