2015ರ ಸೂರ್ಯ ಮತ್ತು ಚಂದ್ರ ಗ್ರಹಣಗಳ ಪಟ್ಟಿ

ಸೂರ್ಯ ಮತ್ತು ಚಂದ್ರ ಗ್ರಹಣ, ಸೌರಮಂಡಲದಲ್ಲಿ ಭೂಮಿ, ಸೂರ್ಯ ಮತ್ತು ಚಂದ್ರನ್ನೊಳಗೊಂಡ ಪ್ರಕ್ರಿಯೆ. ಸೂರ್ಯ ಗ್ರಹಣ ಅಮವಾಸ್ಯೆಯ ದಿನಂದದು ಮತ್ತು ಚಂದ್ರ ಗ್ರಹಣ ಹುಣ್ಣಿಮೆಯ ದಿನದಂದು ಸಂಭವಿಸುವ ವಿಚಾರ ಎಲ್ಲರಿಗೂ ತಿಳಿದಿದ್ದೇ.

ಸೂರ್ಯ ಮತ್ತು ಚಂದ್ರರನ್ನು ರಾಹು ಕೇತುಗಳು ಆವರಿಸುವುದಕ್ಕೆ ಗ್ರಹಣ ಎನ್ನುವ ನಂಬಿಕೆ ಭಾರತೀಯ ಸಮಾಜದ್ದು. ಹಾಗೆಯೇ ಗ್ರಹಣದ ಸಮಯದಲ್ಲಿ ಊಟ ಮಾಡಬಾರದು, ಗರ್ಭಿಣಿ ಹೆಂಗಸರು ಹೊರಬರಬಾರದು ಹೀಗೆ ಹತ್ತು ಹಲವಾರು ನಂಬಿಕೆಯೂ ನಮ್ಮಲ್ಲಿದೆ.

ಗ್ರಹಣದ ಸಮಯದಲ್ಲಿ ಕೆಲವು ರಾಶಿಯವರಿಗೆ ತೊಂದರೆಯಾಗುವುದು ನಿಶ್ಚಿತ. ಹೋಮ ಹವನ, ಪಾರಾಯಣ ಇತ್ಯಾದಿ ಮಾಡಿದರೆ ಉಜ್ವಲ ಭವಿಷ್ಯ ಎಂದು ಜೇಬಿಗೆ ಕತ್ತರಿ ಹಾಕುವ 'ಫಲಾನುಭವಿ' ಗಳಿಗೂ ನಮ್ಮಲ್ಲಿ ಕೊರತೆಯಿಲ್ಲ, ನಂಬಿಕೆಯೂ ನಿರಂತರ. (ಚಂದ್ರಗ್ರಹಣ ಪೋಸ್ಟ್ ಮಾರ್ಟಂ)

ಖಗೋಳ ಶಾಸ್ತ್ರಜ್ಞರ ಪ್ರಕಾರ 2015ರಲ್ಲಿ ಒಟ್ಟು ತಲಾ ಎರಡು ಸೂರ್ಯ ಮತ್ತು ಚಂದ್ರ ಗ್ರಹಣಗಳು ಸಂಭವಿಸಲಿದೆ.

