ಅಹಮದಾಬಾದ್, ಫೆಬ್ರವರಿ 24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಅಹಮದಾಬಾದ್, ನವದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಭಾರತ್ರ ಪ್ರವಾಸದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ...
Recommended Video
Donald Trump India's visit - LIVE from Ahmedabad
ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅಹಮದಾಬಾದ್‌ಗೆ ಅವರು ಭೇಟಿ ನೀಡಲಿದ್ದು, ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಜೊತೆ ರೋಡ್ ಶೋ ನಡೆಸಲಿದ್ದಾರೆ. ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದು, ನಂತರ ಮೊಟೆರಾದ ನೂತನ ಬೃಹತ್ ಕ್ರೀಡಾಂಗಣ ಉದ್ಘಾಟಿಸಿ, ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ.
ಫಾರ್ಚ್ಯೂನ್ ಲ್ಯಾಂಡ್ ಮಾರ್ಕ್ ಹೋಟೆಲ್ ನಲ್ಲಿ ನೆಲೆಸಲಿರುವ ಡೊನಾಲ್ಡ್ ಟ್ರಂಪ್ ಹಾಗೂ ಪರಿವಾರಕ್ಕೆ ಗುಜರಾತಿ ಶೈಲಿ ಊಟ, ತಿಂಡಿ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ವಿಶೇಷ ತಿನಿಸುಗಳೊಂದಿಗೆ ಮುಖ್ಯ ಬಾಣಸಿಗ ಸುರೇಶ್ ಖನ್ನ ಸಿದ್ದರಾಗಿದ್ದಾರೆ. ಅಹಮದಾಬಾದ್ ನಗರದ ತುಂಬಾ ಮೋದಿ- ಟ್ರಂಪ್ ಕಟೌಟ್, ಹೋರ್ಡಿಂಗ್, ಬಂಟಿಂಗ್ಸ್ ಎದ್ದು ಕಾಣುತ್ತಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಅಹಮದಾಬಾದ್ ವಿಮಾನ ನಿಲ್ದಾಣದ ರಸ್ತೆಯ ಪಕ್ಕದಲ್ಲಿರುವ ಸ್ಲಂಗಳನ್ನು ತೆರವುಗೊಳಿಸಲಾಗಿದೆ. ಗೋಡೆಗಳನ್ನು ಸಿಂಗರಿಸಲಾಗಿದೆ. ಎಲ್ಲೆಡೆ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ. ಯುಎಸ್ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಭಾಗವಾಗಿ ಹೌಡಿ ಮೋದಿ ಕಾರ್ಯಕ್ರಮ ಆಯೋಜಿಸಿ ಗೆದ್ದ ಟ್ರಂಪ್ ಗೆ "ನಮಸ್ತೆ ಟ್ರಂಪ್" ಮೂಲಕ ಮೋದಿ ಅವರು ತಮ್ಮ ಬೆಂಬಲ ವ್ಯಕ್ತಪಡಿಸಿ, ಅನಧಿಕೃತವಾಗಿ ಟ್ರಂಪ್ ಪರ ಅಭಿಯಾನ ನಡೆಸಿದ್ದಂತಾಗಿದೆ.
Feb 25, 2020, 1:42 pm IST
ಮಾನಸಿಕ ಆರೋಗ್ಯ, ಐಓಸಿ ಎಕ್ಸಾನ್ ಮತ್ತು ಚಾರ್ಟ್ ನಡುವೆ ಸಮನ್ವಯತೆ, ವೈದ್ಯಕೀಯ ಉತ್ಪನ್ನಗಳ ಸುರಕ್ಷತೆ ಸೇರಿ ಒಟ್ಟು ಮೂರು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.
