ದೀಪಾವಳಿ ವೇಳೆಗೆ ಚಿನ್ನದ ಬೆಲೆ ಇನ್ನೂ ಕುಸಿಯಲಿದೆ!

ಮುಂಬೈ, ಮೇ 23- ಚಿನ್ನದ ಬೆಲೆ ಇನ್ನೂ ಇನ್ನೂ ಬಿದ್ದುಹೋಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನದ ಆಮದು ನೀತಿಯನ್ನು ಸಡಿಲಗೊಳಿಸುತ್ತಿದ್ದಂತೆ ದೀಪಾವಳಿ ವೇಳೆಗೆ ಚಿನ್ನದ ಬೆಲೆ 10 ಗ್ರಾಂಗೆ 23,000-24,000 ರೂ ಗೆ ಕುಸಿಯಲಿದೆ. ಇದಕ್ಕೆ ಪೂರಕವಾಗಿ ನೂತನ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಜುಲೈನಲ್ಲಿ ಮಂಡಿಸಲಿರುವ ಪೂರ್ಣ ಪ್ರಮಾಣದ ಬಜೆಟ್ಟಿನಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಮತ್ತಷ್ಟು ಕಡಿತಗೊಳಿಸಬೇಕು ಎಂದು India Bullion & Jewellers Association (IBJA) ಆಶಿಸಿದೆ.

ಆರ್‌ಬಿಐ ನಿನ್ನೆ ತನ್ನ ನೂತನ ಚಿನ್ನದ ಆಮದು ನೀತಿ ಪ್ರಕಟಿಸಿದ ಬೆನ್ನಲ್ಲೆ ಚಿನ್ನದ ದರ ಕಳೆದ 9 ತಿಂಗಳುಗಳಲ್ಲಿ ಗರಿಷ್ಠ ಪ್ರಮಾಣಕ್ಕೆ ಕುಸಿದಿತ್ತು. ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರದಲ್ಲಿ ಶೇ. 3ರಷ್ಟು ಇಳಿಕೆ ಕಂಡು, ಒಟ್ಟಾರೆ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 800 ರೂ ಇಳಿಕೆಯಾಗಿತ್ತು. ಇದಕ್ಕೆ ಡಾಲರ್ ಎದುರು ರುಪಾಯಿ ಮೌಲ್ಯ ಏರಿಕೆಯೂ ನೆರವಾಗಿತ್ತು.

20:80 ಆಮದು ಪ್ರಮಾಣದ ಹೊಸ ನೀತಿಯಡಿ ಚಿನ್ನದ ಆಮದುದಾರರು ತಾವು ಆಮದು ಮಾಡಿಕೊಳ್ಳುವ ಶೇ. 20ರಷ್ಟು ಚಿನ್ನವನ್ನು ಕಡ್ಡಾಯವಾಗಿ ರಫ್ತು ಮಾಡಬೇಕು. ಉಳಿದ ಶೇ. 80ರಷ್ಟು ಚಿನ್ನವನ್ನು ದೇಶೀಯ ಮಾರಯಕಟ್ಟೆಯಲ್ಲಿ ಬಳಸಬಹುದು.

gold-prices-may-decline-to-rs-24000-by-diwali-ibja

IBJA ಅಧ್ಯಕ್ಷ ಮೋಹಿತ್ ಖಾಂಬೋಜ್ ಹೇಳುವ ಪ್ರಕಾರ ಚಿನ್ನದ ಆಮದು ನೀತಿಯನ್ನು ಸಡಿಲಗೊಳಿಸಿರುವುದು ಉದ್ಯಮಕ್ಕೆ ಆಶಾದಾಯಕವಾಗಿದೆ. ಇದರೊಂದಿಗೆ ಮುಂದಿನ ಬಜೆಟ್ಟಿನಲ್ಲಿ ಆಮದು ಸುಂಕವನ್ನು ಈಗಿರುವ ದುಬಾರಿ ಶೇ. 10ರಿಂದ ಶೇ. 4-5ರಷ್ಟಕ್ಕೆ ಕಡಿತಗೊಳಿಸಬೇಕು. ತತ್ಫಲವಾಗಿ ದೀಪಾಳಿ ವೇಳೆಗೆ ಚಿನ್ನದ ಬೆಲೆ 10 ಗ್ರಾಂಗೆ 23,000-24,000 ರೂ ಗೆ ಇಳಿಯುವ ಸಾಧ್ಯತೆಯಿದೆ.

ಸರಕಾರ ಕೈಗೊಳ್ಳುವ ಸಕಾರಾತ್ಮಕ ಕ್ರಮಗಳಿಂದಾಗಿ ಬೆಲೆ ಕಡಿಮೆಯಾಗಲಿದೆ. ಮುಖ್ಯವಾಗಿ ಚಿನ್ನದ ಕಳ್ಳ ಸಾಗಣೆಗೆ ಕಡಿವಾಣ ಬೀಳಲಿದೆ. ಬೆಲೂನಿನಂತೆ ಉಬ್ಬುತ್ತಿರುವ ಚಾಲ್ತಿ ಖಾತೆಯನ್ನು ನಿಯಂತ್ರಿಸಲು ಕಳೆದ ಜುಲೈನಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಚಿನ್ನದ ಆಮದು ಮೇಲೆ ಭಾರಿ ಕಡಿವಾಣ ಹಾಕಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+