6 ಹಂತದಲ್ಲಿ ಲೋಕಸಭಾ ಚುನಾವಣೆ: ದಿನಾಂಕ ಪ್ರಕಟ
ನವದೆಹಲಿ, ಮಾ 4: ಹದಿನಾರನೇ ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಎಪ್ರಿಲ್ 16 ರಂದು ಮೊದಲ ಹಂತದ ಚುನಾವಣೆಯ ಮೂಲಕ ಒಟ್ಟು ಆರು ಹಂತದಲ್ಲಿ ಮತದಾನ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಬುಧವಾರ ( ಮಾ 5) ಬೆಳಗ್ಗೆ 10.30ಕ್ಕೆ ವಿಜ್ಞಾನ ಭವನದಲ್ಲಿ ಕೇಂದ್ರ ಮುಖ್ಯ ಚುನಾವಣಾ ಅಧಿಕಾರಿ ವಿ ಎಸ್ ಸಂಪತ್ ಚುನಾವಣೆಯ ದಿನಾಂಕವನ್ನು ಘೋಷಿಸಲಿದ್ದಾರೆ.

ಖಚಿತ ಮಾಹಿತಿಗಳ ಪ್ರಕಾರ ಲೋಕಸಭಾ ಚುನಾವಣೆಯ ಜೊತೆಗೆ ಆಂಧ್ರ ಪ್ರದೇಶ, ನೂತನವಾಗಿ ಉದಯವಾಗಿರುವ ತೆಲಂಗಾಣ, ಒರಿಸ್ಸಾ ಮತ್ತು ಸಿಕ್ಕಿಂ ರಾಜ್ಯದ ವಿಧಾನಸಭಾ ಚುನಾವಣೆಯೂ ಇದರ ಜೊತೆಗೆ ನಡೆಯಲಿದೆ.
ಹಾಗೆಯೇ, ಮೂಲಗಳ ಪ್ರಕಾರ ಎಪ್ರಿಲ್ 16 ರಿಂದ ಮೇ 13ರ ವರೆಗೆ ಒಟ್ಟು ಆರು ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 16ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿದು ಬಂದಿದೆ.
ಎಪ್ರಿಲ್ 16 (124 ಕ್ಷೇತ್ರ), ಎಪ್ರಿಲ್ 22 ಅಥವಾ 23 (141 ಕ್ಷೇತ್ರ), ಎಪ್ರಿಲ್ 30 (107 ಕ್ಷೇತ್ರ), ಮೇ 7 (85 ಕ್ಷೇತ್ರ ), ಮೇ 13 (86 ಕ್ಷೇತ್ರ) ಈ ದಿನಾಂಕಗಳಂದು ಚುನಾವಣೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಯಾವ ಯಾವ ರಾಜ್ಯಗಳಲ್ಲಿ ಯಾವ ದಿನಾಂಕದಂದು ಚುನಾವಣೆ ನಡೆಯಲಿದೆ ಎಂದು ಬುಧವಾರ ತಿಳಿದು ಬರಲಿದೆ.












Click it and Unblock the Notifications