Feb 25, 2020, 1:40 pm IST
ಮೂರು ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದಕ್ಕೆ ಭಾರತ-ಅಮೆರಿಕ ಸಹಿ
Feb 25, 2020, 1:40 pm IST
ಭಾರತ-ಅಮೆರಿಕ ನಡುವೆ ಕಚ್ಚಾತೈಲ ಒಪ್ಪಂದ ನಡೆದಿದೆ. ಅಪಾಚೆ ಎಂಎಚ್-60 ರೋಮಿಯೋ ಹೆಲಿಕಾಪ್ಟರ್ ಖರೀದಿಗೆ ಒಪ್ಪಂದ
Feb 25, 2020, 1:38 pm IST
ಭಾರತಕ್ಕೆ ಭೇಟಿ ನೀಡಿದ್ದು ತುಂಬಾ ಖುಷಿಯಾಗಿದೆ. ನನಗೆ ಹಾಗೂ ಮೆಲಾನಿಯಾಗೆ ಭಾರತದ ಆತಿಥ್ಯ ಸಂತಸ ತಂದಿದೆ. ರಕ್ಷಣಾ ವಿಚಾರವಾಗಿ ಮೋದಿ ಜೊತೆಗೆ ಚರ್ಚೆ ನಡೆಸಿದ್ದೇವೆ- ಟ್ರಂಪ್
Feb 25, 2020, 1:37 pm IST
ಮುಕ್ತ-ಪಾರದರ್ಶಕ ವ್ಯಾಪಾರಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಡ್ರಗ್ಸ್ ಕಳ್ಳಸಾಗಣೆ ತಡೆಗಟ್ಟುವ ಕುರಿತು ಮಾತುಕತೆ ನಡೆಸಿದ್ದೇವೆ-ಮೋದಿ
Feb 25, 2020, 1:36 pm IST
ನಮ್ಮ ಈ ಸಂಬಂಧವನ್ನು ಇನ್ನಷ್ಟು ಬಲಗೊಳಿಸಲು ನಿಇರ್ಧರಿಸಿದ್ದೇವೆ, ಭಯೋತ್ಪಾದನೆ ವಿರುದ್ಧದ ಜಂಟಿ ಹೋರಾಟ ಮುಂದುವರೆಯಲಿದೆ. ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ಮುಂದುವರೆಯಲಿದೆ-ಮೋದಿ
Feb 25, 2020, 12:37 pm IST
ಸರ್ವೋದಯ ಶಾಲೆಯ ಮಕ್ಕಳೊಂದಿಗೆ ಮೆಲಾನಿಯಾ ಟ್ರಂಪ್ ಸಂವಾದ ನಡೆಸುತ್ತಿದ್ದಾರೆ.
Delhi: First Lady of the US, Melania Trump interacting with students at Nanakpura's Sarvodaya Co-Ed Senior Secondary School. pic.twitter.com/M3n72VE9pR
ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಸೋಮವಾರ ಆಗಮಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗುಜರಾತ್‌ನ ಸಬರಮತಿ ಆಶ್ರಮ, ಮೊಟೆರಾ ಕ್ರೀಡಾಂಗಣ, ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿ ನವದೆಹಲಿಯ ಐಷಾರಾಮಿ ಹೋಟೆಲ್ ಐಟಿಸಿ ಮೌರ್ಯದಲ್ಲಿ ವಾಸ್ತವ್ಯ ಹೂಡಿದ್ದರು.
ಮಧ್ಯಾಹ್ನ 3 ಗಂಟೆಗೆ ಅಮೆರಿಕಾ ರಾಯಭಾರಿ ಕಚೇರಿಯಲ್ಲಿ ಟ್ರಂಪ್ ಮತ್ತು ಅವರ ನಿಯೋಗದಿಂದ ಭಾರತದ ಉದ್ಯಮಿಗಳೊಂದಿಗೆ ದುಂಡು ಮೇಜಿನ ಸಭೆ ನಡೆಯಲಿದೆ. ರಾತ್ರಿ 8 ಗಂಟೆಗೆ ಟ್ರಂಪ್ ಕುಟುಂಬಕ್ಕೆ ರಾಷ್ಟ್ರಪತಿ ಭವನದಲ್ಲಿ ಔತಣಕೂಟ ಏರ್ಪಡಿಸಲಾಗಿದೆ. ರಾತ್ರಿ 10 ಗಂಟೆಗೆ ಟ್ರಂಪ್ ಮತ್ತು ಅವರ ನಿಯೋಗ ಏರ್ ಫೋರ್ಸ್ ಒನ್ ಮೂಲಕ ಅಮೆರಿಕಾಕ್ಕೆ ಪ್ರಯಾಣಿಸಲಿದೆ.
