Delhi hit and run case: ತಪ್ಪು ಒಪ್ಪಿಕೊಂಡ ಆರೋಪಿಗಳು
ನವದೆಹಲಿ ಜನವರಿ 9: ಹೊಸ ವರ್ಷದ ಮುಂಜಾನೆ ದೆಹಲಿಯ ಯುವತಿಯೊಬ್ಬಳನ್ನು ಎಳೆದೊಯ್ದು ಕೊಂದ ಆರೋಪದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳು ಮಹಿಳೆ ಕಾರಿನಡಿ ಸಿಲುಕಿರುವುದು ತಮಗೆ ತಿಳಿದಿತ್ತು ಎಂದು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಯದಿಂದ ಕಾರನ್ನು ನಿಲ್ಲಿಸಲಿಲ್ಲ ಎಂದು ಆರೋಪಿಗಳು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.
ಜನವರಿ 1 ರಂದು ಅಂಜಲಿ ಸಿಂಗ್ ಸ್ಕೂಟಿ ಕಾರಿಗೆ ಡಿಕ್ಕಿ ಹೊಡೆದು 4 ಕಿಮೀ ಎಳೆದೊಯ್ದಿತ್ತು. ಗಂಟೆಗಳ ನಂತರ ಐವರನ್ನು ಬಂಧಿಸಲಾಯಿತು. ಈ ಕೃತ್ಯವನ್ನು ಮುಚ್ಚಿಹಾಕಲು ಸಹಾಯ ಮಾಡಿದ ಆರೋಪಿ ಅಂಕುಶ್ ಎಂಬ ಏಳನೇ ಶಂಕಿತನನ್ನು ಪೊಲೀಸರು ಹುಡುಕುತ್ತಿದ್ದಾರೆ.
ಮಹಿಳೆ ಕಾರಿನಡಿ ಸಿಲುಕಿರುವುದು ಅರಿವಿಗೆ ಬಂದಿದೆ ಎಂದು ಪಾನಮತ್ತರಾಗಿದ್ದ ವ್ಯಕ್ತಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಅವರು ಅದೇ ಪ್ರದೇಶದ ಸುತ್ತಲೂ ಚಾಲನೆ ಮಾಡುತ್ತಿದ್ದರು ಮತ್ತು ದೇಹವನ್ನು ಅಲುಗಾಡಿಸಲು ಅನೇಕ ಯು-ಟರ್ನ್ಗಳನ್ನು ತೆಗೆದುಕೊಂಡರು. ಆದರೆ ದೇಹ ಕೆಲ ಹೊತ್ತು ಕೆಳಗೆ ಬೀಳಲಿಲ್ಲ.

'ದೇಹ ಕಾರಿಗೆ ಸಿಕ್ಕಿಕೊಂಡಿರುವುದು ತಿಳಿದಿತ್ತು' ಆರೋಪಿಗಳು
ರಾಜಧಾನಿ ದೆಹಲಿಯ ಕಂಜಾವಾಲಾ ಪ್ರದೇಶದಲ್ಲಿ ಹೊಸ ವರ್ಷದ ಮುಂಜಾನೆ ನಡೆದ ಕ್ರೌರ್ಯ (ದೆಹಲಿ ಗರ್ಲ್ ಡ್ರ್ಯಾಗ್ ಕೇಸ್) ಜನರನ್ನು ಬೆಚ್ಚಿಬೀಳಿಸಿದೆ. ಕಾರಿನಲ್ಲಿ ಬಂದ ಐವರು ಯುವಕರು ಮನೆಯೊಂದರ ದೀಪಗಳನ್ನು ನಂದಿಸಿದ್ದಾರೆ. ಸಂಸಾರದಲ್ಲಿ ಮಗನ ಕರ್ತವ್ಯ ನಿರ್ವಹಿಸಿದ ಮಗಳ ಸಾವಿನ ಸುದ್ದಿ ಕೇಳಿ ತಾಯಿ ರೋಸಿ ಹೋಗಿದ್ದಾರೆ. ಮಗಳಿಗೆ ನ್ಯಾಯ ನೀಡುವಂತೆ ಕುಟುಂಬಸ್ಥರು ಸುಲ್ತಾನಪುರಿ ಪೊಲೀಸ್ ಠಾಣೆಯ ಮುಂದೆ ತೀವ್ರ ಪ್ರತಿಭಟನೆ ನಡೆಸಿದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂತ್ರಸ್ತೆಯ ತಾಯಿಯೊಂದಿಗೆ ಮಾತನಾಡುವಾಗ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ. ಈ ನಡುವೆ ಆರೋಪಿಗಳು ಅಂಜಲಿ ದೇಹ ಕಾರಿಗೆ ಸಿಕ್ಕಿಕೊಂಡಿದ್ದರ ಬಗ್ಗೆ ತಮಗೆ ತಿಳಿದಿತ್ತು ಎಂದು ಒಪ್ಪಿಕೊಂಡಿದ್ದಾರೆ.

