ಮಿಜೋರಾಂನಲ್ಲಿ ಭೂಕಂಪ: 4.2 ತೀವ್ರತೆ ದಾಖಲು

ಛಪಾಂಯ್, ಜುಲೈ 17: ಮೀಜೋರಾಂನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ.

Recommended Video

      B Srimalu ಆರೋಗ್ಯ ಸಚಿವರಾಗಿ ಹೀಗೆ ಹೇಳಬಾರದಿತ್ತಾ ? | Oneindia Kannada

      ಮಿಜೋರಾಂನ ಛಾಂಪಾಯ್ ಜಿಲ್ಲೆಯಲ್ಲಿ ಮಧ್ಯಾಹ್ನ 3.56ರ ವೇಳೆಗೆ ಭೂಕಂಪ ಸಂಭವಿಸಿದೆ. ರಾಜ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ 9 ಭೂಕಂಪಗಳು ಸಂಭವಿಸಿದೆ.

      ಛಾಂಪಾಯ್‌ನಿಂದ 33 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು. 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿತ್ತು.ಜುಲೈ 16 ರಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಭೂಕಂಪನ ಸಂಭವಿಸಿತ್ತು. ಸುಮಾರು 7:40 ಗಂಟೆಗೆ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲಾಗಿತ್ತು.

      Earthquake Of 4.2 Magnitude Hits Mizoram

      ಇನ್ನು ಹಿಮಾಚಲ ಪ್ರದೇಶದ ಉನಾದಲ್ಲೂ ಲಘು ಭೂಕಂಪನ ಸಂಭವಿಸಿದೆ. 2.3 ತೀವ್ರತೆಯ ಭೂಕಂಪನ ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

      ಕಳೆದ ಕೆಲವು ದಿನಗಳಿಂದ ದೇಶದ ನಾನಾ ಕಡೆ ಭೂಮಿ ಕಂಪಿಸುತ್ತಿದೆ. ಲಘು ಭೂಕಂಪನ ಜನರನ್ನ ಭಯಭೀತಗೊಳಿಸುತ್ತಿದೆ.

      ಇನ್ನು ಅಸ್ಸಾಂನಲ್ಲೂ 4.1 ತೀವ್ರತೆಯ ಭೂಕಂಪನ ಸಂಭವಿಸಿದೆ. ಕರಿಮಗಂಜ್‌ ಎಂಬಲ್ಲಿ ಸರಿ ಸುಮಾರು 7:57 ಗಂಟೆಗೆ ಭೂಮಿ ಕಂಪಿಸಿದೆ ಎಂದು ಭೂಕಂಪಶಾಸ್ತ್ರ ಇಲಾಖೆ ತಿಳಿಸಿದೆ. ರಿಕ್ಟರ್‌ ಮಾಪಕದಲ್ಲಿ 4.1 ತೀವ್ರತೆ ದಾಖಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+