Feb 25, 2020, 9:25 am IST
ಬೆಳಿಗ್ಗೆ 11.30ರ ಸುಮಾರಿಗೆ ಹೈದರಾಬಾದ್ ಹೌಸ್'ಗೆ ತೆರಳಲಿರುವ ಟ್ರಂಪ್ ಅವರ ನಿಯೋಗ, ಅಧಿಕೃತ ಚರ್ಚೆ, ಒಪ್ಪಂದಗಳಿಗೆ ಸಹಿಹಾಕಲಿದ್ದಾರೆ. ಮೋದಿ-ಟ್ರಂಪ್ ನಡುವಿನ ಸಭೆ ಮುಕ್ತಾಯಗೊಂಡ ಬಳಿಕ ಉಭಯ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
Feb 25, 2020, 9:25 am IST
ಬೆಳಿಗ್ಗೆ 10ಗಂಟೆ ರಾಷ್ಟ್ರಪತಿ ಭವನಕ್ಕೆ ಟ್ರಂಪ್ ಆಗಮಿಸಲಿದ್ದು, ಬೆಳಿಗ್ಗೆ 10.45ರ ಸುಮಾರಿಗೆ ರಾಜಘಾಟ್ ನಲ್ಲಿ ಗಾಂಧಿ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ.
Feb 25, 2020, 9:13 am IST
ನೌಕಾಪಡೆ ಹೆಲಿಕಾಪ್ಟರ್ ಒಪ್ಪಂದಕ್ಕೆ ಇದು ಸಹಿ ಬೀಳಲಿದೆ. 2.6 ಡಾಲರ್ ಬಿಲಿಯನ್ ಮೊತ್ತದ ಒಪ್ಪಂದ ಇದಾಗಿದೆ.
Feb 24, 2020, 6:50 pm IST
ತಾಜ್ ಮಹಲ್ ನೋಡಿದ ನಂತರ ಡೊನಾಲ್ಡ್ ಟ್ರಂಪ್ ಮತ್ತು ಮಲನಿಯಾ ದಂಪತಿ ದೆಹಲಿಗೆ ಆಗಮಿಸಿದ್ದಾರೆ.
Feb 24, 2020, 5:33 pm IST
ತಾಜ್‌ಮಹಲ್ ಎದುರು ಟ್ರಂಪ್, ಮೆಲಾನಿಯಾ, ಇವಾಂಕಾ ಆಕೆಯ ಪತಿಯ ಫೋಟೊಶೂಟ್
Feb 24, 2020, 4:30 pm IST
ಆಗ್ರಾಕ್ಕೆ ಬಂದಿಳಿದ ಟ್ರಂಪ್ ಕುಟುಂಬ, ತಾಜ್ ಮಹಲ್ ವೀಕ್ಷಣೆ ಬಳಿಕ ದೆಹಲಿ ತೆರಳಲಿದ್ದಾರೆ.
Feb 24, 2020, 3:46 pm IST
ಟ್ರಂಪ್ ,ಮಲೆನಿಯಾ, ಇವಾಂಕಾ ಟ್ರಂಪ್ ಇದೀಗ ತಾಜ್ ಮಹಲ್ ವೀಕ್ಷಿಸಲು ಆಗ್ರಾ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
Feb 24, 2020, 2:35 pm IST
''ಭಾರತ-ಅಮೆರಿಕ ಸ್ನೇಹ ಹೀಗೆ ಸಾಗಲಿ'' (ಇಂಡಿಯಾ-ಯುಎಸ್ ಫ್ರೆಂಡ್‌ಶಿಪ್; ಲಾಂಗ್ ಲಿವ್) ಎಂದು ಮೂರು ಭಾರಿ ಹೇಳಿ ಮೋದಿ ಭಾಷಣ ಮುಗಿಸಿದರು.
