ಚಲಿಸುತ್ತಿದ್ದ ರೈಲಿನಿಂದ ಕೆಳಗಡೆ ಬಿದ್ದು ಐವರು ಸಾವು

ಚಲಿಸುತ್ತಿದ್ದ ರೈಲಿನಿಂದ ಕೆಳಗಡೆ ಬಿದ್ದು ಐವರು ಪ್ರಯಾಣಿಕರು ಸವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಇಂದು (ಜೂನ್‌ 9) ಥಾಣೆಯಲ್ಲಿ ನಡೆದದಿದೆ.

ಚಲಿಸುತ್ತಿದ್ದ ರೈಲಿನಿಂದ ಕೆಳಗಡೆ ಬಿದ್ದು ಐವರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ಈ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ-ದಿವಾ ನಿಲ್ದಾಣಗಳ ನಡುವೆ ನಡೆದಿದೆ. ತ್ಯಕ್ಷದರ್ಶಿಗಳ ಪ್ರಕಾರ, ರೈಲಿನಲ್ಲಿ ಪ್ರಯಾಣಿಕರು ಕಕ್ಕಿರಿದು ಬಾಗಿಲುಗಳಲ್ಲಿ ನೇತಾಡುತ್ತಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

Five Death After Falling from Moving Train near Thane

ಆದರೆ, ಪ್ರಯಾಣಿಕರು ಸ್ಥಳೀಯ ರೈಲಿನಿಂದ ಬಿದ್ದಿದ್ದಾರೋ ಅಥವಾ ಪುಷ್ಪಕ್ ಎಕ್ಸ್‌ಪ್ರೆಸ್‌ನಿಂದ ಬಿದ್ದಿದ್ದಾರೆಯೋ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿದೆ. ಆದರೂ ಕೆಲವರು ಪುಷ್ಪಕ್ ಎಕ್ಸ್‌ಪ್ರೆಸ್‌ನಿಂದ ಪ್ರಯಾಣಿಕರು ಬಿದ್ದಿದ್ದಾರೆ ಎಂದು ಹೇಳುತ್ತಿದ್ದಾರೆ ಅಂತಾ ವರದ ಆಗಿದೆ. ಅಪಘಾತದ ಸಮಯದಲ್ಲಿ ಎರಡೂ ರೈಲುಗಳು ಅಲ್ಲಿ ಹಾದುಹೋಗುತ್ತಿದ್ದವು. ಎರಡೂ ರೈಲುಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು.

ಮೂಲಗಳ ಪ್ರಕಾರ, ರೈಲಿನಲ್ಲಿ ಅತಿಯಾದ ಜನಸಂದಣಿಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಇದರಲ್ಲಿ ತುಂಬಾ ಪ್ರಯಾಣಿಕರು ಬಾಗಿಲುಗಳಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ಬೆಳಗ್ಗೆ 9:30, 10 ಗಂಟೆ ಸುಮಾರಿಗೆ ಮುಂಬ್ರಾ ನಿಲ್ದಾಣದ ಮೂಲಕ ಹಾದುಹೋಗುತ್ತಿರುವ ವೇಳೆ ಸಂಭವಿಸಿದೆ ಎಂದು ವರದಿ ಆಗಿದೆ.

ರೈಲಿನಿಂದ ಹಳಿ ಮೇಲೆ ಬಿದ್ದ ಅನೇಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಆಡಳಿತವು ತಕ್ಷಣ ಸ್ಥಳಕ್ಕೆ ಆಗಮಿಸಿ ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿದೆ. ಗಾಯಾಳುಗಳನ್ನು ಥಾಣೆ ಸಿವಿಲ್ ಆಸ್ಪತ್ರೆ ಮತ್ತು ಕಲ್ಯಾಣ್‌ನಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಕೆಲ ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ. ರೈಲ್ವೆ ಆಡಳಿತವು ಅಪಘಾತದ ತನಿಖೆಯನ್ನ ಆರಂಭಿಸಿದೆ. ಪ್ರಾಥಮಿಕ ತನಿಖೆಯಲ್ಲಿ, ಅತಿಯಾದ ಜನಸಂದಣಿ ಮತ್ತು ಬಾಗಿಲುಗಳ ಮೇಲೆ ಪ್ರಯಾಣಿಕರು ನೇತಾಡುತ್ತಿರುವುದು ಮುಖ್ಯ ಕಾರಣವೆಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+