ತಂತ್ರಜ್ಞಾನದ ಗಂಧಗಾಳಿಯೇ ಗೊತ್ತಿಲ್ಲದ ಹುಡುಗನಿಗೆ ಒಲಿದ 2.5 ಕೋಟಿ ಬಂಪರ್ ಆಫರ್: ಇದು ಹಲ್ವಾಯಿ ಮಗನ ಯಶೋಗಾಥೆ

"ನನ್ನ ತಂದೆ ಒಂದು ವರ್ಷ ಹಗಲಿರುಳು ಕಷ್ಟಪಟ್ಟು ಸಂಪಾದಿಸುತ್ತಿದ್ದ ಹಣವನ್ನ, ಇಂದು ನಾನು ಕೇವಲ ಒಂದೇ ತಿಂಗಳಲ್ಲಿ ಗಳಿಸುತ್ತಿದ್ದೇನೆ." ಈ ಮಾತುಗಳು ಕೇಳಲು ಎಷ್ಟೊಂದು ಹೆಮ್ಮೆಯೆನಿಸುತ್ತದೆಯಲ್ಲವೇ? ಇದು ಲಕ್ನೋದ 26 ವರ್ಷದ ಯುವಕ ತೇಜೇಶ್ ವೈಶ್ ಅವರ ಬದುಕಿನ ಕಥೆ.

ಹೌದು, ಯಾವುದೇ ಉನ್ನತ ಹಿನ್ನೆಲೆಯಿಲ್ಲದ, ತಂತ್ರಜ್ಞಾನದ ಗಂಧಗಾಳಿಯೇ ಗೊತ್ತಿಲ್ಲದ ಕುಟುಂಬದಿಂದ ಬಂದ ತೇಜೇಶ್ ಇಂದು ಕೃತಕ ಬುದ್ಧಿಮತ್ತೆ ( ಎಐ ) ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ದುಬೈನಲ್ಲಿ ಬರೋಬ್ಬರಿ 2.5 ಕೋಟಿ ರೂಪಾಯಿಗಳ ವಾರ್ಷಿಕ ಪ್ಯಾಕೇಜ್‌ನೊಂದಿಗೆ ಉದ್ಯೋಗ ಮಾಡುತ್ತಿರುವ ಇವರು ಇಂದಿನ ಯುವಜನತೆಗೆ ದೊಡ್ಡ ಸ್ಫೂರ್ತಿ ಎನ್ನಬಹುದು.

From Halwai Son to a 2 5 Crore AI Job in Dubai The Inspiring Success Story of Tejesh Vaish

ಐಐಟಿ ಕಾನ್ಪುರದ ಶಿಕ್ಷಣ

ತೇಜೇಶ್ ಅವರ ತಂದೆ ಲಕ್ನೋದಲ್ಲಿ ದಶಕಗಳ ಕಾಲ ಒಂದು ಸಣ್ಣ ಸಿಹಿ ತಿನಿಸಿನ ಅಂದರೆ ಹಲ್ವಾಯಿ ಅಂಗಡಿಯನ್ನ ನಡೆಸುತ್ತಿದ್ದರು. ಬಿಸಿಲಿನಲ್ಲಿ, ಬೆಂಕಿಯ ಮುಂದಿನ ಅವರ ಕಷ್ಟವನ್ನ ಕಣ್ಣಾರೆ ಕಂಡಿದ್ದ ತೇಜೇಶ್‌ಗೆ, ಶಿಕ್ಷಣವೇ ತನ್ನ ಬದುಕನ್ನ ಬದಲಾಯಿಸುವ ಅಸ್ತ್ರ ಎಂಬ ಅರಿವಿತ್ತು.

ತಂತ್ರಜ್ಞಾನದ ಬಗ್ಗೆ ಏನೇನೂ ತಿಳಿಯದ ಕುಟುಂಬದಲ್ಲಿ ಬೆಳೆದರೂ, ತಮ್ಮ ಸಂಕಲ್ಪದಿಂದ ಸ್ಕಾಲರ್‌ಶಿಪ್ ಪಡೆದು ಪ್ರತಿಷ್ಠಿತ ಐಐಟಿ ಕಾನ್ಪುರದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಪ್ರವೇಶ ಪಡೆದರು. ಅಲ್ಲಿನ ಕಠಿಣ ಪೈಪೋಟಿಯ ನಡುವೆಯೂ 9.14 ಸಿಪಿಐ (CPI) ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ಪದವಿ ಪೂರ್ಣಗೊಳಿಸಿದರು.