Feb 24, 2020, 2:35 pm IST
ಭಾರತ ಮತ್ತು ಅಮೆರಿಕ ಸ್ವಾಭಾವಿಕ (ನೈಸರ್ಗಿಕ) ಪಾಲುದಾರರಾಗಿದ್ದೇವೆ. ಟ್ರಂಪ್ ಅಂತಹಾ 'ವಿಲಕ್ಷಣ' ನಾಯಕರು 2020 ದಶಕದ ಆರಂಭದಲ್ಲಿಯೇ ಭಾರತಕ್ಕೆ ಬಂದಿರುವುದು ನಮ್ಮ ಸೌಭಾಗ್ಯ, ಇದು ಭಾರತದ ಮಟ್ಟಿಗೆ ಹಲವು ಅವಕಾಶಗಳನ್ನು ತೆರೆದಿಟ್ಟಿದೆ- ಮೋದಿ
Feb 24, 2020, 2:35 pm IST
ಟ್ರಂಪ್ ತಮ್ಮ ಕಠಿಣ ನಾಯಕತ್ವದ ಮೂಲಕ ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುತ್ತಿದ್ದಾರೆ. ಭಯೋತ್ಪಾದನೆ ವಿರುದ್ಧ ಸಮರ ಸಾರಿರುವ ಭಾರತಕ್ಕೆ ಸಹ 'ಹೆಗಲಿಗೆ ಹೆಗಲು' ಕೊಟ್ಟಿದ್ದಾರೆ- ಮೋದಿ
Feb 24, 2020, 2:31 pm IST
ಭಾರತದಲ್ಲಿ ಬದಲಾದ ಡಿಜಿಟಲ್ ಎಕಾನಮಿ ಅಮೆರಿಕಕ್ಕೆ ಸಾಕಷ್ಟು ವ್ಯವಹಾರ ಅವಕಾಶ ಕಲ್ಪಿಸಿವೆ. ಭಾರತದ ಪ್ರತಿಭೆ, ಅಮೆರಿಕದ ತಂತ್ರಜ್ಞಾನ ಡಿಜಿಟಲ್ ಎಕಾನಮಿಯಲ್ಲಿ ನಮ್ಮನ್ನು ವಿಶ್ವ ಮಟ್ಟದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಿದೆ- ಮೋದಿ
Feb 24, 2020, 2:30 pm IST
ಭಾರತದ ಅತಿದೊಡ್ಡ ಟ್ರೇಡಿಂಗ್ ಪಾರ್ಟನರ್ ಅಮೆರಿಕ, ನಮ್ಮ ಸೈನ್ಯವು ಅತಿ ಹೆಚ್ಚು ಜಂಟಿ ತಾಲೀಮು ನಡೆಸಿರುವುದು ಅಮೆರಿಕದ ಸೇನೆಯೊಂದಿಗೆ. ಮಾಹಿತಿ ತಂತ್ರಜ್ಞಾನ, ಅಂತರಿಕ್ಷಯಾನ ಸೇರಿ ಇನ್ನೂ ಎಲ್ಲಾ ಕ್ಷೇತ್ರಗಳಲ್ಲಿ ಭಾರತ-ಅಮೆರಿಕ ಜೊತೆ-ಜೊತೆಯಾಗಿ ಸಾಗುತ್ತಿದೆ- ಮೋದಿ
Feb 24, 2020, 2:28 pm IST
ಅಮೆರಿಕದ ಅಧ್ಯಕ್ಷರ ಮುಂದೆ ತಮ್ಮ ಸರ್ಕಾರ ಮಾಡುತ್ತಿರುವ ಮಹತ್ವದ ಕಾರ್ಯಗಳ ಪಟ್ಟಿಯನ್ನು ಮೋದಿ ಭಾಷಣದಲ್ಲಿ ಹೇಳಿದರು.
Feb 24, 2020, 2:27 pm IST
ಅಮೆರಿಕದಲ್ಲಿನ ಲಕ್ಷಾಂತರ ಭಾರತೀಯರು ಅಮೆರಿಕದ ಅಭಿವೃದ್ಧಿಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವೈಟ್ ಹೌಸ್‌ನಲ್ಲಿ ದೀಪಾವಳಿ ಆಚರಿಸಿದಾಗ ಅವರು ಇದು ನಮ್ಮ ಮನೆ ಎಂದು ಸಂತೋಶ ಪಡುತ್ತಾರೆ- ಮೋದಿ
READ MORE
7:08 AM, 24 Feb
ಫೆಬ್ರವರಿ 25ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್ ಮಾತುಕತೆ ನಡೆಸಲಿದ್ದಾರೆ. ಇದಾದ ಬಳಿಕ ಕೆಲ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಸಂಜೆ ವೇಳೆಗೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ, ರಾತ್ರಿ 10 ಗಂಟೆಗೆ ಭಾರತದಿಂದ ಯುಎಸ್ ಗೆ ತೆರಳಿದ್ದಾರೆ.
