• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫಿಟ್ಟೋ -ನಿಮ್ಮ ಜೊತೆಗೆ ಸಾಗುವ ವರ್ಚುವಲ್ ಕ್ಲಿನಿಕ್!

Google Oneindia Kannada News

ವೈದ್ಯರೊಂದಿಗೆ ಮುಂಗಡವಾಗಿ ಅಪಾಟ್ಮೆಂಟ್ ನಿಗದಿಪಡಿಸಿದ ಬಳಿಕವೂ ಕ್ಲಿನಿಕ್‌ಗಳಲ್ಲಿ ಕಾಯಬೇಕಾಗುತ್ತದೆ, ಪರೀಕ್ಷೆಗಳಿಗಾಗಿ ಲ್ಯಾಬ್ ಬಳಿ ಕಾಯಬೇಕು ಮತ್ತು ನಿಮಗೆ ಬೇಕಾದ ಔಷಧಿಗಳನ್ನು ಪಡೆಯಲು ಔಷಧಿ ಅಂಗಡಿಗಳಲ್ಲಿ ಕಾಯಬೇಕು. ಈ ತೊಂದರೆಗಳಿಂದ ನಿಮ್ಮನ್ನು ಉಳಿಸಲಿದೆ ಫಿಟ್ಟೋ, ಈ ವೇದಿಕೆ ಮೂಲಕ ವಾಸ್ತವಿಕ ಸಮಾಲೋಚನೆಗಾಗಿ ನಿಮ್ಮ ಸ್ವಂತ ಆಯ್ಕೆಯ ತಜ್ಞ ವೈದ್ಯರನ್ನು ಸಂಪರ್ಕಿಸಬಹುದು. ಇಲ್ಲಿ ನೀವು ಔಷಧಿಗಳನ್ನು ಮತ್ತು ಲ್ಯಾಬ್ ಪರೀಕ್ಷೆಗಳನ್ನು ನಿಮ್ಮ ಮನೆಯಿಂದಲೇ ಆರ್ಡರ್ ಮಾಡಿ, ಪಡೆಯಬಹುದು. ನಿಮ್ಮ ಆರೋಗ್ಯದ ಅವಶ್ಯಕತೆಗಳ ವಿಷಯಕ್ಕೆ ಬಂದಾಗ ಫಿಟ್ಟೋ ನಿಜವಾಗಿಯೂ ಪ್ರಾಯೋಗಿಕ ಮತ್ತು ಸಹಾಯಕವಾಗಿದೆ.

ಫಿಟ್ಟೋ, ವೈದ್ಯಕೀಯ ವಿಜ್ಞಾನ ಮತ್ತು ಐಟಿ ಸಮ್ಮಿಲಿತ ವೇದಿಕೆ, ಇದು ಆನ್‌ಲೈನ್ ವೈದ್ಯರ ಸಮಾಲೋಚನೆಯನ್ನು ಒದಗಿಸುವ ವೆಬ್ ಪ್ಲಾಟ್‌ಫಾರ್ಮ್ ಆಗಿದೆ, ಇದು ನಿಮಗೆ ಮತ್ತು ನಿಮ್ಮ ಕುಟುಂಬದ ಆರೋಗ್ಯ ಮತ್ತು ವೈದ್ಯಕೀಯ ಅಗತ್ಯಗಳಿಗಾಗಿ ಸಂಪೂರ್ಣ ಟೆಲಿಮೆಡಿಸಿನ್ ಪರಿಹಾರಗಳನ್ನು ನೀಡುತ್ತದೆ ಮತ್ತು ರೋಗಿಗಳ ಮನೆಯಿಂದ ವೈದ್ಯರು ಮನೆಗೆ ಭೇಟಿ ನೀಡುತ್ತಾರೆ.

ಇದು ತಜ್ಞ ವೈದ್ಯರು, ಕ್ಲಿನಿಕ್‌ಗಳು, ಪಾಥ್-ಪ್ರಯೋಗಾಲಯಗಳಲ್ಲಿ ಅರ್ಹ ಪ್ರತಿಷ್ಠಿತ ತಜ್ಞರ ಮೇಲ್ವಿಚಾರಣೆಯಲ್ಲಿರುವ ಸ್ಕ್ರೀನಿಂಗ್ ಸೌಲಭ್ಯ ಹೊಂದಿದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ, ಇಂಜಿನಿಯರ್ ಗಳು ಮತ್ತು ಪ್ರಮುಖ ಆರೋಗ್ಯ ವೃತ್ತಿಪರರಿಂದಲೇ ಕಂಪನಿ ನಡೆಸಲಾಗುತ್ತಿದೆ.

