ಶಾಲೆಗೆ ಹೊರಟ ಬಾಲಕಿಗೆ ಕಾವಲಾದ ಮರಿ ಆನೆ: ಇಲ್ಲಿದೆ ನೆಟ್ಟಿಗರ ಮನಸು ಕದ್ದ ವೈರಲ್ ವಿಡಿಯೋ..
Elephant Viral Video: ಪ್ರತಿನಿತ್ಯ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ಮಾತ್ರ ಜನರ ಮನಸನ್ನು ಗೆದ್ದುಬಿಡುತ್ತವೆ. ಇದೀಗ ಮರಿ ಆನೆಯೊಂದು ಪುಟ್ಟ ಬಾಲಕಿ ಜೊತೆ ಕಾವಲಾಗಿ ಶಾಲೆವರೆಗೆ ಬಿಟ್ಟುಬಂದಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.
ಪುಟ್ಟ ಮಕ್ಕಳು ಮಾಡುವ ತುಂಟಾಟಕ್ಕೆ ಎಂಥವರೂ ಕೂಡ ಮರುಳಾಗಿಬಿಡುತ್ತಾರೆ. ಎಷ್ಟೇ ಕೋಪದ ವ್ಯಕ್ತಿಯಾದರೂ ಅವರ ಮುಗ್ದ ನಗುವಿಗೆ ಕಗರಿ ಹೋಗಿಬಿಡುತ್ತಾರೆ. ಹಾಗೆಯೇ ಪ್ರಾಣಿಗಳ ತುಂಟಾಟಕ್ಕೆ ಜನರು ಮನಸೋತು ಬಿಡುತ್ತಾರೆ. ಅದರಲ್ಲೂ ಸಣ್ಣ-ಪುಟ್ಟ ಪ್ರಾಣಿಗಳ ಜೊತೆಗೆ ಮಕ್ಕಳಂತೆ ಹೆಚ್ಚು ಕಾಲ ಕಳೆಯಲು ಇಷ್ಟಪಡುತ್ತಾರೆ. ಇಂತಹ ಎಷ್ಟೋ ವಿಡಿಯೋಗಳು ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ.

ಮರಿ ಆನೆ ವಿಡಿಯೋ ವೈರಲ್: ಹಾಗೆಯೇ ಇದೀಗ ಮರಿ ಆನೆಯೊಂದು ಪುಟ್ಟ ಹುಡುಗಿಯನ್ನು ಶಾಲೆಗೆ ಬಿಟ್ಟು ಬರಲು ತೆರಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು friendly_gaints_conversation ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೆಲ ಪ್ರಾಣಿಗಳೇ ಹಾಗೆ.. ಸಾಕಿದವರನ್ನು ಎಂದಿಗೂ ಮರೆಯುವುದಿಲ್ಲ. ಅವರು ಎಲ್ಲೇ ಹೋದರೂ ಅವರ ಹಿಂದೆಯೇ ಕಾವಲಾಗಿ ಅಡ್ಡಾಡುತ್ತಿರುತ್ತವೆ.
ಬಹುತೇಕ ಮನುಷ್ಯರು ಮನಸಲ್ಲಿ ವಿಷ ಇಟ್ಟುಕೊಂಡು ಮತ್ತೊಬ್ಬರನ್ನು ದ್ವೇಷ ಮಾಡುವಲ್ಲಿಯೇ ಸಮಯ ಕಳೆಯುತ್ತಾರೆ. ಕೆಲವೇ ಕೆಲವು ಮಂದಿ ಮಾತ್ರ ತಾವು ಬೆಳೆವಣಿಗೆ ಕಾಣಲು, ಸಣ್ಣಪುಟ್ಟ ಮಕ್ಕಳು ಹಾಗೂ ಪ್ರಾಣಿಗಳೊಂದಿಗೆ ಕಾಲ ಕಳೆಯಲು ಇದೇ ಸಮಯವನ್ನು ಮೀಸಲಿಡುತ್ತಾರೆ. ಇಂತಹ ಚಿಕ್ಕಪುಟ್ಟ ವಿಷಯಗಳ ಮೂಲಕವೇ ಅವರು ನೆಮ್ಮದಿ ಕಾಣಲು ಬಯಸುತ್ತಾರೆ.
ನೆಟ್ಟಿಗರ ಮನಸು ಕದ್ದ ವಿಡಿಯೋ: ಇದಕ್ಕೆ ಈ ಮರಿ ಆನೆ ಹಾಗೂ ಪುಟ್ಟ ಹುಡುಗಿಯ ನಡುವಿನ ಸ್ನೇಹವೇ ಪ್ರಮುಖ ಉದಾಹರಣೆ ಆಗಿದೆ. ವಿಡಿಯೋದಲ್ಲಿ ಶಾಲೆಗೆ ಹೊರಟು ನಿಂತ ಪುಟ್ಟ ಹುಡುಗಿಯ ಹಿಂದೆಯೇ ಮರಿಯಾ ಆನೆ ಕಾವಲಾಗಿ ಹೋಗುತ್ತಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ, ಈ ದೃಶ್ಯ ನೆಟ್ಟಿಗರ ಮನಸನ್ನು ಕದ್ದುಬಿಟ್ಟಿದೆ. ಮತ್ತೊಂದೆಡೆ ಇದಕ್ಕೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿವೆ.
ಮರಿಯಾನೆ ಮುಂದೆ ಬ್ಯಾಗ್ ಹಾಕಿಕೊಂಡು ಜಿಗಿಯುತ್ತಾ.. ಆಟ ಆಡುತ್ತಾ.. ಪುಟ್ಟ ಬಾಲಕಿ ಕೂಡ ಎಂಜಾಯ್ ಮಾಡಿದ್ದಾಳೆ. ಇನ್ನೂ ಇದುವರೆಗೂ ಈ ಅದ್ಭುತ ವಿಡಿಯೋಗೆ 6,671 ಲೈಕ್‌ಗಳು ಬಂದಿವೆ. ಬಹುತೇಕ ನೆಟ್ಟಿಗರು ನಾವೂ ಕೂಡ ಈ ಆನೆ ಜೊತೆ ಸಮಯ ಕಳೆಯಬೇಕು ಅನ್ನಿಸುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಈ ಪುಟ್ಟ ಹುಡುಗಿ ಹಾಗೂ ಮರಿಯಾನೆ ನಿಷ್ಕಲ್ಮಶ ಸ್ನೇಹಕ್ಕೆ ಯಾವ ಕೆಟ್ಟ ಕಣ್ಣುಗಳು ಬೀಳದಿರಲಿದ ಎಂದು ಹೇಳಿದ್ದಾರೆ. ಇಂತಹ ಅದ್ಭುತ ದೃಶ್ಯಗಳು ಇದೇ ಮೊದಲೇನಲ್ಲ.. ಈ ಹಿಂದೆಯೋ ಸಹ ವೈರಲ್ ಆಗಿರುವ ಉದಾಹರಣೆಗಳಿವೆ. ಅದರಲ್ಲೂ, ಕಾಡು ಪ್ರದೇಶಗಳಲ್ಲಿ ಮನೆ ಹೊಂದಿರುವ ಜನರಿಗೆ ಪ್ರಾಣಿಗಳ ಜೊತೆ ಒಡನಾಟ ಹೆಚ್ಚಾಗಿಯೇ ಇರುತ್ತದೆ. ಈ ನಡುವೆಯೂ ಕೆಲವೆಡೆ ಆಗಾಗ ಸಂಘರ್ಷಗಳು ಕೂಡ ನಡೆಯುತ್ತಲಿರುತ್ತವೆ.












Click it and Unblock the Notifications