7:09 AM, 24 Feb
ಅಹಮದಾಬಾದ್ ನಿಂದ ವಿಶೇಷ ವಿಮಾನ ಮೂಲಕ ಆಗ್ರಾದ ತಾಜ್ ಮಹಲ್ ನೋಡಲು ಟ್ರಂಪ್ ದಂಪತಿ ತೆರಳಲಿದ್ದಾರೆ. ನಂತರ ದೆಹಲಿಗೆ ತೆರಳಲಿದ್ದಾರೆ. ಫೆಬ್ರವರಿ 25ರಂದು ದೆಹಲಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ಆತಿಥ್ಯ ಸ್ವೀಕರಿಸಲಿದ್ದಾರೆ. ನಂತರ ಮಹಾತ್ಮ ಗಾಂಧಿ ಸಮಾಧಿ ಸ್ಥಳ ರಾಜ್ ಘಾಟ್ ಗೆ ತೆರಳಿ ವಂದಿಸಲಿದ್ದಾರೆ.
7:09 AM, 24 Feb
ಸೋಮವಾರ ಬೆಳಗ್ಗೆ 11:40 ರ ಸುಮಾರಿಗೆ ಅಹಮದಾಬಾದಿಗೆ ಆಗಮಿಸುವ ಡೊನಾಲ್ಡ್ ಟ್ರಂಪ್ ಅವರು ಮೊದಲಿಗೆ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಟ್ರಂಪ್ ಜೊತೆ ಪ್ರಧಾನಿ ಮೋದಿ ಕೂಡಾ ಇರಲಿದ್ದಾರೆ. ಇದಾದ ಬಳಿಕ ಮೊಟೆರಾ ಕ್ರೀಡಾಂಗಣ ಉದ್ಘಾಟನೆ, ನಮಸ್ತೆ ಟ್ರಂಪ್ ಕಾರ್ಯಕ್ರಮ ಭಾಷಣವಿರಲಿದೆ.
8:50 AM, 24 Feb
ಭಾರತವು ನಿಮ್ಮ ಆಗಮನವನ್ನೇ ಎದುರು ನೋಡುತ್ತಿದೆ. ನಿಮ್ಮ ಭೇಟಿಯು ಅಮೆರಿಕಾ ಮತ್ತು ಭಾರತದ ನಡುವಿನ ಸ್ನೇಹ ಸಂಬಂಧ ವೃದ್ಧಿಗೆ ಖಂಡಿತವಾಗಿಯೂ ನೆರವಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಟ್ರಂಪ್ ಅವರು ತಮ್ಮ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ, ಅಳಿಯ ಜರೇಡ್ ಕುಶ್ನೆರ್, ಅಮೆರಿಕ ನಿಯೋಗ ಹಾಗೂ ನೂರಾರು ಪತ್ರಕರ್ತರೊಂದಿಗೆ ಆಗಮಿಸಲಿದ್ದಾರೆ. ಅವರು ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕದ 7ನೇ ಅಧ್ಯಕ್ಷರಾಗಿದ್ದಾರೆ.
9:06 AM, 24 Feb
ಡೊನಾಲ್ಡ್ ಟ್ರಂಪ್ ಸ್ವಾಗತಕ್ಕೆ ಭಾರಿ ಸಿದ್ಧತೆ
ಅಮೆರಿಕ ಅಧ್ಯಕ್ಷರನ್ನು ಸ್ವಾಗತಿಸಲು ಅಹಮದಾಬಾದ್ , ಆಗ್ರಾ ಹಾಗೂ ನವದೆಹಲಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಭಾರಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ದೆಹಲಿ ಸೇರಿದಂತೆ ಟ್ರಂಪ್ ಹೋದಲ್ಲೆಲ್ಲಾ ಅವರಿಗೆ ಸಾಂಪ್ರದಾಯಿಕ ತಿಲಕ ಇಟ್ಟು, ಶಾಲು ಹೊದಿಸಿ ಸ್ವಾಗತಿಸಲಾಗುತ್ತದೆ.
