ಪ್ಲಾಸ್ಮಾ ಥೆರಪಿಯಿಂದ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು: ತಜ್ಞರು
ಬೆಂಗಳೂರು, ನವೆಂಬರ್ 05: ಪ್ಲಾಸ್ಮಾ ಥೆರಪಿಯಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ ಕೂಡ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು.
ಪ್ಲಾಸ್ಮಾ ಥೆರಪಿಯಿಂದ ಕೊವಿಡ್ ರೋಗವನ್ನು ಗುಣಪಡಿಸಲು ಸಾಧ್ಯವಾಗುವುದಿಲ್ಲ ಎಂದು ಪ್ಲಾಸ್ಮಾ ಥೆರಪಿಯನ್ನು ಕೈಬಿಡಲು ಐಸಿಎಂಆರ್ ಮುಂದಾಗಿದೆ.
ಆದರೆ ಪ್ಲಾಸ್ಮಾ ಥೆರಪಿಯನ್ನು ಪ್ರಯೋಗಾತ್ಮವಾಗಿ ಆರಂಭಿಸಿದ ಮೆಡಿಕಲ್ ಇನ್ಸ್ ಸ್ಟಿಟ್ಯೂಟ್ ಮತ್ತು ಆಸ್ಪತ್ರೆಳು ಪ್ಲಾಸ್ಮಾ ಥೆರಪಿಯಿಂದ ಉತ್ತಮ ಫಲಿತಾಂಶ ಕಂಡುಕೊಂಡಿದ್ದು ಮುಂದುವರಿಸಲು ನಿರ್ಧರಿಸಿವೆ.
ಐಸಿಎಂಆರ್ ವ್ಯಾಪ್ತಿಗೆ ಒಳಪಟ್ಟಿರುವ ಹಲವು ಆಸ್ಪತ್ರೆಗಳು ಪ್ರಯೋಗದ ಹಂತವಾಗಿ ಪ್ಲಾಸ್ಮಾ ಥೆರಪಿ ಮುಂದುವರಿಸಲು ನಿರ್ಧರಿಸಿವೆ, ಕೆಲವು ಆಸ್ಪತ್ರೆಗಳು 100ಕ್ಕೂ ಹೆಚ್ಚು ಪ್ಲಾಸ್ಮಾ ಥೆರಪಿ ಮಾಡಿವೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ 103 ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಮಾಡಿದ್ದು, ಅದರಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ.

ಪ್ಲಾಸ್ಮಾ ಪ್ರತಿಕಾಯ ಪರೀಕ್ಷೆ
ಪ್ರಾಯೋಗಿಕ ಹಂತದಲ್ಲಿ, ಪ್ಲಾಸ್ಮಾ ದಾನಿಗಳಲ್ಲಿ ಪ್ರತಿಕಾಯ ಪರೀಕ್ಷೆಯನ್ನು ನಡೆಸಲು ಯಾವುದೇ ಮಾರ್ಗಸೂಚಿಗಳಿರಲಿಲ್ಲ, ಕೊವಿಡ್ -19 ನಿಂದ ಗುಣಮುಖವಾದ ವ್ಯಕ್ತಿಯು ರಕ್ತದಾನ ಮಾಡಲು ಬಂದರೆ, ಅವರು ಕುರುಡಾಗಿ ರಕ್ತವನ್ನು ತೆಗೆದುಕೊಂಡು ಪ್ಲಾಸ್ಮಾವನ್ನು ಮಧ್ಯಮ ಮತ್ತು ತೀವ್ರ ರೋಗಿಗಳಿಗೆ ತುಂಬಿಸುತ್ತಿದ್ದರು ಮತ್ತು ಕೊವಿಡ್ -19 ರೋಗಿಗೆ ಚಿಕಿತ್ಸೆ ನೀಡಲು ಯಾವ ದಾನಿಗಳ ರಕ್ತ ಸರಿಹೊಂದುತ್ತದೆ ಅಥವಾ ಇಲ್ಲವೇ ಎಂಬುದು ಅವರಿಗೆ ತಿಳಿದಿರಲಿಲ್ಲ.

