ಭಾರತವನ್ನು 2019ರಲ್ಲೇ ಪ್ರವೇಶಿಸಿತ್ತು ಕೊರೊನಾವೈರಸ್!

ನವದೆಹಲಿ, ಜೂನ್ 4: ಕೊರೊನಾ ವೈರಸ್ 2019ರ ನವೆಂಬರ್‌ನಲ್ಲೇ ಭಾರತವನ್ನು ಪ್ರವೇಶಿಸಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

Recommended Video

      ಏಕದಿನದಲ್ಲಿ ವೇಗದ 10,000 ರನ್ ದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳು | virat kohli | Oneindia Kannada

      ಇದು 2019ರಲ್ಲೇ ಪ್ರವೇಶಿಸಿದ್ದರೂ ವ್ಯಾಪಕವಾಗಿ ಹರಡು ಆರಂಭಿಸಿರಲಿಲ್ಲ. ಯಾರ ಗಮನಕ್ಕೂ ಬಂದಿರಲಿಲ್ಲ ಎಂದಿದ್ದಾರೆ.

      ಹೈದರಾಬಾದ್ ಮೂಲದ ಸೆಂಟರ್ ಫಾರ್ ಸೆಲ್ಯುಲಾರ್ ಆಂಡ್ ಮಾಲಿಕ್ಯುಲರ್ ಬಯಾಲಜಿಯ ವಿಜ್ಞಾನಿಗಳ ಪ್ರಕಾರ ಈ ವೈರಾಣು 2019ರ ನವೆಂಬರ್ 26 ರಿಂದ ಡಿಸೆಂಬರ್ 25ರ ನಡುವೆ ಭಾರತವನ್ನು ಪ್ರವೇಶಿಸಿತ್ತು.

      ಕೇರಳದ ಮೊದಲ ಸೋಂಕಿಗೆ ಚೀನಾದ ವೈರಾಣುವಿನ ವಂಶ

      ಕೇರಳದ ಮೊದಲ ಸೋಂಕಿಗೆ ಚೀನಾದ ವೈರಾಣುವಿನ ವಂಶ

      ಕೇರಳದಲ್ಲಿ ವರದಿಯಾದ ಮೊದಲ ಪ್ರಜರಣದಲ್ಲಿ ಪತ್ತೆಯಾಗಿದ್ದ ವೈರಾಣು ಚೀನಾದ ವುಹಾನ್‌ನಲ್ಲಿರುವ ವೈರಾಣುವಿನ ವಂಶವಾಗಿತ್ತು. ಆದರೆ, ಹೈದರಾಬಾದ್ ನಲ್ಲಿ ಪತ್ತೆಯಾದ ಕೊರೊನಾ ಸೋಂಕಿಗೆ ಅದಕ್ಕಿಂತ ಭಿನ್ನವಾದ ವಂಶಕ್ಕೆ ಸೇರಿದ್ದ ವೈರಾಣು ಕಾರಣವಾಗಿತ್ತು. ಇದು ಆಗ್ನೇಯ ಏಷ್ಯಾದಿಂದ ಬಂದ ವ್ಯಕ್ತಿಯಿಂದ ವ್ಯಾಪಿಸಿರಬಹುದು ಎಂದು ಅಂದಾಜಿಸಲಾಗಿದೆ.

      ಹೊಸ ವಂಶಕ್ಕೆ ಸೇರಿದ ಕೊರೊನಾ ವೈರಸ್

      ಹೊಸ ವಂಶಕ್ಕೆ ಸೇರಿದ ಕೊರೊನಾ ವೈರಸ್

      ಭಾರತದಲ್ಲಿ ವ್ಯಾಪಕವಾಗಿ ಹಬ್ಬಿರುವ ಕೊರೊನಾ ವೈರಸ್ ಪೂರ್ವ ರೂಪವನ್ನು ಪರಿಶೀಲಿಸಿದಾಗ ಅದರ ವಂಶ ಚೀನಾ ಮೂಲದ್ದು ಎಂಬುದು ಖಚಿತಪಟ್ಟಿದೆ. ಆದರೆ ಈ ಮೊದಲು ಪತ್ತೆಯಾಗಿರುವ ಕ್ಲಾಡ್ ಐ/ಎ3 ಭಿನ್ನವಾದ ಹೊಸ ವಂಶಕ್ಕೆ ಸೇರಿದ್ದಾಗಿದೆ ಎಂದು ತಿಳಿಸಿದ್ದಾರೆ.

      2020ರ ಜನವರಿ 20ರ ವರೆಗೆ ಹೆಚ್ಚು ಪರೀಕ್ಷೆಗಳು ನಡೆದಿಲ್ಲ

      2020ರ ಜನವರಿ 20ರ ವರೆಗೆ ಹೆಚ್ಚು ಪರೀಕ್ಷೆಗಳು ನಡೆದಿಲ್ಲ

      2020ರ ಜನವರಿ 30ರವರೆಗೆ ಭಾರತದಲ್ಲಿ ವ್ಯಾಪಕವಾಗಿ ಕೊವಿಡ್ 19 ಪರೀಕ್ಷೆಗಳು ನಡೆಯುತ್ತಿರಲಿಲ್ಲ. ಹಾಗಾಗಿ ಈ ವೈರಾಣು ಚೀನಾ ಮೂಲದಿಂದಲೇ ಬಂದು ಭಾರತಕ್ಕೆ ದಾಳಿ ಇಟ್ಟಿತ್ತು.

      ನವೆಂಬರ್‌ನಿಂದಲೇ ವ್ಯಾಪಿಸಿತ್ತು

      ನವೆಂಬರ್‌ನಿಂದಲೇ ವ್ಯಾಪಿಸಿತ್ತು

      ಭಾರತದಲ್ಲಿ 2019ರ ನವೆಂಬರ್‌ನಿಂದಲೇ ಕೊರೊನಾ ಸೋಂಕು ದಾಳಿ ಇಟ್ಟಿತ್ತು. ವೈರಾಣುವಿನ ತೀರಾ ಇತ್ತೀಚಿನ ಸಾಮಾನ್ಯ ಪೂರ್ವರೂಪ ಕ್ರಮವನ್ನು ಆಧರಿಸಿ ವಿದ್ಯಾರ್ಥಿಗಳು ಭಾರತದಲ್ಲಿ ವ್ಯಾಪಕವಾಗಿರುವ ವೈರಾಣುವಿನ ಮೂಲರೂಪವನ್ನು ಪರಿಶೀಲನೆ ಮಾಡಿದಾಗ ಅದು, ಚೀನಾ ಮೂಲದ್ದು ಎಂಬುದು ಖಚಿತವಾಗಿದೆ. ಅದು ಒಂದು ವರ್ಷದ ಹಿಂದಿನಿಂದಲೇ ಭಾರತದಲ್ಲಿ ವ್ಯಾಪಿಸಲು ಆರಂಭಿಸಿತ್ತು ಎಂದು ತಿಳಿದುಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+