Gold Good News: ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್‌ ಬರ್ತಿದೆ "ಒನ್ ನೇಷನ್ ಒನ್ ಗೋಲ್ಡ್‌ ರೇಟ್‌"!

Gold Good News: ಚಿನ್ನ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಚಿನ್ನಪ್ರಿಯರು ಖುಷಿಪಡುವ ಸುದ್ದಿಯೊಂದು ಇಲ್ಲಿದೆ. ಚಿನ್ನದ ಬೆಲೆ ಇತ್ತೀಚಿನ ದಿನಗಳಲ್ಲಿ ಗಗನ ಮುಖಿಯಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಲ್ಲೇ ಇದೆ. ಅಲ್ಲದೇ ದೇಶದ ಒಂದೊಂದು ರಾಜ್ಯದಲ್ಲೂ ಒಂದೊಂದು ಚಿನ್ನದ ಬೆಲೆ ಇದೆ. ಇದು ಭಾರೀ ಗೊಂದಲ ಹಾಗೂ ಗ್ರಾಹಕರ ಮನಿಸಿಗೂ ಕಾರಣ. ಚಿನ್ನ ಪ್ರಿಯರ ಖುಷಿ ಹೆಚ್ಚಿಸುವ ಹಾಗೂ ಬೆಲೆ ಇಳಿಕೆಗೆ ಸಂಬಂಧಿಸಿ, ಈಗ ಒಂದು ರಾಷ್ಟ್ರ, ಒಂದು ಬೆಲೆ ನೀತಿ ಜಾರಿಗೆ ಬರ್ತಿದೆ. ಏನಿದು, ಇದರಿಂದ ಚಿನ್ನ ಖರೀದಿಯಲ್ಲಿ ಆಗುವ ಲಾಭವೇನು ನೋಡೋಣ ಬನ್ನಿ.

ಚಿನ್ನದ ಬೆಲೆ ಪ್ರತಿಗ್ರಾಂಗೆ 8,000 ಹಾಗೂ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ 80,000 ಸಾವಿರ ರೂಪಾಯಿ ಗಡಿದಾಟಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕಾ ಡಾಲರ್‌ನ ಮುಂದೆ ಭಾರತದ ರೂಪಾಯಿ ಕುಸಿತ. ಇರಾನ್‌ - ಇಸ್ರೇಲ್‌ ಯುದ್ಧ ಸೇರಿದಂತೆ ಹಲವು ಕಾರಣಕ್ಕೆ ಚಿನ್ನದ ಬೆಲೆ ಹೆಚ್ಚಾಗ್ತಲೇ ಇದೆ.

Gold Good News Good news for gold lovers One Nation One Gold Rate

ಇದು ಚಿನ್ನದ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಚಿನ್ನ ಖರೀದಿ ಮಾಡುಬೇಕು ಎನ್ನುವ ಆಸೆ ಏನೋ ಇದೆ. ಆದರೆ, ಈಗ ಒಂದು ರಾಷ್ಟ್ರ ಒಂದು ಬೆಲೆ ಜಾರಿಗೆ ಬರ್ತಿದೆ. ಇದು ನಿಜಕ್ಕೂ ಚಿನ್ನದ ಕೊಳ್ಳುವವರಿಗೆ ಸಿಹಿ ಸುದ್ದಿಯಾಗಿದೆ.

ದೇಶದಲ್ಲಿ ಒಂದು ರಾಷ್ಟ್ರ, ಒಂದು ಬೆಲೆ ನೀತಿ ಜಾರಿಗೆ (ONOR) ತರುವುದಕ್ಕೆ ದೇಶದ ಪ್ರಮುಖ ಆಭರಣ ಉದ್ಯಮಗಳು ಮುಂದಾಗಿವೆ. ಇಂಡಿಯನ್ ಜ್ಯುವೆಲರ್ಸ್ ಮತ್ತು ಬುಲಿಯನ್ ಅಸೋಸಿಯೇಷನ್ ​​ಆಫ್ ಇಂಡಿಯಾ ಹಾಗೂ ಆಲ್ ಇಂಡಿಯಾ ಜೆಮ್ ಅಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ ಉದ್ಯಮವು ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದೆ.

