ಮತಗಟ್ಟೆಗೆ ಹೋಗಲು ಹಿಂದೇಟು: ಆನ್‌ಲೈನ್‌ ವೋಟಿಂಗ್ ಬರಲಿದೆ

Recommended Video

      Election Commission of India : ಸದ್ಯದಲ್ಲೇ ಆನ್ಲೈನ್ ಮತದಾನವನ್ನ ಪರಿಚಯಿಸಲು ಹೊರಟಿದೆ ಚುನಾವಣಾ ಆಯೋಗ

      ಬೆಂಗಳೂರು, ಡಿಸೆಂಬರ್ 5: ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಬೇಕಾದರೆ ಮತದಾನ ಪ್ರಮಾಣ ಶೇ.100ರಷ್ಟು ಸಾಧಿಸಬೇಕೆಂಬ ಉದ್ದೇಶದಿಂದ ಚುನಾವಣಾ ವ್ಯವಸ್ಥೆಯಲ್ಲೇ ಬಹುದೊಡ್ಡ ಬದಲಾವಣೆ ತರಲು ಚುನಾವಣಾ ಆಯೋಗ ಗಂಭೀರ ಚಿಂತನೆ ನಡೆಸಿದೆ.

      ಜಾಗತಿಕ ವ್ಯವಸ್ಥೆಯಲ್ಲಿ ಡಿಜಿಟಲ್ ತಂತ್ರಜ್ಞಾನ ಆವರಿಸಿರುವ ಮಹತ್ವವನ್ನು ಪರಿಗಣಿಸಿ ಇನ್ನುಮುಂದೆ ಮತದಾನಕ್ಕೂ ಆನ್‌ಲೈನ್ ವ್ಯವಸ್ಥೆಯನ್ನೂ ಅಳವಡಿಸುವ ಕ್ರಾಂತಿಕಾರಿ ಬದಲಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಸಂಭವಿಸಲಿದೆ.

      ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ಸುಳಿವು ನೀಡಿದ್ದು, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅನುಸರಿಸಲಾದ ಆನ್‌ಲೈನ್ ಮತದಾನ ವ್ಯವಸ್ಥೆ ಯಶಸ್ವಿಯಾಗಿದ್ದು ಅದರಿಂದ ಉತ್ತೇಜನಗೊಂಡು ಸಾರ್ವತ್ರಿಕ ಚುನಾವಣೆಗಳಲ್ಲೂ ಇದೇ ಮಾದರಿ ಅನುಸರಿಸಲು ಚಿಂತನೆ ನಡೆಸಿದೆ.

      EC to introduce online voting for general elections soon

      ಈಗಾಗಲೇ ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಾಯೋಗಿಕವಾಗಿ ಆನ್‌ಲೈನ್ ಮತದಾನ ವ್ಯವಸ್ಥೆ ಜಾರಿಗೆ ತರಲಾಗಿದೆ. ಉತ್ತರ ಸ್ಪಂದನೆ ದೊರೆತಿದೆ. ಮೈಲ್ಯಾಕ್‌ನಲ್ಲಿ ಉತ್ಪಾದನೆಯಾಗುವ ಅಳಿಸಲಾಗದ ಶಾಯಿಯನ್ನೇ ಮುಂದಿನ ಚುನಾವಣೆಗಳಲ್ಲೂ ಬಳಕೆ ಮಾಡಲಾಗುವುದು ಎಂದು ಹೇಳಿದರು.

      ಕೆಲವೊಂದು ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ಚುನಾವಣೆಗಳು ನಡೆದಾಗ ಇವಿಎಂ ಯಂತ್ರಗಳನ್ನು ಒದಗಿಸುವುದು ಕಷ್ಟವಾಗುತ್ತದೆ ಆದ್ದರಿಂದ ಆನ್‌ಲೈನ್ ಮೂಲಕ ಮತದಾನ ವ್ಯವಸ್ಥೆ ಆರಂಭಿಸಿದರೆ ಸುಲಭವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+