2023ರಲ್ಲಿ ಅತೀ ಹೆಚ್ಚು ಮಾರಾಟವಾದ ಕಾರು ಇದೀಗ ಬರಲಿದೆ ಹೊಸ ಮಾದರಿಯಲ್ಲಿ- ದರ, ವಿಶೇಷತೆ ತಿಳಿಯಿರಿ

ಸಾಮಾನ್ಯವಾಗಿ ದಸರಾ ಬಂತೆಂದಂತೆ ಸಾಕು ಈ ವೇಳೆ ಆಯುಧಪೂಜೆ ಇರುವುದರಿಂದ ಹೆಚ್ಚಾಗಿ ವಾಹನಗಳನ್ನು ಖರೀದಿ ಮಾಡುತ್ತಾರೆ. ಅದೇನೇ ಇರಲಿ ಇಂತಹ ವರ್ಷದಲ್ಲಿ ಈ ಕಂಪನಿಯ ಕಾರುಗಳು ಅತೀ ಹೆಚ್ಚು ಮಾರಾಟವಾಗಿವೆ ಎನ್ನುವ ದತ್ತಾಂಶಗಳು ಬಿಡುಗಡೆಯಾಗುತ್ತವೆ. ಹಾಗಾದರೆ ಕಳೆದ ವರ್ಷ ಅತೀ ಹೆಚ್ಚು ಮಾರಾಟವಾದ ಕಾರು ಯಾವುದು ಗೊತ್ತಾ? ಹಾಗೂ ಇದೇ ಕಾರು 2024ಕ್ಕೆ ಹೊಸ ಮಾದರಿಯಲ್ಲಿಯೂ ಬರಲಿದೆ. ಇಲ್ಲಿದೆ ಮಾಹಿತಿ ತಿಳಿಯಿರಿ.

2023ರಲ್ಲಿ ಅತೀ ಹೆಚ್ಚು ಮಾರಾಟವಾದ ಕಾರು ಮಾರುತಿ ಸುಜುಕಿ ಸ್ವಿಫ್ಟ್ ಆಗಿದೆ. ಇದೇ ಕಾರನ್ನೇ ಈಗಲೂ ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಏಕೆಂದರೆ ಕಡಿಮೆ ದರಲ್ಲಿ ಸಿಗುವ ಸ್ಟೈಲಿಶ್‌ ಮಾಡೆಲ್‌ ಕಾರು ಇದೇ ಆಗಿದೆ. ಅಲ್ಲದೆ ಇದು ಮಾರುತಿ ಸುಜುಕಿ ವ್ಯಾಗ್ನರ್ ಮತ್ತು ಮಾರುತಿ ಸುಜುಕಿ ಬಲೆನೊದಂತಹ ಕಾರುಗಳನ್ನು ಹಿಂದಿಕ್ಕಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 Do you know which is the highest selling car in 2023?, know details

ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ 2023ರಲ್ಲಿ 2,03,500 ಸ್ವಿಫ್ಟ್ ಘಟಕಗಳನ್ನು ಮಾರಾಟ ಮಾಡಿದೆ. ಸ್ವಿಫ್ಟ್‌ ಕಾರಿನ ದರ 5.99-9.03 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)ವರೆಗೂ ಇದೆ. ಆದರೂ ಮಾರುತಿ ಈಗಾಗಲೇ ತನ್ನ ಸಂಪೂರ್ಣ ಪಟ್ಟಿಯಲ್ಲಿ ಜನವರಿಯಲ್ಲಿ ಕಾರ್ ಬೆಲೆ ಹೆಚ್ಚಳವನ್ನು ಘೋಷಿಸಿರುವುದರಿಂದ ಬೆಲೆಗಳು ಏರಿಕೆ ಆಗುವ ಸಾಧ್ಯತೆಯಿದೆ ಹೆಚ್ಚಿದೆ ಎನ್ನುವ ಮಾಹಿತಿ ಇದೆ.

ಇನ್ನು ಸ್ವಿಫ್ಸ್‌ ಕಾರಿನ ಎಡಭಾಗದಲ್ಲಿ 1.2-ಲೀಟರ್ ಕೆಸೀರೀಸ್ ಡ್ಯುಯಲ್-ಜೆಟ್ ಡ್ಯುಯಲ್ವಿವಿಟಿ ಪೆಟ್ರೋಲ್ ಎಂಜಿನ್ ಇದೆ. ಇದು 89.7PS ಗರಿಷ್ಠ ಶಕ್ತಿ ಮತ್ತು 113Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 5-ವೇಗದ MT ಅಥವಾ 5-ವೇಗದ AMT ಯೊಂದಿಗೆ ಜೋಡಿಸಬಹುದು. 5-ವೇಗದ MTಯೊಂದಿಗೆ ಸಿಎನ್ ಜಿ ಆಯ್ಕೆ (77.5PS ಮತ್ತು 98.5Nm) ಸಹ ಇದೆ.

ಅಲ್ಲದೆ ಇದೀಗ ಮಾರುತಿ 2024ರಲ್ಲಿ ಭಾರತದಲ್ಲಿ ಹೊಸ ಸ್ವಿಫ್ಟ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೊಸ ಮಾದರಿಯ ಕಾರನ್ನು ಮೊದಲು ಜಪಾನ್ ಮೊಬಿಲಿಟಿ ಶೋ 2023ರಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಪ್ರದರ್ಶಿಸಲಾಯಿತು. ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಹೊಸ ಮಾದರಿಯ ಕಾರು ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+