Delhi-Jaipur Expressway: ಹೆದ್ದಾರಿ ನಿರ್ಮಾಣ ವೆಚ್ಚಕ್ಕಿಂತ 6 ಪಟ್ಟು ಟೋಲ್‌ ವಸೂಲಿ ಯಾಕೆ? ನಿತಿನ್‌ ಗಡ್ಕರಿ ಹೇಳಿದ್ದೇನು?

Delhi-Jaipur Expressway: ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ ವೇ 12, 2023ರಂದು ಉದ್ಘಾಟನೆ ಆಗಿದ್ದು, ಇದರ ನಿರ್ಮಾಣ ವೆಚ್ಚಕ್ಕಿಂತ 6 ಪಟ್ಟು ಟೋಲ್‌ ವಸೂಲಿ ಮಾಡಲಾಗಿದೆ. ಇದಕ್ಕೆ ಕಾರಣ ಏನು ಎಂದು ಕೇಳಿರುವ ಪ್ರಶ್ನೆಗಳಿಗೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕೊಟ್ಟ ಉತ್ತರ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಈ ಹೆದ್ದಾರಿ ನಿರ್ಮಾಣ ಮಾಡಲು 1,900 ಕೋಟಿ ರೂಪಾಯಿ ವೆಚ್ಚ ಆಗಿದೆ. 8,000 ಕೋಟಿ ರೂಪಾಯಿ ಟೋಲ್ ಏಕೆ ಸಂಗ್ರಹ ಮಾಡಿದ್ದಾರೆ. ಈ ಮೂಲಕ ನಿರ್ಮಾಣ ವೆಚ್ಚಕಿಂತಲೂ ಅಧಿಕ ಟೋಲ್ ಸಂಗ್ರಹ ಮಾಡಲಾಗಿದೆ. ಈ ಕುರಿತು ಮಾತನಾಡಿರುವ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಟೋಲ್ ಸಂಗ್ರಹವು ಒಂದು ದಿನದಲ್ಲಿ ನಡೆಯುವುದಿಲ್ಲ. ಅದರ ಮೊದಲು ಮತ್ತು ನಂತರ ಅನೇಕ ವೆಚ್ಚಗಳು ಇವೆ ಎಂದು ಹೇಳಿದ್ದಾರೆ.

Delhi-Jaipur Expressway Nitin Gadkari tells Why Toll Fees Are Six Times Higher Than highway Costs

"ನಗದು ನೀಡಿ ಕಾರು ಅಥವಾ ಮನೆ ಖರೀದಿ ಆದರೆ, ಅದರ ಬೆಲೆ 2.5 ಲಕ್ಷ ರೂಪಾಯಿ ನೀವು ಇದನ್ನು 10 ವರ್ಷಗಳವರೆಗೆ ಸಾಲದಲ್ಲಿ ತೆಗೆದುಕೊಂಡರೆ ಅದರ ಬೆಲೆ 5.5ರಿಂದ 6 ಲಕ್ಷ ರೂಪಾಯಿ ಪ್ರತಿ ತಿಂಗಳು ಬಡ್ಡಿ ಕಟ್ಟಬೇಕಾಗುತ್ತದೆ. ಹಲವು ಬಾರಿ ಸಾಲ ಪಡೆದು ಕೆಲಸ ಮಾಡುತ್ತೇವೆ," ಎಂದು ಹೇಳಿದ್ದಾರೆ.

ದೆಹಲಿ-ಜೈಪುರ ಹೆದ್ದಾರಿ NH-8ನಲ್ಲಿ ಹೆಚ್ಚಿನ ಟೋಲ್ ವಸೂಲಿ ಮಾಡುವ ಬಗ್ಗೆ ಮಾತನಾಡಿದ ಅವರು, ಈ ಹೆದ್ದಾರಿಗೆ 2009ರಲ್ಲಿ ಯುಪಿಎ ಸರ್ಕಾರ ಮಂಜೂರು ಮಾಡಿತ್ತು. 9 ಬ್ಯಾಂಕ್‌ಗಳು ಇದರಲ್ಲಿ ಭಾಗಿಯಾಗಿದ್ದವು. ಈ ರಸ್ತೆ ನಿರ್ಮಾಣಕ್ಕೆ ಹಲವು ಸಮಸ್ಯೆಗಳಿದ್ದು, ಬ್ಯಾಂಕ್‌ಗಳು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದವು. ಬಳಿಕ ಹೊಸ ಗುತ್ತಿಗೆದಾರರು ಬಂದರು. ಹೊಸ ಗುತ್ತಿಗೆದಾರರನ್ನು ವಜಾಗೊಳಿಸಿದ್ದೇವೆ.

ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನಾವು ಈ ರಸ್ತೆಯಲ್ಲಿ ಹೊಸ ಡಿಪಿಆರ್ ಮಾಡಿದ್ದೇವೆ. ಈ ರಸ್ತೆಯ ಎರಡೂ ಬದಿ ಅತಿಕ್ರಮಣ ಆಗಿದೆ. 6 ಲೇನ್ ಮಾಡಬೇಕಾದರೆ, ಅತಿಕ್ರಮಣ ತೆರವು ಮಾಡಬೇಕೆಂದು ಖಾತ್ರಿಪಡಿಸಲು ಪ್ರಯತ್ನಿಸಿದರು. ಈ ಬಾರಿ ಮಳೆಯಿಂದಾಗಿ ಹೆಚ್ಚಿನ ಸಮಸ್ಯೆಗಳು ಉಂಟಾಗಿವೆ. ಆದ್ದರಿಂದ ಎರಡು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಇತ್ತೀಚೆಗೆ, ಆರ್‌ಟಿಐಗೆ ಪ್ರತಿಕ್ರಿಯೆಯಾಗಿ, ರಾಜಸ್ಥಾನದಲ್ಲಿ ಟೋಲ್ ಸಂಗ್ರಹದ ಮೂಲಕ ಸುಮಾರು 8,000 ಕೋಟಿ ರೂಪಾಯಿ ಸಂಗ್ರಹ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಈ ಹೆದ್ದಾರಿ ನಿರ್ಮಾಣಕ್ಕೆ ಸುಮಾರು 1,900 ಕೋಟಿ ರೂಪಾಯಿ ಮಾತ್ರ ವೆಚ್ಚವಾಗಿದೆ. ಈ ವಿಷಯವು ದೆಹಲಿ-ಜೈಪುರ ಹೆದ್ದಾರಿಯಲ್ಲಿರುವ ಮನೋಹರಪುರ ಟೋಲ್ ಪ್ಲಾಜಾಗೆ ಸಂಬಂಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+