Alcohol Price: ಮದ್ಯ ಪ್ರಿಯರಿಗೆ ಕೇಂದ್ರದಿಂದ ಭರ್ಜರಿ ಗುಡ್‌ನ್ಯೂಸ್: ಸ್ಕಾಚ್ & ವಿಸ್ಕಿ ಸೇರಿ ಹಲವು ಮದ್ಯಗಳ ಬೆಲೆ ಇಳಿಕೆ ಸಾಧ್ಯ
Alcohol Price: ಮದ್ಯ ಪ್ರಿಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಭಾರತದಾದ್ಯಂತ ವಿವಿಧ ಮದ್ಯಗಳ ಬೆಲೆ ಭರ್ಜರಿ ಇಳಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಹಂತದಲ್ಲಿ ಮದ್ಯದ ಬೆಲೆ ಭಾರೀ ಏರಿಕೆ ಕಂಡಿದೆ. ಮದ್ಯದ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿರುವುದರಿಂದ ಮದ್ಯ ಪ್ರಿಯರು ಮದ್ಯ ಖರೀದಿ ಮಾಡುವುದನ್ನೇ ಕಡಿಮೆ ಮಾಡಿದ್ದಾರೆ. ಇದರೊಂದಿಗೆ ಕಳೆದ ಎರಡು ವರ್ಷದ ಅವಧಿಯಲ್ಲಿ ಮೂರು ಬಾರಿ ಮದ್ಯದ ಬೆಲೆಯು ಭಾರೀ ಹೆಚ್ಚಳವಾಗಿದೆ. ಇದೀಗ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರದಿಂದ ಮದ್ಯ ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಹೌದು ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿಕೊಂಡಿರುವ ಒಪ್ಪಂದವೊಂದರಿಂದ ಭಾರತದಲ್ಲಿ ವಿವಿಧ ಮದ್ಯಗಳ ಬೆಲೆಯು ಭಾರೀ ಇಳಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಜಾನಿ ವಾಕರ್, ಲಗಾವುಲಿನ್ ಹಾಗೂ ಗ್ಲೆನ್‌ಲಿವೆಟ್ ಸೇರಿದಂತೆ ಹಲವು ಮದ್ಯದ ಬೆಲೆ ಭರ್ಜರಿ ಇಳಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಭಾರತ - ಬ್ರಿಟನ್ (ಯುಕೆ) ನಡುವೆ ಈಚೆಗೆ ನಡೆದಿರುವ ಮುಕ್ತ ವ್ಯಾಪಾರ ಒಪ್ಪಂದ. ಇದರಿಂದ ಭಾರತದಲ್ಲಿ ಬ್ರಿಟಿಷ್ ಮದ್ಯಗಳ ಮೇಲಿನ ಆಮದು ಟ್ಯಾಕ್ಸ್ ಪ್ರಮಾಣವನ್ನು ಭಾರೀ ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡಲಾಗಿದ್ದು. ಭಾರತದಲ್ಲಿ ಸ್ಕಾಚ್ ವಿಸ್ಕಿ ಸೇರಿದಂತೆ ವಿವಿಧ ಮದ್ಯಗಳ ಬೆಲೆಯು ಭಾರೀ ಕಡಿಮೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಭಾರತದ ಮದ್ಯ ಪ್ರಿಯರಿಗೆ ಇದು ಖುಷಿ ಕೊಡುವ ವಿಚಾರ ಎಂದೇ ಹೇಳಲಾಗುತ್ತಿದೆ. ಎರಡೂ ದೇಶಗಳ ನಡುವೆ ಲಂಡನ್‌ನಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತವು ಯುಕೆ ವಿಸ್ಕಿ ಮತ್ತು ಜಿನ್ ಮೇಲಿನ ಟ್ಯಾಕ್ಸ್ ಪ್ರಮಾಣವನ್ನು ಶೇ. 150 ರಿಂದ ಶೇ.75 ಕ್ಕೆ ಹಾಗೂ ಕೆಲವು ಮದ್ಯಗಳ ಮೇಲಿನ ಶುಲ್ಕವನ್ನು ಬರೋಬ್ಬರಿ ಶೇ. 40ರಷ್ಟು ಇಳಿಸಲಿದೆ ಎಂದು ಹೇಳಲಾಗಿದೆ. ಮದ್ಯ ಪ್ರಿಯರು ನಿರಂತರವಾಗಿ ಮದ್ಯದ ಬೆಲೆ ಏರಿಕೆಯನ್ನೇ ಕಂಡಿದ್ದರು. ಅದರಲ್ಲೂ ಕರ್ನಾಟಕದಲ್ಲಿ ಮದ್ಯ ಹಾಗೂ ಬಿಯರ್ ಬೆಲೆಯು ನಿರಂತರವಾಗಿ ಏರಿಕೆ ಆಗುತ್ತಲ್ಲೇ ಇದೆ. ಈ ರೀತಿ ಇರುವಾಗಲೇ ಕೇಂದ್ರ ಸರ್ಕಾರವು ದೇಶದಾದ್ಯಂತ ಮದ್ಯ ಪ್ರಿಯರಿಗೆ ಸಿಹಿ ಸುದ್ದಿಯನ್ನು ನೀಡಿದೆ ಅಂತಲೇ ವಿಶ್ಲೇಷಿಸಲಾಗುತ್ತಿದೆ.
ಜಾನಿ ವಾಕರ್ ಬ್ಲ್ಯಾಕ್ ಲೇಬಲ್ ಹಾಗೂ ಚಿವಾಸ್ ರೀಗಲ್‌ನಂತಹ ಪ್ರೀಮಿಯಂ ವಿಭಾಗದಲ್ಲಿ ಮದ್ಯದ ಬೆಲೆಯು ಪ್ರತಿ ಬಾಟಲಿಗೆ ಬರೋಬ್ಬರಿ 200-300 ರೂಪಾಯಿ ಅಷ್ಟು ಕಡಿಮೆ ಆಗಬಹುದು. ಭಾರತದಲ್ಲಿ ಮಾರಾಟವಾಗುವ ಸ್ಕಾಚ್ ಬ್ರಾಂಡ್‌ಗಳಾದ ಬ್ಲ್ಯಾಕ್ ಡಾಗ್, 100 ಪೈಪರ್ಸ್, ಪಾಸ್‌ಪೋರ್ಟ್, ವ್ಯಾಟ್ 69 ಮತ್ತು ಬ್ಲ್ಯಾಕ್ & ವೈಟ್ ಬೆಲೆಯು ಬರೋಬ್ಬರಿ 100ರಿಂದ 150 ರೂಪಾಯಿಯಷ್ಟು ಇಳಿಕೆ ಆಗಬಹುದು ಎಂದು ಹೇಳಲಾಗಿದೆ.
ಸ್ಕಾಚ್ ವಿಸ್ಕಿ ಭಾರತದ ವಿಸ್ಕಿ ಮಾರುಕಟ್ಟೆಯಲ್ಲಿ ಬಹಳ ಕಡಿಮೆ ಪಾಲನ್ನು ಹೊಂದಿದೆ. ಶೇಕಡಾ ಒಂದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಆದರೆ ಎಲ್ಲಾ ವಿವಿಧ ಮದ್ಯಗಳ ಬೆಲೆ ಇಳಿಕೆಯು ಮದ್ಯ ಪ್ರಿಯರ ಖುಷಿ ಹೆಚ್ಚಿಸಲಿದೆ ಎಂದೇ ಹೇಳಲಾಗುತ್ತಿದೆ.












Click it and Unblock the Notifications