Gujarat: Motera Stadium in Ahmedabad, where US President Donald Trump's 'Namaste Trump' will be held today. pic.twitter.com/a3mM7GhWFv
ತಮ್ಮ ಪ್ರವಾಸದ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ದ್ವಿಪಕ್ಷೀಯ ಮಾತುಕತೆಯನ್ನು ಅವರು ನಡೆಸಲಿದ್ದಾರೆ. ಈ ವೇಳೆ ಅವರು ಭಾರತದ ಜೊತೆಗೆ ಮಹತ್ವದವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
9:16 AM, 24 Feb
ಟ್ರಂಪ್ ಅವರು ಸೋಮವಾರ ದೆಹಲಿಯ ಐಷಾರಾಮಿ ಮೌರ್ಯ ಹೋಟೆಲ್ನಲ್ಲಿ ತಂಗಲಿದ್ದಾರೆ. ಈ ಹೋಟೆಲ್ ಹಾಗೂ ಅದಕ್ಕೆ ಹೋಗುವ ಮಾರ್ಗಗಳಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಹೋಟೆಲ್ ಪಕ್ಕದ ಕಟ್ಟಡಗಳಲ್ಲಿ ಶಾರ್ಪ್ ಶೂಟರ್ಗಳನ್ನು ನಿಯೋಜಿಸಲಾಗಿದೆ. ಶ್ವಾನ ಘಟಕ, ಕಮಾಂಡೋಗಳು, ಎನ್ಎಸ್ಜಿ ಸಿಬ್ಬಂದಿ, ಸ್ನೈಪರ್ ಗಳಿಂದ ಭದ್ರತೆ ಒದಗಿಸಲಾಗಿದೆ.
9:18 AM, 24 Feb
ಮಂಗನ ಕಾಯಲು 125 ಪೊಲೀಸರ ನಿಯೋಜನೆ
ತಾಜ್ಮಹಲ್ನಲ್ಲಿ ಅಂದಾಜು 5 ಸಾವಿರ ಮಂಗಗಳು ಇವೆ. ಟ್ರಂಪ್ ಭೇಟಿ ವೇಳೆ ಇವು ಹಠಾತ್ ದಾಳಿ ಮಾಡಬಹುದು ಎಂಬ ಕಾರಣಕ್ಕೆ ಅವು ಹತ್ತಿರ ಬರದಂತೆ ನೋಡಿಕೊಳ್ಳಲು 125 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
9:58 AM, 24 Feb
ಟ್ರಂಪ್ ಊಟದ ಮೆನು
ಖಮನ್ ಡೋಕ್ಲಾ, ಬಹುಧಾನ್ಯದ ರೋಟಿ, ಸಮೋಸ, ಜೇನುತುಪ್ಪದ ಬಿಸ್ಕೆಟ್. ಎಳನೀರು, ಐಸ್ ಟೀ, ವಿಶೇಷ ಚಹಾ, ಇತರೆ ತಿನಿಸುಗಳನ್ನು ಟ್ರಂಪ್ ಮಧ್ಯಾಹ್ನ ಸವಿಯಲಿದ್ದಾರೆ.
10:15 AM, 24 Feb
ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಜನರು
ಅಹಮದಾಬಾದಿನ ಮಾಟೆರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ಟೇಡಿಯಂ ಬಳಿ ಸರತಿಯಲ್ಲಿ ನಿಂತಿರುವ ಜನರು
Gujarat: People form queues outside Motera Stadium in Ahmedabad, gather in the vicinity and occupy seats at the stadium ahead of 'Namaste Trump' event here today. pic.twitter.com/HzC34bXRJU
ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌ಗೆ ಆಗಮಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೆಲಾನಿಯಾ ಟ್ರಂಪ್ ಕೂಡ ಆಗಮಿಸಲಿದ್ದಾರೆ.
Gujarat: Prime Minister Narendra Modi arrives in Ahmedabad. US President Donald Trump and First Lady Melania Trump, along with with a high-level delegation, is arriving here today. pic.twitter.com/onCERHwppK
11 ಗಂಟೆಗೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಅಧ್ಯಕ್ಷ ವಿಮಾನ ಲ್ಯಾಂಡಿಂಗ್ ಆಗಲಿದೆ. 12.15ಕ್ಕೆ ಸಬರಮತಿ ಆಶ್ರಮಕ್ಕೆ ಭೇಟಿ, ಮೊತೆರಾ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಭಾಷಣ, 3.30ಕ್ಕೆ ಆಗ್ರಾಕ್ಕೆ ಪ್ರಯಾಣ, 5.15 ತಾಜ್ ಮಹಲ್‌ಗೆ ಭೇಟಿ, 7.30ಕ್ಕೆ ಟ್ರಂಪ್ ದೆಹಲಿಗೆ ತೆರಳಲಿದ್ದಾರೆ.
