Haryana Assembly Election 2024: ಚುನಾವಣೆ ಹೊತ್ತಲ್ಲೇ ಪೆರೋಲ್‌ಗೆ ಅರ್ಜಿ ಸಲ್ಲಿಸಿದ ಅಪರಾಧಿ ಗುರ್ಮೀತ್

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಮತ್ತು ಅತ್ಯಾಚಾರ ಕೇಸ್‌ನ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಿಂಗ್ 20 ದಿನಗಳ ತಾತ್ಕಾಲಿಕ ಪೆರೋಲ್ ನೀಡುವಂತೆ ಮನವಿ ಮಾಡಿದ್ದಾರೆ. ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ 20 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದಾರೆ.

ರಾಮ್ ರಹೀಮ್ ಪ್ರಸ್ತುತ ಅತ್ಯಾಚಾರ ಮತ್ತು ಪತ್ರಕರ್ತನ ಹತ್ಯೆಗಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಅಕ್ಟೋಬರ್ 5ರಂದು ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆಗೂ ಮುನ್ನವೇ ಅವರು ಪೆರೋಲ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆಯೂ ರಹೀಮ್ ಸಿಂಗ್ ಪೆರೋಲ್‌ ಪಡೆದಿದ್ದರು. ಈಗ ಹರಿಯಾಣ ವಿಧಾನಸಭಾ ಚುನಾವಣೆ ಹಿನ್ನೆಲೆ ಮತ್ತೊಮ್ಮೆ 20 ದಿನಗಳ ತಾತ್ಕಾಲಿಕ ಪೆರೋಲ್ ಕೋರಿದ್ದಾರೆ. ಅಕ್ಟೋಬರ್ 5ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆ ನಡೆಯಲಿದೆ.

Gurmeet Is A Criminal Who Applied For Parole During The Haryana Elections

ಈ ಹಿಂದೆ ರಾಮ್ ರಹೀಮ್ ಅವರು ಕಳೆದ ಆಗಸ್ಟ್ 13ರಂದು 21 ದಿನಗಳ ಪೆರೋಲ್‌ ಮೇಲೆ ಬಿಡುಗಡೆಯಾಗಿದ್ದರು. ಅಧಿಕಾರಿಗಳು 21 ದಿನಗಳ ಪೆರೋಲ್ ನೀಡಿದ ನಂತರ ಅವರು ಹರಿಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಿಂದ ಹೊರಗೆ ಬಂದಿದ್ದರು.

ಈ ಬಗ್ಗೆ ವಿವರಣೆ ಕೇಳಿರುವ ಹರಿಯಾಣದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡುವುದರ ಹಿಂದಿನ ಬಲವಾದ ಕಾರಣಗಳನ್ನು ವಿವರಿಸುವಂತೆ ಹರಿಯಾಣ ಸರ್ಕಾರವನ್ನು ಕೇಳಿದ್ದಾರೆ.

ಚುನಾವಣಾ ಸಮಯ ಆಗಿರುವುದರಿಂದ ಪೆರೋಲ್‌ ವಿನಂತಿ ಬಗ್ಗೆ ಚುನಾವಣಾ ಆಯೋಗ ಎಚ್ಚರಿಕೆ ವಹಿಸಿದೆ. ಜೈಲು ಆಡಳಿತವು ಚುನಾವಣಾ ಆಯೋಗಕ್ಕೆ ಅರ್ಜಿಯನ್ನು ಕಳುಹಿಸಬೇಕು. ಇದನ್ನು ಸ್ವೀಕರಿಸಿರುವ ಮುಖ್ಯ ಚುನಾವಣಾಧಿಕಾರಿ ಆಯೋಗದ ಮಾರ್ಗಸೂಚಿಗಳ ಪ್ರಕಾರ ಪೆರೋಲ್‌ಗೆ ಬಲವಾದ ಕಾರಣಗಳ ಕುರಿತು ಸ್ಪಷ್ಟೀಕರಣ ನೀಡುವಂತೆ ಕಾರಾಗೃಹ ಇಲಾಖೆಯನ್ನು ಕೇಳಿದ್ದಾರೆ.

Gurmeet Is A Criminal Who Applied For Parole During The Haryana Elections

ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ, ತೀವ್ರ ತುರ್ತು ಸಂದರ್ಭಗಳಲ್ಲಿ ಮಾತ್ರ ಪೆರೋಲ್ ಅನ್ನು ನೀಡಬೇಕು. ಹೆಚ್ಚುವರಿಯಾಗಿ, ಪೆರೋಲ್‌ನಲ್ಲಿರುವಾಗ ವ್ಯಕ್ತಿಯು ಯಾವುದೇ ಚುನಾವಣಾ-ಸಂಬಂಧಿತ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಹೇಳುತ್ತದೆ.

ರಾಮ್ ರಹೀಮ್ ಅವರಿಗೆ ಕೊನೆಯದಾಗಿ ಇದೇ ವರ್ಷದ ಆಗಸ್ಟ್‌ 13ರಂದು 21 ದಿನಗಳ ಪೆರೋಲ್‌ ನೀಡಲಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ರಹೀಮ್‌ ಹತ್ತನೇ ಬಾರಿಗೆ ತಾತ್ಕಾಲಿಕವಾಗಿ ಪೆರೋಲ್‌ ಮೇಲೆ ಬಿಡುಗಡೆಯಾಗಿದ್ದಾರೆ. ಇದೇ ವರ್ಷ ಅವರು ಒಟ್ಟು 50 ದಿನಗಳ ಪೆರೋಲ್ ಮೇಲೆ ಬಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಮ್‌ ಆದ್ಮಿ ಪಕ್ಷ (ಎಎಪಿ), ಹರಿಯಾಣ ಚುನಾವಣೆಯಲ್ಲಿ ಸಮೀಪಿಸುತ್ತಿರುವುದರಿಂದ ರಾಜಕೀಯ ಲಾಭ ಪಡೆಯಲು ಈ ಪೆರೋಲ್ ಬಳಸಿಕೊಳ್ಳಲು ರಾಮ್ ರಹೀಮ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದೆ.

Gurmeet Is A Criminal Who Applied For Parole During The Haryana Elections

ಒಟ್ಟಾರೆ ರಾಮ್ ರಹೀಮ್ ಚುನಾವಣೆ ಹೊತ್ತಲ್ಲೇ ಪೆರೋಲ್‌ಗೆ ಅರ್ಜಿ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ. ಚುನಾವಣಾ ಆಯೋಗವೂ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅಪರಾಧಿ ಸ್ಥಾನದಲ್ಲಿರುವ ರಾಮ್ ರಹೀಮ್ ಅವರಿಗೆ ಪೆರೋಲ್‌ ನೀಡಲು ಸಮ್ಮತಿಸುತ್ತಾ? ಅಥವಾ ನಿರಾಕರಿಸುತ್ತಾ? ಎನ್ನುವುದು ಸದ್ಯದಲ್ಲೇ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+