ಫಸ್ಟ್ ನೈಟ್ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವರ!
ಇಲ್ಲೊಬ್ಬ ವರನು ಮೊದಲ ರಾತ್ರಿಯ ವಿಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಕೋಣಸೀಮೆ ಮಾರ್ಚ್ 2: ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಒಂದು ಮಹತ್ವದ ಘಟ್ಟ. ಈ ಮಂಗಳಕರ ಸಮಯವನ್ನು ಜೀವನದುದ್ದಕ್ಕೂ ನೆನಪಿಡಲು ವಧು-ವರರು ಸಾಕಷ್ಟು ತಯಾರಿಯೊಂದಿಗೆ ಮದುವೆ ಮಾಡಿಕೊಳ್ಳುತ್ತಾರೆ. ಅರಿಶಿಣ ಶಾಸ್ತ್ರ, ಬಳೆ ಶಾಸ್ತ್ರ, ವಧು-ವರನನ್ನಾಗಿ ಮಾಡುವ ಶಾಸ್ತ್ರ ಹೀಗೆ ಹಲವಾರು ಕಾರ್ಯಗಳು ಮದುವೆ ಸಮಯದಲ್ಲಿ ನಡೆಯುತ್ತವೆ.
ಈ ಅದ್ಬುತ ಕ್ಷಣವನ್ನು ನೆನಪಿಡಲು ವಿವಾಹ ಸಮಾರಂಭದ ವಿಡಿಯೋ ಹಾಗೂ ಫೋಟೋಗಳನ್ನು ತೆಗೆಯುವುದು ಮೊದಲಿನಿಂದಲೂ ರೂಢಿಸಿಕೊಂಡು ಬರಲಾಗಿದೆ. ಈ ವಿಡಿಯೋ ಹಾಗೂ ಫೋಟೋಗಳನ್ನು ಈಗಿನ ಕಾಲಮಾನಕ್ಕೆ ತಕ್ಕಂತೆ ರೆಕಾರ್ಡ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ.

ವಿಚಿತ್ರ ಅಂದರೆ ಇಲ್ಲೊಬ್ಬ ವರನು ಮೊದಲ ರಾತ್ರಿಯ ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ. ಆಂಧ್ರಪ್ರದೇಶದ ಡಾ.ಬಿ.ಆರ್.ಅಂಬೇಡ್ಕರ್ ಕೋಣಸೀಮೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮದುವೆಯ ನಂತರ ಮೊದಲ ರಾತ್ರಿಗೆ ಸಜ್ಜಾಗಿದ್ದ ವರನೊಬ್ಬ ತನ್ನ ಪತ್ನಿಯ ಜೊತೆ ಇರುವಾಗ ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾನೆ. ಜೊತೆಗೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಈ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ.
ಕಟ್ರೇನಿಕೋಣ ಪೊಲೀಸರ ಪ್ರಕಾರ, ಕೋನಸೀಮಾ ಜಿಲ್ಲೆಯ ಕಟ್ರೇನಿಕೋನ ಗ್ರಾಮದ ಹುಡುಗ (20) ಮತ್ತು ಹುಡುಗಿ (17) ಫೆಬ್ರವರಿ 8 ರಂದು ವಿವಾಹವಾದರು. ವಿವಾಹದ ವಿಧಿವಿಧಾನದ ಭಾಗವಾಗಿ ಹಿರಿಯರು ನವದಂಪತಿಗಳಿಗೆ ಮೊದಲ ರಾತ್ರಿಯನ್ನು ಏರ್ಪಡಿಸಿದ್ದದರು. ಆದರೆ ವರನು ತನ್ನ ಮೊದಲ ರಾತ್ರಿಯ ವಿಡಿಯೊಗಳನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ.

ವಿಷಯ ತಿಳಿದ ವಧು ಪೋಷಕರು ಪತಿ ವಿರುದ್ಧ ಫೆ.20ರಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಫೆ.28ರಂದು ಬಾಲಕನನ್ನು ಬಂಧಿಸಿದ್ದಾರೆ.












Click it and Unblock the Notifications