ಬೆಂಗಳೂರಿನಲ್ಲಿ ವೃತ್ತಿಜೀವನ

ತೇಜೇಶ್ ಕೇವಲ ತರಗತಿಯ ಪಾಠಗಳಿಗೆ ಸೀಮಿತವಾಗಿರಲಿಲ್ಲ. ಪುಸ್ತಕದ ಬದನೆಕಾಯಿಗಿಂತ ಪ್ರಾಯೋಗಿಕ ಜ್ಞಾನ ಮುಖ್ಯ ಎಂಬುದನ್ನ ಅರಿತಿದ್ದ ಅವರು, ಪದವಿ ಮುಗಿಯುವ ಮುನ್ನವೇ ಹಲವು ಇಂಟರ್ನ್‌ಶಿಪ್‌ಗಳನ್ನ ಮಾಡಿದರು. ವಿದ್ಯಾರ್ಥಿಯಾಗಿದ್ದಾಗಲೇ ಈ ಇಂಟರ್ನ್‌ಶಿಪ್‌ಗಳ ಮೂಲಕ 2 ಲಕ್ಷ ರೂಪಾಯಿಗೂ ಅಧಿಕ ಹಣ ಸಂಪಾದಿಸಿದ್ದರು.

ಬಳಿಕ ಭಾರತದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತವಾಗಿರುವ ಬೆಂಗಳೂರಿನತ್ತ ಮುಖಮಾಡಿದ ತೇಜೇಶ್, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ , ಸೆಕ್ಯುರೋನಿಕ್ಸ್, ಸ್ಕ್ವೇರ್‌ಪಾಯಿಂಟ್ ಕ್ಯಾಪಿಟಲ್ ಮತ್ತು ಅಬಾಕಸ್.ಎಐನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿ ಅಪಾರ ಅನುಭವ ಗಳಿಸಿದರು.

ದುಬೈನಲ್ಲಿ 2.5 ಕೋಟಿ ರೂ. ಪ್ಯಾಕೇಜ್‌ನ ಎಐ ಉದ್ಯೋಗ

ಬೆಂಗಳೂರಿನಲ್ಲಿ ಸಿಕ್ಕ ಅತ್ಯುತ್ತಮ ತಾಂತ್ರಿಕ ಅನುಭವದ ಅಡಿಪಾಯ, ತೇಜೇಶ್ ಅವರನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿತು. ಪ್ರಸ್ತುತ ಅವರು ಅಮೆರಿಕ ಮೂಲದ ಎಐ ಸ್ಟಾರ್ಟ್‌ಅಪ್ ಕಂಪನಿಯ ದುಬೈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇಂಜಿನಿಯರಿಂಗ್, ಎಐ ಏಜೆಂಟ್ಸ್ ಮತ್ತು ಮಷಿನ್ ಲರ್ನಿಂಗ್ ಅಪ್ಲಿಕೇಶನ್‌ಗಳ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇದಕ್ಕಾಗಿ ಕಂಪನಿಯು ಅವರಿಗೆ ವಾರ್ಷಿಕ ಅಂದಾಜು 2.5 ಕೋಟಿ ರೂಪಾಯಿಗಳ ಪ್ಯಾಕೇಜ್ ನೀಡುತ್ತಿದೆ.

ತನ್ನ ಕುಟುಂಬಕ್ಕಾಗಿ ಲಕ್ನೋದಲ್ಲಿ ಹೊಸ ಮನೆಯ ಕನಸು

ಲಕ್ಷಾಂತರ ರೂಪಾಯಿ ಸಂಬಳ, ದುಬೈನಂತಹ ಐಷಾರಾಮಿ ನಗರದಲ್ಲಿ ವಾಸವಿದ್ದರೂ, ತೇಜೇಶ್ ತಾವು ನಡೆದು ಬಂದ ಹಅದಿ ಮರೆತಿಲ್ಲ. ತನ್ನ ಈ ಯಶಸ್ಸಿಗೆ ಕಾರಣರಾದ ಪೋಷಕರಿಗೆ ನೆಮ್ಮದಿಯ ಬದುಕು ನೀಡಬೇಕೆಂಬುದು ಅವರ ದೊಡ್ಡ ಆಸೆಯಾಗಿತ್ತು. ಅದರಂತೆ ಈಗ ಅವರು ತಮ್ಮ ಹುಟ್ಟೂರಾದ ಲಕ್ನೋದಲ್ಲಿ ಕುಟುಂಬಕ್ಕಾಗಿ ಒಂದು ಸುಂದರವಾದ ಹೊಸ ಮನೆಯನ್ನು ನಿರ್ಮಿಸುತ್ತಿದ್ದಾರೆ.

ಕಷ್ಟಪಟ್ಟು ಸಿಹಿ ಹಂಚುತ್ತಿದ್ದ ತಂದೆಯ ಬದುಕಿನಲ್ಲಿ ಇಂದು ನಿಜವಾದ ಸಿಹಿಯನ್ನ ತುಂಬಿದ್ದಾರೆ ತೇಜೇಶ್ ವೈಶ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+