Delhi Government: ಫೆ. 20ಕ್ಕೆ ದೆಹಲಿ ಬಿಜೆಪಿ ಸರ್ಕಾರ ರಚನೆ! ಸಿಎಂ ಸ್ಥಾನದ ಆಕಾಂಕ್ಷಿಗಳ ಇವರೇ ನೋಡಿ
ನವದೆಹಲಿ, ಫೆಬ್ರವರಿ 17: ದೆಹಲಿ ರಾಜ್ಯ ವಿಧಾನಸಭಾ ಚುನಾವಣೆ 2025 ಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಮಣಿಸಿ ಅಧಿಕಾರಕ್ಕೆ ಬರುವ ಸವಾಲನ್ನು ಯಶಸ್ವಿಯಾಗಿ ಎದುರಿಸಿದ ಬಿಜೆಪಿಗೆ ಇದೀಗ ಮುಖ್ಯಮಂತ್ರಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಸವಾಲು ಎದುರಾಗಿದೆ. ಸಿಎಂ ಹುದ್ದೆಯ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಈ ಸಂಬಂಧ ಮಹತ್ವದ ಸಭೆ ನಡೆಯಲಿದೆ.
ದೆಹಲಿ ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಬುಧವಾರ ಫೆಬ್ರವರಿ 19ರಂದು ಬಿಜೆಪಿಯು ಮಹತ್ವದ ಸಭೆ ನಡೆಸಲಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇದಾಗಿದ್ದು, ಇದರಲ್ಲಿ ಸಿಎಂ ಅಭ್ಯರ್ಥಿ ಯಾರೆಂದು ವರಿಷ್ಠರು ತೀರ್ಮಾನಿಸಲಿದ್ದಾರೆ. ಅಂದಿನ ಸಭೆ ಬಳಿಕ ಸಿಎಂ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ.

ಫೆಬ್ರವರಿ 20ರಂದು ದೆಹಲಿ ಮುಖ್ಯಮಂತ್ರಿ ಯಾರೆಂದು ಬಿಜೆಪಿ ನಿರ್ಧರಿಸಲಾಗುವುದು. ಮುಖ್ಯಮಂತ್ರಿ ಹುದ್ದೆ ಯಾರೆಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಯಾರೆಲ್ಲಾ ದೆಹಲಿ ಸಿಎಂ ರೇಸಿನಲ್ಲಿ ಇದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಸಿಎಂ ಪ್ರಬಲ ಆಕಾಂಕ್ಷಿಗಳ ಪಟ್ಟಿ
* ಪರ್ವೇಶ್ ವರ್ಮಾ
* ಬಿಜೆಪಿ ರಾಜ್ಯಾಧ್ಯಕ್ಷ ವಿರೇಂದ್ರ ಸಚ್‌ದೇವಾ,
* ಆಶಿಷ್ ಸೂದ್
* ಜಿತೇಂದ್ರ ಮಹಾಜನ್
* ರೇಖಾ ಗುಪ್ತಾ
* ಶಿಖಾ ರಾಯ್ ಹಾಗೂ ಇತರರ ಅಭ್ಯರ್ಥಿಗಳು
ದೆಹಲಿ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಆಪ್ ಮಾಜಿ ಸಚಿವ ಸೌರಭ್ ಭಾರಧ್ವಾಜ್ ಅರನ್ನು ಮಣಿಸಿದ ಶಿಖಾ ರಾಯ್ ಅವರು ಸಹ ರೇಸಿನಲ್ಲಿ ಕೇಳಿ ಬರುತ್ತಿರುವ ಪ್ರಮುಖ ಹೆಸರುಗಳಾಗಿವೆ.
ದೆಹಲಿಗೆ ಇಬ್ಬರು ಉಪಮುಖ್ಯಮಂತ್ರಿಗಳ ಘೋಷಣೆ
ಮುಖ್ಯಮಂತ್ರಿ ಆಯ್ಕೆ ಮಾಡುವುದರ ಜೊತೆ ಜೊತೆಗೆ ಇಬ್ಬರು ಉಪಮುಖ್ಯಮಂತ್ರಿಗಳ ಹೆಸರು ಸಹ ಘೊಷಣೆ ಆಗುವುದಿದೆ. ಹೀಗಾಗಿ ಹೊಸ ಸರ್ಕಾರ ಇದೇ ಫೆಬ್ರವರಿ 20ರಂದು ರಚನೆ ಆಗುವ ನಿರೀಕ್ಷೆ ಇವೆ. ಒಂದು ವೇಳೆ ಮತ್ತೆ ವಿಳಂಬವಾದರೂ ಫೆಬ್ರವರಿ ಅಂತ್ಯದೊಳಗೆ ಸರ್ಕಾರ ರಚನೆಯಾಗಿ ಬಿಜೆಪಿಯಿಂದ ನೂತನ ಸಿಎಂ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮೂಲಗಳೂ ಮಾಹಿತಿ ನೀಡಿವೆ.
ದೆಹಲಿಯಲ್ಲಿ ಎಎಪಿಗೆ ವಿಪಕ್ಷ ಸ್ಥಾನ
1993 ರಿಂದ 1998 ರವರೆಗೆ ದೆಹಲಿಯಲ್ಲಿ ಅಧಿಕಾರ ನಡೆಸಿದ ಬಿಜೆಪಿ ನಂತರ ಸೋಲಬೇಕಾಯಿತು. ಆಮೇಲೆ ಕಾಂಗ್ರೆಸ್ ಬಂದಿದ್ದು, ಅದು 2025ರ ಚುನಾವಣೆಯಲ್ಲಿ ಸೋಲುಂಡಿತು. ಅಲ್ಲಿಂದ ಎರಡು ಬಾರಿ ಎಎಪಿ ಅಧಿಕಾರ ಗದ್ದುಗೆ ಏರಿತ್ತು. ಇದೀಗ 2025 ದೆಹಲಿ ಚುನಾವಣೆಯಲ್ಲಿ 70 ಕ್ಷೇತ್ರಗಳಲ್ಲಿ ಬಿಜೆಪಿ 48 ಸೀಟು ಬಾಚಿಕೊಂಡರೆ, ಎಎಪಿ 22 ಸೀಟು ಗೆಲ್ಲುವ ಮೂಲಕ ವಿಪಕ್ಷ ನಾಯಕನ ಸ್ಥಾನದಲ್ಲಿ ಕೂತಿತು. ಕಾಂಗ್ರೆಸ್‌ಗೆ ಇಲ್ಲಿ ಒಂದೇ ಒಂದು ಸೀಟು ಬಂದಿಲ್ಲ.












Click it and Unblock the Notifications