11:06 AM, 24 Feb
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಖುದ್ದಾಗಿ ನರೇಂದ್ರ ಮೋದಿಯವರೇ ಅಹಮದಾಬಾದ್ ಏರ್ಪೋರ್ಟ್ನಲ್ಲಿ ಬರಮಾಡಿಕೊಳ್ಳಲಿದ್ದಾರೆ.
11:26 AM, 24 Feb
ಇನ್ನು ಕೆಲವೇ ಕ್ಷಣಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಲಿದ್ದಾರೆ.
11:28 AM, 24 Feb
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಅಹಮದಾಬಾದ್ನ ಮೊಟೆರಾ ಸ್ಟೇಡಿಯಂಗೆ ಆಗಮಿಸಿದ್ದಾರೆ.
11:41 AM, 24 Feb
ಅಹಮದಾಬಾದ್ನ ಏರ್ಪೋರ್ಟ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮಿಸಿದ್ದಾರೆ.
11:44 AM, 24 Feb
ವೆಲ್ಕಮ್ ಟ್ರಂಪ್
ಪತ್ನಿ ಮೆಲಾನಿಯಾ ಟ್ರಂಪ್ ಹಾಗೂ ಪುತ್ರಿ ಇವಾಂಕಾ ಜೊತೆ ಡೊನಾಲ್ಡ್ ಟ್ರಂಪ್ ಆಗಮಿಸಿದ್ದಾರೆ.
#WATCH live from Gujarat: US President Donald Trump and First Lady Melania Trump arrive in Ahmedabad. https://t.co/xZJn4qg80b
ಗುಜರಾತ್ ಶೈಲಿಯಲ್ಲಿ ರೆಡ್ ಕಾರ್ಪೆಟ್ ಹಾಸಿ ಡೊನಾಲ್ಡ್ ಟ್ರಂಪ್ ಅವರನ್ನು ಬರಮಾಡಿಕೊಂಡರು.
12:01 PM, 24 Feb
ಸಾಬರಮತಿ ಆಶ್ರಮದ
ಸಾಬರಮತಿ ಆಶ್ರಮದತ್ತ ತೆರಳಿದ ಮೋದಿ, ಡೊನಾಲ್ಡ್ ಟ್ರಂಪ್
12:06 PM, 24 Feb
ಏರ್ಪೋರ್ಟ್ನಿಂದ ಸಬರಮತಿ ಆಶ್ರಮದ ವರೆಗೆ ರೋಡ್ಶೋ, 50 ವೇದಿಕೆಗಳಲ್ಲಿ ವಿವಿಧ ಕಲಾತಂಡಗಳಿಂದ ನೃತ್ಯ ಪ್ರದರ್ಶನ.
12:14 PM, 24 Feb
22 ಕಿ.ಮೀ ರೋಡ್ಶೋ
ಇದೇ ಮೊದಲ ಬಾರಿಗೆ 22 ಕಿ.ಮೀ ರೋಡ್ ಶೋ ನಡೆಯುತ್ತಿದ್ದು, ಇದುವರೆಗೂ ನಗರದೊಳಗೆ 22 ಕಿ.ಮೀ ರೋಡ್ಶೋ ಎಂದೂ ನಡೆದಿಲ್ಲ. ಮೋದಿ ಟ್ರಂಪ್ ಹೋಗುವ ದಾರಿಯ ಇಕ್ಕೆಲಗಳಲ್ಲಿ ಕಲಾತಂಡಗಳಿಂದ ವಿವಿಧ ಬಗೆಯ ಕಲಾ ಪ್ರದರ್ಶನಗಳು ಕಣ್ಮನ ಸೆಳೆಯುತ್ತಿವೆ.
12:17 PM, 24 Feb
ರಸ್ತೆಯ ಎರಡೂ ಬದಿಗಳಲ್ಲಿ ಜನರು ನಿಂತಿದ್ದು, ಮೋದಿ, ಟ್ರಂಪ್ ಹೆಸರಿನಲ್ಲಿ ಜೈಕಾರ ಕೂಗುತ್ತಿದ್ದಾರೆ.