ಕ್ಲಿನಿಕಲ್ ಟ್ರಯಲ್ ಹಂತದಲ್ಲಿರುವಾಗಲೇ ಮುಂಗಡ ಹಣ ನೀಡಿ ಲಸಿಕೆ ಕಾಯ್ದಿರಿಸಿದ ಕೇಂದ್ರ ಸರ್ಕಾರ
ನವದೆಹಲಿ, ಜೂನ್ 03: ಶೀಘ್ರದಲ್ಲೇ ದೇಶದಲ್ಲಿ ಮತ್ತೊಂದು ಕೊರೊನಾ ಲಸಿಕೆ ಹೊರಬೀಳಲಿದೆ. ಲಸಿಕೆ ಕ್ಲಿನಿಕಲ್ ಪ್ರಯೋಗದ ಹಂತದಲ್ಲಿರುವಾಗಲೇ ಕೇಂದ್ರ ಸರ್ಕಾರವು ಮುಂಗಡ ಹಣ ಪಾವತಿಸಿ ಲಸಿಕೆಯನ್ನು ಕಾಯ್ದಿರಿಸಿದೆ.
ಮುಂದಿನ ಕೆಲವೇ ತಿಂಗಳುಗಳಲ್ಲಿ ಹೈದರಾಬಾದ್ ಮೂಲದ ಎಂ,ಎಸ್ ಬಯಾಲಜಿಕಲ್ ಇ ಲಿಮಿಟೆಡ್ ಕಂಪನಿಯಿಂದ ಕೊವಿಡ್ 19 ಲಸಿಕೆಯೊಂದು ಹೊರಬರಲಿದೆ. ಸುಮಾರು 30 ಕೋಟಿ ಡೋಸ್ ಲಸಿಕೆಗಾಗಿ ಕೇಂದ್ರ ಸರ್ಕಾರ ಈಗಾಗಲೇ ಮುಂಗಡ ಒಪ್ಪಂದ ಪೂರ್ಣಗೊಳಿಸಿದೆ.
ಇದರೊಂದಿಗೆ ಎಂಆರ್ಎನ್ಎ (ಮೆಸೆಂಜರ್ ರಿಬೊನ್ಯೂಕ್ಲಿಯಿಕ್ ಆಮ್ಲ) PTX-COVID19-B ಲಸಿಕೆಯನ್ನು ಭಾರತದಲ್ಲಿ ತಯಾರಿಸಲೂ ಕೂಡ ಬಯಾಲಜಿಕಲ್ ಇ ಕಂಪನಿಯು ಮುಂದಾಗಿದೆ.

ಇದಕ್ಕಾಗಿ ಕೆನಡಾ ಮೂಲದ ಪ್ರೊವಿಡೆನ್ಸ್ ಥೆರಪೂಟಿಕ್ಸ್ ಹೋಲ್ಡಿಂಗ್ಸ್ ಇಂಕ್ನೊಂದಿಗೆ ಸಹಯೋಗ ಹೊಂದಿದೆ. ಈ ಎಂಆರ್ಎನ್ಎ ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ಅಗತ್ಯವಿರುವ ಎಲ್ಲ ರೀತಿಯ ತಂತ್ರಜ್ಞಾನವನ್ನೂ ಪ್ರಾವಿಡೆನ್ಸ್ ಕಂಪನಿ ಬಯಾಲಜಿಕಲ್ ಇ ಕಂಪನಿಗೆ ವರ್ಗಾವಣೆ ಮಾಡಲಿದೆ.
ಈ ಲಸಿಕೆ 1 ಮತ್ತು 2ನೇ ಹಂತದ ಕ್ಲಿನಿಕಲ್ ಟ್ರಯಲ್ನ್ನು ಪೂರ್ಣಗೊಳಿಸಿದ್ದು, 3ನೇ ಹಂತದ ಕ್ಲಿನಿಕಲ್ ಪರೀಕ್ಷೆ ನಡೆಯುತ್ತಿದೆ.
ಬಯಾಲಜಿಕಲ್ ಇ ಅಭಿವೃದ್ಧಿ ಪಡಿಸಿದ ಈ ಲಸಿಕೆ ಆರ್ಬಿಡಿ ಪ್ರೋಟಿನ್ ಸಬ್ ಯೂನಿಟ್ ಲಸಿಕೆಯಾಗಿದ್ದು, 1 ಮತ್ತು 2ನೇ ಹಂತದ ಪರೀಕ್ಷೆಯಲ್ಲಿ ಸಕಾರಾತ್ಮಕ ಫಲಿತಾಂಶವನ್ನು ನೀಡಿದೆ.
ಇದೀಗ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದ್ದು, ಅದಾದ ಬಳಿಕ ಬಳಕೆಗೆ ಲಭ್ಯವಾಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಕಂಪನಿಯು ಏಪ್ರಿಲ್ನಲ್ಲಿ ಕೇಂದ್ರ ಔಷಧಗಳ ಮತ್ತು ಗುಣಮಟ್ಟ ನಿಯಂತ್ರಣ ಸಂಸ್ಥೆ ಅನುಮತಿ ನೀಡಿತ್ತು.
1500 ಕೋಟಿ ರೂಪಾಯಿ ಪಾವತಿ ಮಾಡಿದೆ, ಹೈದರಾಬಾದ್ನ ಬಯಾಲಜಿಕಲ್ ಇ ಲಿಮಿಟೆಡ್ ಕಂಪನಿಯು ಯುಎಸ್ನ ಬೇಲರ್ ಮೆಡಿಸಿನ್ ಕಾಲೇಜಿನ ಸಹಯೋಗದೊಂದಿಗೆ ಲಸಿಕೆ ತಯಾರಿಸುತ್ತಿದೆ.












Click it and Unblock the Notifications