Hero Classic 125: ರಸ್ತೆಗಳಿಯಲು ಸಜ್ಜಾದ ರಾಯಲ್ ಎನ್‌ಫೀಲ್ಡ್ ಹಂಟರ್ ಹೋಲುವ ಕಡಿಮೆ ಬೆಲೆಯ ಹೀರೋ ಕ್ಲಾಸಿಕ್ 125-ಮಾಹಿತಿ
ಮೊದಲಿಗೆ "ಹೀರೋ ಹೋಂಡಾ" ಬೈಕ್ ಭಾರೀ ಸದ್ದು ಮಾಡಿದ್ದು, ಇದಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯೂ ಇತ್ತು. ಕಾಲಾಂತರದಲ್ಲಿ ಹೀರೋ ಮತ್ತು ಹೋಂಡಾ ಎರಡು ಕಂಪನಿಗಳಾಗಿ ಮಾರ್ಪಟ್ಟವು. ಈಗಲೂ ಕೂಡ ಮೈಲೇಜ್ ಹೆಚ್ಚಾಗಿರುವುದರಿಂದ ಈ ಎರಡು ಕಂಪನಿಗಳ ಬೈಕ್‌ಗಳಿಗೆ ಭಾರೀ ಬೇಡಿಕೆಯಿದೆ. ಇನ್ನು ಹೀರೋ ಕಂಪನಿ ಯುವಜನತೆಯನ್ನು ಸೆಳೆಯಲು ಹೊಸ ಹೊಸ ಮಾದರಿಯ ಬೈಕ್‌ಗಳನ್ನು ಹೊರತರುತ್ತಿದೆ. ಇದೀಗ ಥೇಟ್ ರಾಯಲ್ ಎನ್‌ಫೀಲ್ಡ್ ಹಂಟರ್ ಹೋಲುವಂತಹ ಹೆಚ್ಚು ಮೈಲೇಜ್ ಕೊಡುವ ಕಡಿಮೆ ಬೆಲೆಯ ಬೈಕ್ ಬಿಡುಗಡೆಗೆ ಮುಂದಾಗಿದೆ.
ಮೊದಲಿನಿಂದಲೂ ದೇಶದಲ್ಲೇ ಅಗ್ರಸ್ಥಾನದಲ್ಲಿರುವ ದ್ವಿಚಕ್ರ ವಾಹನ ತಯಾರಕ ಹೀರೋ ಕಂಪನಿಯು ಇದೀಗ ಹೊಸ ಮಾದರಿಯ Hero Classic 125 ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಹೊಸ ಹೊಸ ಸೇರ್ಪಡೆಗಳ ಮೂಲಕ ಅತ್ಯಾಕರ್ಷಕ ಬೈಕ್ ಆಗಿದೆ. ಅದರಲ್ಲೂ ಆಧುನಿಕ ವೈಶಿಷ್ಟ್ಯಗಳು ಮತ್ತು ಅಸಾಧಾರಣ ಇಂಧನ ದಕ್ಷತೆಯ ಪರಿಪೂರ್ಣ ವಿಶೇಷತೆಗಳನ್ನು ಒಳಗೊಂಡಿರುತ್ತದೆ. ಇದು 125 ಸಿಸಿ ಇಂಜಿನ್ ಹೊಂದಿರುವ ವಿಭಾಗದಲ್ಲಿ ಅತ್ಯಂತ ಪ್ರಬಲ ವಾಹನ ಅಂತಲೇ ಪ್ರಖ್ಯಾತಿ ಹೊಂದುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತಿದ್ದಾರೆ ತಯಾರಕರು.

ಹೀರೋ ಕ್ಲಾಸಿಕ್ 125 ಸಿಸಿ ಬೈಕ್‌ನ ವಿಶೇಷತೆಗಳು: ಟೈಮ್‌ಲೆಸ್ ಕಮ್ಯೂಟರ್ ವಿನ್ಯಾಸವನ್ನು ಹೊಂದಿದೆ. ರೌಂಡ್ ಶೇಪ್‌ನಲ್ಲಿ LED ಹೆಡ್‌ಲೈಟ್ ಅನ್ನಯ ಒಳಗೊಂಡಿದ್ದು, ಇದು ಉತ್ತಮ ಆಕರ್ಷಣೆಯಾಗಿದೆ. ಹ್ಯಾಲೊಜೆನ್ ಟರ್ನ್ ಇಂಡಿಕೇಟರ್‌ಗಳು ಮತ್ತು ಹ್ಯಾಲೊಜೆನ್ ಟೈಲ್‌ಲೈಟ್ ಲೈಟ್ ಅನ್ನಯ ಕೂಡ ಹೊಂದಿದ್ದು, ರಾತ್ರಿ ವೇಳೆ ಸಂಚಾರಕ್ಕೆ ಅನುಕೂಲವಾಗಿದೆ. ಇನ್ನು ಬೈಕ್ ನಯವಾದ ಹ್ಯಾಲೊಜೆನ್ ಟೆರಾಲೈಟ್ ಸೆಟಪ್ ಅನ್ನು ಒಳಗೊಂಡಿದೆ. ಇದು ರಾತ್ರಿಯ ವೇಳೆ ಹೆಚ್ಚು ಬೆಳಕನ್ನು ಒದಗಿಸಲಿದ್ದು, ರಾತ್ ವೇಳೆ ಸಂಚಾರ ಮಾಡುವಾಗ ಇದು ತುಂಬಾ ಸಹಾಯವಾಗಲಿದೆ.