ಕುಟುಂಬಕ್ಕೆ ಭರವಸೆ ನೀಡಿದ ಕೇಜ್ರಿವಾಲ್
ಕಾಂಜಾವಾಲಾ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಸಂತ್ರಸ್ತ ಕುಟುಂಬ ಸದಸ್ಯರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಕೇಜ್ರಿವಾಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ದೆಹಲಿ ಸಿಎಂ ಸಂತ್ರಸ್ತೆಗೆ ನ್ಯಾಯ ದೊರಕಿಸುವ ಬಗ್ಗೆಯೂ ಮಾತನಾಡಿದ್ದಾರೆ.

ದೆಹಲಿ ಸಿಎಂ ಟ್ವೀಟ್
ಸಂತ್ರಸ್ತೆಯ ತಾಯಿಯೊಂದಿಗೆ ಮಾತನಾಡಿರುವ ದೆಹಲಿ ಸಿಎಂ ಟ್ವೀಟ್‌ನಲ್ಲಿ ಬರೆದಿದ್ದಾರೆ. ಸಂತ್ರಸ್ತೆಗೆ ನ್ಯಾಯ ಸಿಗಲಿದೆ. ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಸಂಪೂರ್ಣ ಚಿಕಿತ್ಸೆ ನೀಡಲಾಗುವುದು. ಸಂತ್ರಸ್ತ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಘಟನೆ ಬಳಿಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದರು. ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹೊಸ ವರ್ಷ ನಡೆದ ಭೀಖರ ಘಟನೆ
ಹೊಸ ವರ್ಷದ ಮಧ್ಯರಾತ್ರಿ 3 ಗಂಟೆಗೆ 5 ಯುವಕರಿದ್ದ ಕಾರು ಸ್ಕೂಟಿಯಲ್ಲಿ ಹೋಗುತ್ತಿದ್ದ 23 ವರ್ಷದ ಯುವತಿಗೆ ಡಿಕ್ಕಿ ಹೊಡೆಯಿತು. ಆಕೆಯ ದೇಹ ಕಾರಿಗೆ ಸಿಲುಕಿಕೊಂಡಿತು. ನಂತರ ಸುಮಾರು 4 ಕಿ.ಮೀ ವರೆಗೆ ಕಾರಿನಲ್ಲಿ ಸಿಕ್ಕಿಕೊಂಡ ಆಕೆಯ ದೇಹವನ್ನು ಎಳೆದೊಯ್ದರು. ಹೀಗಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ಕಾರನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಹಲವಾರು ವಿಷಯಗಳು ಬಯಲಾಗಿವೆ. ಆರೋಪಿಗಳು ಅಂಜಲಿ ದೇಹ ಕಾರಿಗೆ ಸಿಕ್ಕಿಕೊಂಡಿರುವುದು ತಿಳಿದಿತ್ತು ಎಂದು ಒಪ್ಪಿಕೊಂಡಿದ್ದಾರೆ. ಆ ವೇಳೆ ಭಯಗೊಂಡು ಕಾರು ಚಲಾಯಿಸಿದೆವು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.












Click it and Unblock the Notifications