FITTO ಯೊಂದಿಗೆ, ಏನೆಲ್ಲ ಸಾಧ್ಯ:
* ವೈದ್ಯರೊಂದಿಗೆ ವೀಡಿಯೋ ಸಮಾಲೋಚನೆಗಳನ್ನು ಪಡೆದುಕೊಳ್ಳಬಹುದು.
* ನಿಮ್ಮ ಆಯ್ಕೆಯ ವೈದ್ಯರನ್ನು ವರ್ಚುವಲ್ ಕರೆಗಾಗಿ ಆರಿಸಿಕೊಳ್ಳಬಹುದು. ಇತರೆಡೆಗಳಲ್ಲಿ ವರ್ಚುವಲ್ ಕರೆಗೆ ವೈದ್ಯರನ್ನು ಸಂಸ್ಥೆಯೆ ನಿಯೋಜಿಸುತ್ತದೆ. ಆದರೆ, ಇಲ್ಲಿ ನಿಮಗೆ ಆಯ್ಕೆ ಅವಕಾಶವಿದೆ.
* ವರ್ಚುಯಲ್ ಸಂದರ್ಶನಗಳು ವಾಯ್ಸ್ ಕರೆ/ ವಿಡಿಯೋ ಕಾನ್ಫರೆನ್ಸ್ ಮೂಲಕ ಪಡೆದುಕೊಳ್ಳಬಹುದು. ನಿಮ್ಮ ಜೊತೆಗೆ ಕುಟುಂಬಸ್ಥರು/ಸ್ನೇಹಿತರು ಕೂಡಾ ಭಾಗಿಯಾಗಬಹುದು.
* ನಿಮ್ಮ ಮನೆಬಾಗಿಲಿಗೆ ರೋಗಶಾಸ್ತ್ರೀಯ ಸೇವೆಗಳು/ಮಾದರಿ ಸಂಗ್ರಹಣೆ ಮತ್ತು ಔಷಧಿ ಮನೆಗೆ ತಲುಪಿಸುವ ವ್ಯವಸ್ಥೆಯಿದೆ.
* ಆನ್ ಲೈನ್ ಮೂಲಕ ಔಷಧಗಳನ್ನು ಆಯ್ಕೆ ಮಾಡಿಕೊಂಡು ಆರ್ಡರ್ ಮಾಡಬಹುದು.
* ಫಾಲೋ ಅಪ್ ಸಂದರ್ಶನಗಳು ಸಂಪೂರ್ಣ ಉಚಿತವಾಗಿದೆ.

ಫಿಟ್ಟೋ ಪರೀಕ್ಷಾ ವರದಿ, ವೈದ್ಯಕೀಯ ಇತಿಹಾಸವನ್ನು ಮುಂಚಿತವಾಗಿ ವೈದ್ಯರ ಪರಿಶೀಲನೆಗಾಗಿ ಅಪ್‌ಲೋಡ್ ಮಾಡುವ ಆಯ್ಕೆಯನ್ನು ಒದಗಿಸುತ್ತದೆ.

OneIndia.com ಪ್ರತಿನಿಧಿ ಜೊತೆಗೆ ಮಾತನಾಡಿದ FITTO ನ ಮಾರ್ಕೆಟಿಂಗ್ ಮುಖ್ಯಸ್ಥ ಸಂಜಯ್ ರೇ, "ಫಿಟ್ಟೋ https://fitto-at.com/ ಅನ್ನು ಸ್ಪಷ್ಟವಾಗಿ ಬಳಕೆದಾರರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ, ಇದು ಮುಖ್ಯವಾಗಿ 'ಮನೆಯಲ್ಲಿ' ಮತ್ತು 'ಹೊರಗಿನ ವೈದ್ಯಕೀಯ ಸೇವೆ'ಗಳ ಮೇಲೆ ಕೇಂದ್ರೀಕರಿಸುತ್ತದೆ. ಮನೆಯಲ್ಲೇ ಸೇವೆಗಳು - ಕನ್ಸಲ್ಟೆನ್ಸಿ, ಫಾರ್ಮಸಿ ಮತ್ತು ಡಯಾಗ್ನೋಸ್ಟಿಕ್ಸ್ ಸೇವೆಗಳು ಸೇರಿವೆ. ಜೊತೆಗೆ, ನಾವು ಅತ್ಯುತ್ತಮ ವೈದ್ಯಕೀಯ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ'' ಎಂದರು.

ಇದಲ್ಲದೆ, ಫಿಟ್ಟೋ ಆರೋಗ್ಯ ಸಮಸ್ಯೆ ಮತ್ತು ಸಂಶೋಧನೆ, ಆವಿಷ್ಕಾರಗಳು, ವೈದ್ಯಕೀಯ ಕ್ಷೇತ್ರದ ಉನ್ನತೀಕರಣದ ಬಗ್ಗೆ ಬ್ಲಾಗ್‌ ಪೋಸ್ಟ್ ಮೂಲಕ ಕೂಡಾ ಮಾಹಿತಿ ನೀಡುತ್ತಿದೆ.