ಈ ಬೈಕ್ ಕೇವಲ ನೋಡಲು ಉತ್ತಮವಾಗಿ ಕಾಣುತ್ತದೆ. ಅಲ್ಲದೆ, ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ಡಿಜಿಟಲ್ ಮೀಟರ್ ಕನ್ಸೋಲ್‌ನೊಂದಿಗೆ ಸುಸಜ್ಜಿತವಾಗಿದೆ. ಉತ್ತಮ ಬ್ರೇಕಿಂಗ್ ಸಿಸ್ಟಮ್ (CBS) ಸೇರ್ಪಡೆಯೊಂದಿಗೆ ಒಳಗೊಂಡಿದ್ದು, ಅತೀ ಬೇಗ ನಿಲ್ಲಿಸಲು ಬ್ರೇಕಿಂಗ್ ಸಿಸ್ಟಂ ಅನ್ನುವ ಇದು ಒಳಗೊಂಡಿದೆ. ಅಷ್ಟೇ ಅಲ್ಲದೆ ಪ್ರಯಾಣದಲ್ಲಿರುವಾಗ ಮೊಬೈಲ್ ಸಾಧನಗಳನ್ನು ಅಳವಡಿ ಮಾಡಲು ಸೂಕ್ತವಾದ USB ಚಾರ್ಜಿಂಗ್ ಪೋರ್ಟ್‌ನೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ.
* 3-ವಾಲ್ವ್ ಕಾನ್ಫಿಗರೇಶನ್ ಜೊತೆ 125 ಸಿಸಿ ಸಿಂಗಲ್-ಸಿಲಿಂಡರ್
* 4-ಸ್ಟ್ರೋಕ್ ಎಂಜಿನ್ ಇದ್ದು, ಇದನ್ನು ಯಾವುದೇ ದಾರಿಗಳಲ್ಲೂ ನ್ಯಾವಿಗೇಟ್ ಮಾಡಲು ಮತ್ತು ಸುಲಭವಾಗಿ ಸಂಚಾರ ಮಾಡಲು ಸಾಕಷ್ಟು ಶಕ್ತಿಯನ್ನು ನೀಡುವಂತೆ ತಯಾರು ಮಾಡಲಾಗಿದೆ.
* ಈ ಬೈಕ್ ಆರಾಮದಾಯಕ ರೈಡಿಂಗ್ ಅನುಭವವನ್ನ ನೀಡುತ್ತದೆ. ಮುಂಭಾಗದ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಶನ್ ಉಬ್ಬುಗಳು ಮತ್ತು ಕಿತ್ತೋದ ರಸ್ತೆಯಲ್ಲೂ ಕೂಡ ಇದನ್ನು ಯಾವುದೇ ತೊಂದರೆ ಇಲ್ಲದೆ ಆರಾಮದಾಯಕವಾಗಿ ಓಡಿಸಬಹುದು. ಇನ್ನು ಹಿಂಭಾಗವು ಸ್ಥಿರವಾದ ಸವಾರಿಗಾಗಿ ಹೈಡ್ರಾಲಿಕ್ ಸೆಟಪ್ ಅನ್ನು ಒಳಗೊಂಡಿದೆ.
* ಇದರ ಅಧಿಕೃತ ಮೈಲೇಜ್‌ನ ಬಗ್ಗೆ ಅಂಕಿಅಂಶಗಳ ಮಾಹಿತಿ ಇನ್ನು ಲಭ್ಯವಾಗಿಲ್ಲ. ಹೀರೋ ತನ್ನ ಇಂಧನ-ಸಮರ್ಥ ಎಂಜಿನ್‌ಗಳಿಗೆ ಹೆಸರುವಾಸಿ ಆಗಿದೆ. ಇನ್ನು ಕ್ಲಾಸಿಕ್ 125 ಪ್ರಭಾವಶಾಲಿ ಮೈಲೇಜ್ ನೀಡುತ್ತದೆ ಎಂದು ನಿರೀಕ್ಷಿಸಲಾಗಿದ್ದು, ಇದು ಸವಾರರಿಗೆ ಬಜೆಟ್ ಸ್ನೇಹಿ ಸವಾರರಿಗೆ ಉತ್ತಮ ಆಯ್ಕೆ ಆಗಿದೆ.
* ಶೀಘ್ರದಲ್ಲೇ ಈ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಗುರಿಯನ್ನು Hero ಹೊಂದಿದೆ. ಈ ಬೈಕ್‌ನ ಬೆಲೆಯು ಅತ್ಯಂತ ಸ್ಪರ್ಧಾತ್ಮಕವಾಗಿ ದೊರೆಯುವ ನಿರೀಕ್ಷೆಯಿದ್ದು, ಎಕ್ಸ್ ಶೋ ರೂಂ ಬೆಲೆ ಸುಮಾರು 55,000 ರೂಪಾಯಿ ಆಗಿರುತ್ತದೆ ಎನ್ನುವ ವರದಿಗಳು ಲಭ್ಯವಾಗಿದ್ದು, ಬಜೆಟ್ ಸ್ನೇಹಿ ಸವಾರರಿಗೆ ಹೇಳಿ ಮಾಡಿಸಿದ ಬೈಕ್ ಆಗಿದೆ.
ಒಟ್ಟಿನಲ್ಲಿ ಹೇಳಬೇಕಂದ್ರೆ ಈ ಮಾಡಲ್ ಬೈಕ್ ಇದೇ ಮೊದಲ ಬಾರಿಗೆ ಹೊರಬರುತ್ತಿದ್ದು, ಈ ಬೈಕ್‌ಗಾಗಿ ಹೊರಬರುವಿಕೆಗಾಗಿ ಯುವಪೀಳಿಗೆಯವರು ಕಾತರದಿಂದ ಕಾಯುತ್ತಿದ್ದಾರೆ.












Click it and Unblock the Notifications