ಕಾಶ್ಮೀರ: ಹಿಮದಡಿ ಸಿಲುಕಿದ್ದ ಸೈನಿಕನ ಮೃತದೇಹ ಪತ್ತೆ
ಬಂಡಿಪೊರ, ಡಿಸೆಂಬರ್ 20: ಕಾಶ್ಮೀರದ ಬಂಡಿಪೊರದಲ್ಲಿ ಡಿಸೆಂಬರ್ 10 ರಂದು ನಡೆದ ಹಿಮಪಾತದಲ್ಲಿ ಹಿಮದಡಿ ಸಿಲುಕಿ ನಾಪತ್ತೆಯಾಗಿದ್ದ ಸೈನಿಕರೊಬ್ಬರ ಮೃತದೇಹ ಇಂದು(ಡಿ.20) ಪತ್ತೆಯಾಗಿದೆ. ಡಿ.18 ರಂದು ಇಬ್ಬರು ಸೈನಿಕರ ಮೃತದೇಹ ಪತ್ತೆಯಾಗಿತ್ತು.
ಇದೀಗ ಪತ್ತೆಯಾಗಿರುವುದು ರೈಫಲ್ ಮ್ಯಾನ್ ಮೂರ್ತಿ ಎಂಬುವವರ ಮೃತದೇಹ ಎಂಬ ಮಾಹಿತಿ ದೊರೆತಿದ್ದು, ಅವರ ಹಿನ್ನೆಲೆ ಕುರಿತು ಹೆಚ್ಚಿನ ವಿವರ ಲಭ್ಯವಾಗಿಲ್ಲ.

ಡಿ.18 ರಂದು ಪತ್ತೆಯಾಗಿದ್ದು ಶಿವ ಸಿಂಗ್ ಮತ್ತು ಪ್ರಾಮಾಣಿಕ್ ಎಂಬುವವರ ಮೃತದೇಹವಾಗಿತ್ತು. ಜಮ್ಮು ಕಾಶ್ಮೀರ ಭಾಗದಲ್ಲಿ ಇದೀಗ ಹಿಮಪಾತ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಈ ವರ್ಷಾರಂಭದಲ್ಲೇ ಭೀಕರ ಹಿಮಪಾತಕ್ಕೆ 15 ಯೋಧರು ಅಸುನೀಗಿದ್ದನ್ನು ಇಲ್ಲಿ ಸ್ಮರಿಸಬಹುದು.











Click it and Unblock the Notifications