Dates and Timings of Lunar and Solar Eclipses in year 2015

20.03.2015
ಮಾರ್ಚ್ 20, 2015ರಂದು ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಗ್ರಹಣದ ಸ್ಪರ್ಷ ಕಾಲ ಮಧ್ಯಾಹ್ನ 1.11 ಮತ್ತು ಮೋಕ್ಷ ಕಾಲ ಸಂಜೆ 5.20. ಇದು ಸಂಪೂರ್ಣ ಸೂರ್ಯ ಗ್ರಹಣವಾಗಿದ್ದರೂ ಇದು ಗೋಚರಿಸುವುದು ಗ್ರೀನ್ ಲ್ಯಾಂಡಿನ ಪೂರ್ವ ಕರಾವಳಿಯಲ್ಲಿ ಮಾತ್ರ. ಗ್ರಹಣ ಭಾಗಶಃ ವಾಗಿ ಯುರೋಪ್, ಏಷ್ಯಾದ ಖಂಡದ ಪೂರ್ವ (ಚೀನಾ, ಜಪಾನ್, ಕೊರಿಯಾ ಮುಂತಾದವು) ಮತ್ತು ಉತ್ತರ ಭಾಗ (ಸೈಬೀರಿಯಾ), ಆಫ್ರಿಕಾದ ಉತ್ತರ (ಈಜಿಪ್ಟ್, ಲಿಬಿಯಾ, ಸುಡಾನ್ ಇತ್ಯಾದಿ) ಮತ್ತು ಪಶ್ಚಿಮ ಭಾಗದಲ್ಲಿ (ನೈಜೀರಿಯಾ, ಐವರಿ ಕೋಸ್ಟ್, ಘಾನಾ ಇತ್ಯಾದಿ) ಗೋಚರಿಸಲಿದೆ.

04.04.15
ಎಪ್ರಿಲ್ ನಾಲ್ಕರಂದು ವರ್ಷದ ಎರಡನೇ ಗ್ರಹಣ (ಚಂದ್ರ ಗ್ರಹಣ) ಸಂಭವಿಸಲಿದೆ. ಈ ಗ್ರಹಣ ಬೆಂಗಳೂರಿನಲ್ಲೂ ಗೋಚರಿಸಲಿದೆ. ಮಧ್ಯಾಹ್ನ 2.33ಕ್ಕೆ ಗ್ರಹಣದ ಅವಧಿ ಆರಂಭವಾಗಲಿದ್ದು ರಾತ್ರಿ 8.28ಕ್ಕೆ ಮುಕ್ತಾಯಗೊಳ್ಳಲಿದೆ. ಉತ್ತರ ಮತ್ತು ದಕ್ಷಿಣ ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಏಷ್ಯಾದಲ್ಲಿ ಈ ಗ್ರಹಣ ಗೋಚರಿಸಲಿದೆ. (ಸಣ್ಣಕಥೆ : ಗ್ರಹಣ)

13.09.215
ಸಂಪೂರ್ಣ ಸೂರ್ಯ ಗ್ರಹಣ ಸೆಪ್ಟಂಬರ್ 13ರಂದು ಸಂಭವಿಸಲಿದೆ. ಬೆಳಗ್ಗೆ 10.12ಕ್ಕೆ ಆರಂಭವಾಗುವ ಗ್ರಹಣದ ಮೋಕ್ಷ ಕಾಲ ಮಧ್ಯಾಹ್ನ 14.37. ಇದು ದಕ್ಷಿಣ ಆಫ್ರಿಕಾ, ಅಂಟಾರ್ಟಿಕಾ, ಅಂಟ್ಲಾಟಿಕ್ ಮತ್ತು ಹಿಂದೂ ಮಹಾಸಾಗರದ ಭಾಗದಲ್ಲಿ ಮಾತ್ರ ಗೋಚರಿಸಲಿದೆ.

28.09.215
ಸೆಪ್ಟಂಬರ್ 28ರಂದು ಖಗ್ರಾಸ ಚಂದ್ರ ಗ್ರಹಣ ಸಂಭವಿಸಲಿದೆ. ಈ ಗ್ರಹಣ ಕೂಡಾ ಉತ್ತರ ಮತ್ತು ದಕ್ಷಿಣ ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಏಷ್ಯಾದ ಭಾಗಗಳಲ್ಲಿ ಗೋಚರಿಸಲಿದೆ. ಮಧ್ಯರಾತ್ರಿ 00.13ಕ್ಕೆ ಆರಂಭವಾಗುವ ಗ್ರಹಣ 05.22ಕ್ಕೆ ಮುಕ್ತಾಯಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+