Gold Good News Good news for gold lovers One Nation One Gold Rate

ಹೆಸರೇ ಹೇಳವುಂತೆ ಈ ಎಲ್ಲಾ ಬೆಳವಣಿಗೆಗಳು ನಡೆದರೆ, ದೇಶದ ಎಲ್ಲಾ ರಾಜ್ಯಗಳಲ್ಲೂ ಚಿನ್ನದ ಬೆಲೆ ಒಂದೇ ಆಗಲಿದೆ. ಇದು ಚಿನ್ನ ಪ್ರಿಯರ ಖುಷಿಗೆ ಕಾರಣವಾಗಲಿದೆ. ಈಗ ನೆರೆಯ ಕೇರಳ ರಾಜ್ಯದಲ್ಲಿ ಚಿನ್ನದ ಬೆಲೆ ಕಡಿಮೆ ಇದೆ. ಅಲ್ಲದೇ ಕೇರಳದಲ್ಲಿ 8 ಗ್ರಾಂಗೆ ಚಿನ್ನದ ಬೆಲೆ ಲೆಕ್ಕ ಹಾಕಲಾಗುತ್ತದೆ.

ದೇಶದಲ್ಲಿ ಏರರೂಪ ಚಿನ್ನದ ಬೆಲೆ ನಿಗದಿ ಮಾಡುವುದರಿಂದ ಗ್ರಾಹಕರಿಗೆ ಲಾಭವಾಗಲಿದೆ. ಚಿನ್ನದ ಮಾರಾಟ ಪಾರದರ್ಶಕವಾಗಿ ಇರಲಿದೆ. ಈಗ ಭಾರತವು ವಿದೇಶಗಳಿಂದ ಹೆಚ್ಚು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ಕರೆನ್ಸಿ ವಿನಿಮಯ ವ್ಯತ್ಯಾಸ ಹೆಚ್ಚಾಗ್ತಿದೆ. ಅಮೆರಿಕಾದ ಡಾಲರ್‌ನ ಮುಂದೆ ರೂಪಾಯಿ ಮೌಲ್ಯ ಸರ್ವಕಾಲಿಕ ಕುಸಿತವನ್ನು ಕಂಡಿದೆ.

ಹೀಗಾಗಿ, ಚಿನ್ನದ ಬೆಲೆ ಹೆಚ್ಚಾಗ್ತಲೇ ಇದೆ. ಇದರ ಮಧ್ಯೆ ದೇಶದ ವಿವಿಧ ರಾಜ್ಯಗಳಲ್ಲಿ ಒಂದೊಂದು ಚಿನ್ನದ ಬೆಲೆ ಇರುವುದು ಮತ್ತೊಂದು ಸಮಸ್ಯೆಗೆ ಕಾರಣವಾಗಿದೆ. ಅಖಿಲ ಭಾರತ ರತ್ನ ಮತ್ತು ಆಭರಣ ಡೊಮೆಸ್ಟಿಕ್ ಕೌನ್ಸಿಲ್ ಏಕರೂಪ ಚಿನ್ನದ ಬೆಲೆ ನೀತಿಗೆ ಮುಂದಾಗ್ತಿದೆ.

ಎಲ್ಲಾ ಕಡೆ ಒಂದೇ ಚಿನ್ನದ ಬೆಲೆಗೆ ವಿವಿಧ ಪ್ರತಿಷ್ಠಿತ ಚಿನ್ನಾಭರಣ ಕಂಪನಿಗಳೊಂದಿಗೆ ಚರ್ಚೆ ನಡೆದಿದೆ. ಈ ರೀತಿ ಮಾಡುವುದರಿಂದ ಗ್ರಾಹಕರ ವಿಶ್ವಾಸ ಹೆಚ್ಚಾಗುತ್ತದೆ. ಜನ ಎಲ್ಲಾ ಕಡೆಯೂ ಒಂದೇ ಬೆಲೆಯಲ್ಲಿ ಚಿನ್ನ ತಗೋಬಹುದು. ನ್ಯಾಯಯುತ ಮಾರುಕಟ್ಟೆ ಸಿಗುತ್ತದೆ ಎನ್ನುವುದು ಹೊಸ ನೀತಿಯ ಪ್ಲಾನ್‌ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+