ಕಾಯಿಲೆಯಿಂದ ಗುಣಮುಖರಾಗಬಹುದು
ಕೊರೊನಾದಿಂದ ಗುಣಮುಖರಾದವರಿಂದ ಪ್ಲಾಸ್ಮಾ ತೆಗೆದು ಸೋಂಕಿತರಿಗೆ ನೀಡುವುದರಿಂದ ಕಾಯಿಲೆ ಗುಣಮುಖವಾಗಬಹುದು, ಗುಣಪಡಿಸಿದ ರೋಗಿಯ ರಕ್ತದಿಂದ ಪ್ರತಿಕಾಯಗಳನ್ನು ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಮತ್ತು ಇದನ್ನು ಅನೇಕ ದೇಶಗಳು ಅತ್ಯುತ್ತಮ ಚಿಕಿತ್ಸೆಯಾಗಿ ಸ್ವೀಕರಿಸಿವೆ.

ಪ್ಲಾಸ್ಮಾ ಪರಿಣಾಮದ ಪತ್ತೆ
ಐಸಿಎಂಆರ್ ದೇಶಾದ್ಯಂತ 39 ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳನ್ನು ಪ್ಲಾಸ್ಮಾ ಪರಿಣಾಮದ ಪತ್ತೆಗಾಗಿ ಆಯ್ಕೆ ಮಾಡಿತ್ತು. ಇದರಲ್ಲಿ ಮಧ್ಯಮ ಕೊವಿಡ್ - 19 ಹೊಂದಿರುವ 464 ವಯಸ್ಕರಿಗೆ ಏಪ್ರಿಲ್ 22 ರಿಂದ ಜುಲೈ 14 ರ ನಡುವೆ ಪ್ಲಾಸ್ಮಾವನ್ನು ಥೆರಪಿ ನೀಡಲಾಯಿತು. ಪ್ಲಾಸ್ಮಾ ಟ್ರಯಲ್ ಸಂದರ್ಭದಲ್ಲಿ, ಇಂಟರ್ವೆನ್ಶನ್ ಆರ್ಮ್ ನಲ್ಲಿ 44 ರೋಗಿಗಳು (ಶೇ.19), ಕಂಟ್ರೋಲ್ ಆರ್ಮ್ ನಲ್ಲಿ 41 ರೋಗಿಗಳು (ಶೇ.18) ರೋಗಿಗಳು ಸಾವನಪ್ಪಿದ್ದಾರೆ. ಹೀಗಾಗಿ ಫ್ಲಾಸ್ಮಾ ಥೆರಪಿ ಸಾವನ್ನು ನಿಯಂತ್ರಿಸಲು ವಿಫವಾಗಿರುವ ಕಾರಣ ಪ್ಲಾಸ್ಮಾ ಥೆರಪಿ ನಿಲ್ಲಿಸಲು ಐಸಿಎಂಆರ್ ನಿರ್ಧಾರ ಕೈಗೊಂಡಿತು.

ಸಾವಿನ ಪ್ರಮಾಣ ಹೆಚ್ಚು
ಹೀಗಾಗಿ ಐಸಿಎಂಆರ್ ನಡೆಸಿದ ಅಧ್ಯಯನದಲ್ಲಿ ಸಾವಿನ ಪ್ರಮಾಣಹೆಚ್ಚಾಗಿತ್ತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಐಸಿಎಂಆರ್ ಈ ನಿರ್ಧಾರಕ್ಕೆ ಬರುವ ಮುನ್ನ ಮತ್ತೊಂದು ಬಾರಿ ವಿಶ್ಲೇಷಣೆ ನಡೆಸಬೇಕು ಎಂದು ಹೇಳಿದ್ದಾರೆ.












Click it and Unblock the Notifications