ನಿಮ್ಮ ಒಂದು ಸಹಾಯ 5 ವರ್ಷದ ಈ ಬಾಲಕನಿಗೆ ಬೆಳಕಾಗಬಹುದು...

ಲಿಥೇಶನ್‌ ಹುಟ್ಟಿ 45 ದಿನಕ್ಕೆ ಹೃದಯ ಸಂಬಂಧಿ ಕಾಯಿಲೆ ಇರುವುದು ತಿಳಿದುಬಂದಿತ್ತು. ತಡಮಾಡದೆ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದರು, ಆದರೆ ವೈದ್ಯರು ಹೇಳಿದ ಮಾತು ಸಿಡಿಲು ಎರಗಿದಂತಾಗಿತ್ತು.

ನಿಮ್ಮ ಮಗುವಿಗೆ ಹೃದಯ ಸಂಬಂಧಿ ಸಮಸ್ಯೆ ಇದೆ, ಮಗು ಉಳಿಯಬೇಕೆಂದರೆ ನೀವು ಮೂರು ಶಸ್ತ್ರ ಚಿಕಿತ್ಸೆಯನ್ನು ಮಾಡಿಸಲೇಬೇಕು ಎಂದು ಹೇಳಿದ್ದರು. ಈಗಾಗಲೇ ಎರಡು ಶಸ್ತ್ರ ಚಿಕಿತ್ಸೆ ನಡೆದು ಈಗ ಮೂರನೇ ಶಸ್ತ್ರ ಚಿಕಿತ್ಸೆಯನ್ನು ನಡೆಸಬೇಕಿದೆ ಅದಕ್ಕೆ 3,50,000 ರೂ. ವೆಚ್ಚವಾಗಲಿದೆ ಎಂದು ಎಂಐಒಟಿ ಆಸ್ಪತ್ರೆ ತಿಳಿಸಿದೆ.

ಲಿಥೇಶನ್ ತಂದೆ ಸಂಪತ್ ಅವರು ಕನ್‌ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಆತನ ಕುಟುಂಬವು ರೋಗಗ್ರಸ್ಥ ಮಗುವಿನ ಮೇಲೆ ಹಣ ವ್ಯಯಿಸುವುದಿಲ್ಲ ಎಂದು ನೇರಾ ನೇರ ಹೇಳಿ ಕಳೆದ ನವೆಂಬರ್‌ನಲ್ಲಿ ಸಂಪತ್ ಪತ್ನಿಗೆ ವಿಚ್ಛೇದನ ನೀಡಿದ್ದ.

Help 5 Year Old Litheasan To Overcome Heart Problem

ಲಿಥೇಶನ್ ತಾಯಿ ಲಾವಣ್ಯ ಗ್ರ್ಯಾಜುಯೇಟ್ ಆಗಿದ್ದು, ಕೆಲಸಕ್ಕಾಗಿ ಅಲೆಯುತ್ತಿದ್ದಾರೆ, ಆದರೆ ಮಗುವಿಗೆ ತಾಯಿಯ ಅವಶ್ಯಕತೆ ಇರುವ ಕಾರಣ ಕೆಲಸಕ್ಕೆ ತೆರಳುವುದು ಕೂಡ ಕಷ್ಟವಾಗಿದೆ.

ಲಾವಣ್ಯ ಅವರ ತಂದೆ ತನ್ನ ಪಿಂಚಣಿ ಹಣವನ್ನು ಮಗಳು ಹಾಗೂ ಮೊಮ್ಮಗನ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಮೂರನೇ ಹಂತದ ಚಿಕಿತ್ಸೆ, ಐಸಿಯು, ಆಸ್ಪತ್ರೆಲ್ಲಿ ಉಳಿಯುವುದು ಸೇರಿ 3,50,000 ರೂ. ಹಣ ಬೇಕಾಗಿದ್ದು, ಧನ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.ಲಿತೇಶನ್ ಟ್ರಿಕ್ಯುಸ್ಪಿಡ್ ಅಟ್ರೇಶಿಯಾ, ಟ್ರಾನ್ಸಪೋಸ್ಡ್‌ ಗ್ರೇಟ್ ಆರ್ಟರೀಸ್/S/P DKS procedure +R BDG.

ದಯವಿಟ್ಟು ಮಗುವಿನ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವಾಗಿ, ಭವಿಷ್ಯ ಕಟ್ಟಲು ನೀವೊಂದು ಮೆಟ್ಟಿಲಾಗಿ ಎಂದು ವಿನಂತಿಸಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+