FITTO ಕೇವಲ ಆನ್‌ಲೈನ್ ವೈದ್ಯರ ನೇಮಕಾತಿ ಬುಕಿಂಗ್ ಅಥವಾ ಔಷಧ ವಿತರಣೆಗಾಗಿ ವೆಬ್ ಪ್ಲಾಟ್‌ಫಾರ್ಮ್‌ ಮಾತ್ರವಲ್ಲ. FITTO ನ ಫ್ಲೆಬೊಟೊಮಿಸ್ಟ್‌ಗಳು ಉತ್ತಮ ತರಬೇತಿ ಹೊಂದಿದ್ದಾರೆ ಮತ್ತು ಅತ್ಯಂತ ಸುರಕ್ಷತೆ ಮತ್ತು ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಮನೆಯಲ್ಲಿ ಮಾದರಿ ಸಂಗ್ರಹವನ್ನು ಪೂರ್ಣಗೊಳಿಸುತ್ತಾರೆ.

FITTO – Your Virtual Clinic on the go!

ಕ್ಲಿನಿಕ್ ಎಲ್ಲಿದೆ?

ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಮಾತ್ರ ತಮ್ಮ ಇನ್-ಕ್ಲಿನಿಕ್ ಸೌಲಭ್ಯಗಳನ್ನು ಹೊಂದಿದ್ದು, ಈ ಯಾವುದೇ ಸ್ಥಳದಿಂದ 24/7 ಆನ್‌ಲೈನ್ ಸಮಾಲೋಚನೆ ಲಭ್ಯವಿದೆ.

FITTO ನನ್ನ ಡೇಟಾವನ್ನು ಮಾರುತ್ತದೆಯೇ ಅಥವಾ ಒಪ್ಪಿಗೆಯಿಲ್ಲದೆ ಬಳಸುತ್ತದೆಯೇ?
ಸಂಪೂರ್ಣವಾಗಿ ನಿಜವಲ್ಲ.

ಸಾಮಾನ್ಯ ನೆಟ್‌ವರ್ಕ್ ಡೇಟಾವನ್ನು ಸಂಗ್ರಹಿಸುತ್ತದೆ, ಅದನ್ನು ಯಾರಾದರೂ ಪಡೆದುಕೊಳ್ಳಬಹುದು. ಆದಾಗ್ಯೂ, FITTO ಅನ್ನು ಬ್ಲಾಕ್‌ಚೈನ್ ಟೆಕ್ನಾಲಜಿ ಭದ್ರಪಡಿಸಲಾಗಿದ್ದು, ಮುರಿಯಲಾಗದ ಭದ್ರತಾ ವ್ಯವಸ್ಥೆ ಹೊಂದಿದೆ. ಬ್ಲಾಕ್‌ಚೈನ್ ತಂತ್ರಜ್ಞಾನದ ಡೇಟಾವನ್ನು ಸಂಗ್ರಹಿಸಲು ಸುರಕ್ಷಿತ ನೆಟ್‌ವರ್ಕ್ ಅನ್ನು ರಚಿಸಬಹುದು ಹಾಗೂ ಮಾಹಿತಿ ಮೂಲಕ ಬದಲಾಯಿಸುವುದು ಅಸಾಧ್ಯ.

ಬ್ಲಾಕ್ ಚೈನ್ ಜಾಲದ SHA-256 ಡೇಟಾ ಎನ್‌ಕ್ರಿಪ್ಶನ್ ತಂತ್ರಜ್ಞಾನದೊಂದಿಗೆ ಖಾಸಗಿ ಬ್ಲಾಕ್‌ಚೈನ್ ನೆಟ್‌ವರ್ಕ್ ಅನ್ನು FITTO ಬಳಸುತ್ತದೆ, ನಿಮ್ಮ ವೈದ್ಯಕೀಯ ದಾಖಲೆಗಳು ಸುರಕ್ಷಿತವಾಗಿವೆ ಎಂದು ಖಚಿತಪಡಿಸುತ್ತದೆ. ನಿಮ್ಮ ಮಾಹಿತಿಯನ್ನು ರಕ್ಷಿಸಲು ತೆಗೆದುಕೊಂಡ ಹಲವು ಕ್ರಮಗಳಲ್ಲಿ ಇವು ಕೆಲವು ವಿಧಾನವಾಗಿದೆ.

   ಮಸೀದಿಯಲ್ಲಿ ನೀರು ಕುಡಿದ ಹಿಂದೂ ಕುಟುಂಬಕ್ಕೆ ಪಾಕಿಸ್ತಾನ ಮಾಡಿದ್ದೇನು? | Oneindia Kannada

   ಬುಕ್ ಮಾಡುವುದು ಹೇಗೆ?
   ಇಮೇಲ್ ಐಡಿ ಅಥವಾ ಸೆಲ್ ಫೋನ್ ಸಂಖ್ಯೆಯೊಂದಿಗೆ ಸೈನ್ ಇನ್ ಮಾಡಿದ ನಂತರ ಸಮಾಲೋಚನೆ/ಸೇವೆಗಳನ್ನು ಅವರ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ, ನೀವು ಅವರ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು: https://fitto-at.com/

   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X