ಕೇವಲ ₹82,00,000 ಬೆಲೆಯ ಸಿಂಗಲ್‌ ಸೀಟರ್‌ ಪುಟ್ಟ ಕಾರಿನ ಬಗ್ಗೆ ನೀವು ತಿಳಿಯಲೇಬೇಕು

ನವದೆಹಲಿ, ಮೇ, 28: ಆಟೋಮೊಬೈಲ್‌ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ದೊಡ್ಡ ದೊಡ್ಡ ಬದಲಾವಣೆಗಳಾಗುತ್ತಿವೆ. ಹೀಗೆ ಸ್ಪರ್ಧೆ ಹೆಚ್ಚಾಗಿರುವ ಹಿನ್ನೆಲೆ ಎಲ್ಲಾ ಕಂಪನಿಗಳು ಹೊಸ ಮಾದರಿಯ ವಾಹನಗಳನ್ನು ಬಿಡುವ ಮೂಲಕ ಗ್ರಾಹಕರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿದೆ. ಮತ್ತೊಂದೆಡೆ ಇದೀಗ ಹಳೇ ಕಾಲದ ಒಂದು ಸೀಟರ್‌ವುಳ್ಳ 84,00,000 ರೂಪಾಯಿ ಮೊತ್ತದ ಪುಟ್ಟ ಕಾರೊಂದು ಭಾರೀ ಸೌಂಡ್‌ ಮಾಡುತ್ತಿದೆ. ಹಾಗಾದರೆ ಇದು ಬಿಡುಗಡೆಯಾಗಿದ್ದು ಯಾವಾಗ ಹಾಗೂ ಏನೆಲ್ಲಾ ವಿಶೇಷತೆಗಳನ್ನು ಒಳಗೊಡಿದೆ ಎಂದು ಇಲ್ಲಿ ತಿಳಿಯಿರಿ.

ಹಳೆ ಕಾಲದ ಸೌಂಡ್‌ ಪಾರ್ಟ್‌ ಕರೆಂದರೆ ಅದು ಅಂಬಾಸೀಡರ್‌ ಆಗಿತ್ತು. ಆದರೆ ಇದರ ಬೆಲೆ ಆಗಿನ ಕಾಲದಲ್ಲಿ ತುಂಬಾ ಕಡಿಮೆಯಿತ್ತು. ಆದರೂ ಆ ವೇಳೆ ಈ ಕಾರನ್ನು ಶ್ರೀಮಂತರು, ರಾಜ, ಮಹರಾಜರು, ಸರ್ಕಾರಿ ಅಧಿಕಾರಿಗಳಿ ಮಾತ್ರ ಬಳಕೆ ಮಾಡುತ್ತಿದ್ದರು. ಇದೀಗ ಈ ಮಾದರಿಯ ಕಾರು ಸಂಪೂರ್ಣ ಬ್ಯಾನ್‌ ಆಗಿದೆ. ಆದರೂ ಇದರ ಹೆಸರು ಮಾತ್ರ ಅಜರಾಮರವಾದಂತೆ ಎಂಥವರ ಬಾಯಲ್ಲೂ ಕೇಳಿಬರುತ್ತಿದೆ.

Do you know about cost of 82 00 000 single seater small car

ಹಾಗೆಯೇ ಇದೀಗ ಮತ್ತೊಂದು ಹಳೆಯ ಕಾಲದ ಒಂದು ಸೀಟರ್‌ ಕಾರೊಂದು ಭಾರೀ ಸದ್ದು ಮಾಡುತ್ತಿದೆ. ಆ ಕಾರೇ PEEL P50 ಆಗಿದ್ದು, ಇದರ ವಿಶೇಷತೆಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ವಿಶ್ವದ ಅತ್ಯಂತ ಚಿಕ್ಕ ಕಾರಿನ ಅಳತೆ: PEEL P 50 ವಿಶ್ವದ ಅತ್ಯಂತ ಚಿಕ್ಕ ಕಾರು ಆಗಿದೆ. ಸಾಮಾನ್ಯವಾಗಿ ಕಾರು ನಾಲ್ಕು ಚಕ್ರಗಳನ್ನು ಹೊಂದಿರುತ್ತದೆ. ಆದರೆ ಈ ಕಾರು ಮೂರು ಚಕ್ರಗಳನ್ನು ಒಳಗೊಂಡಿದೆ. ಇದರ ಉದ್ದ 134 ಸೆಂಟಿ ಮೀಟರ್‌ ಇದ್ದು, ಒಬ್ಬರೇ ಕುಳಿತುಕು ಪ್ರಯಾಣ ಮಾಡಬಹುದಾಗಿದೆ.

ಪೀಲ್‌ ಕಾರಿನ ತಯಾರಕರು ಯಾರು: ಇನ್ನು ಈ ಕಾರನ್ನು PEEL ಎಂಬ ಆಟೋಮೊಬೈಲ್ಸ್ ಕಂಪನಿಯು 1962ರಲ್ಲಿ ತಯಾರು ಮಾಡಿದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಅಲೆಕ್ಸ್‌ ಆರ್ಚಿನ್‌ ಎಂಬ ವಿನ್ಯಾಸಕ ಇದನ್ನು ತಯಾರು ಮಾಡಿದ್ದು, ಇದರ ಅಗಲ 98 ಸೆಂಟಿ ಮೀಟರ್‌, ಎತ್ತರ 100 ಸೆಂಟಿ ಮೀಟರ್‌ ಆಗಿದೆ.

ತೂಕ ಎಷ್ಟು?: ತೂಕದ ವಿಚಾರಕ್ಕೆ ಬಂದರೆ, ಈ ಕಾರು ಬೈಕ್‌ನ ತೂಕಕ್ಕಿಂತ ಕಡಿಮೆಯಿದೆ. ಕೇವಲ ಬರೀ 59 ಕೆ.ಜಿ. ತೂಕವುಳ್ಳ ಈ ಕಾರಿನ ದರ ‌84,00,000 ರೂಪಾಯಿ ಆಗಿದೆ ಎಂದು ತಿಳಿದುಬಂದಿದೆ. 2010ರಲ್ಲಿ ಇದು ವಿಶ್ವದ ಅತ್ಯಂತ ಚಿಕ್ಕ ಕಾರು ಎಂದು ಗಿನ್ನಿಸ್‌ ಬುಕ್‌ ಆರ್ಫ್ ವರರ್ಲ್ಡ್ ರೆಕಾರ್ಡ್ಸ್ ಅನ್ನು ಪ್ರವೇಶ ಮಾಡಿದ್ದು, ಇದೀಗ ಇದರ ಹೆಸರು ಎಲ್ಲಡೆ ಭಾರೀ ಸದ್ದು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+