ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲೈ ಲಾಮಾ ಸಲಹೆಗಾರರು ಕೂಡಾ ಪೆಗಾಸಸ್ ಪಟ್ಟಿಯಲ್ಲಿದ್ದರು: ವರದಿ

|
Google Oneindia Kannada News

ನವದೆಹಲಿ, ಜು.22: ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಸಲಹೆಗಾರರು, ಸರ್ಕಾರ ಮಾತ್ರ ಖರೀದಿಸ ಬಲ್ಲ ಇಸ್ರೇಲಿ ಸ್ಪೈವೇರ್ ಪೆಗಾಸಸ್‌ನ ಕಣ್ಗಾವಲು ಪಟ್ಟಿಯಲ್ಲಿ ಇದ್ದರು ಎಂದು ಸುದ್ದಿ ವೆಬ್‌ಸೈಟ್ ದಿ ವೈರ್ ಗುರುವಾರ ವರದಿ ಮಾಡಿದೆ.

ಇತರ ಬೌದ್ಧ ಧರ್ಮಗುರುಗಳು, ಹಲವಾರು ಟಿಬೆಟಿಯನ್ ಅಧಿಕಾರಿಗಳು ಮತ್ತು ಕಾರ್ಯಕರ್ತರ ದೂರವಾಣಿ ಸಂಖ್ಯೆಗಳು ಸೋರಿಕೆಯಾದ ದತ್ತಸಂಚಯದಲ್ಲಿ ಕಂಡುಬಂದಿವೆ. ಈ ಸಂಖ್ಯೆಗಳು 2017 ರ ಅಂತ್ಯದಿಂದ 2019 ರ ಆರಂಭದವರೆಗೆ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ ಎಂದು ವೈರ್‌ನಲ್ಲಿ ವರದಿಯಾಗಿದೆ.

2019 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಉರುಳಿಸುವಲ್ಲಿ ಪಾತ್ರ ವಹಿಸಿದ್ದ ಪೆಗಾಸಸ್‌!2019 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಉರುಳಿಸುವಲ್ಲಿ ಪಾತ್ರ ವಹಿಸಿದ್ದ ಪೆಗಾಸಸ್‌!

ಆದರೆ ದಲೈ ಲಾಮಾರ ಸಲಹೆಗಾರರ ಫೋನ್ ಸಂಖ್ಯೆ ಸೇರಿಸುವುದರಿಂದ ಸಲಹೆಗಾರರ ಮೇಲೆ ಪೆಗಾಸಸ್‌ನಿಂದ ಬೇಹುಗಾರಿಕೆ ನಡೆಸಲಾಗಿದೆ ಎಂದು ಅರ್ಥವಲ್ಲ. ಏಕೆಂದರೆ ಸಾಧನದ ವಿಧಿವಿಜ್ಞಾನ ಪರೀಕ್ಷೆಯ ಮೂಲಕ ಮಾತ್ರ ಅದನ್ನು ದೃಢಪಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

 Dalai Lamas Advisers Were On List Of Potential Pegasus Targets says Report

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಕೇಂದ್ರ ಸಚಿವರು ಮತ್ತು ಹಲವಾರಿ ಪತ್ರಕರ್ತರು ಈ ವಾರದ ಆರಂಭದಲ್ಲಿ ಪೆಗಾಸಸ್‌ ಪಟ್ಟಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ ದೇಶದಾದ್ಯಂತ ಭಾರೀ ಸಂಚಲನ ಸೃಷ್ಟಿಯಾಗಿದೆ. ಅಷ್ಟೇ ಅಲ್ಲದೇ ಇದು ಹಗರಣವು ವಾಟರ್ ಗೇಟ್ ಹಗರಣಕ್ಕಿಂತ ದೊಡ್ಡದು ಎಂದು ಆರೋಪಿಸಿ, ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದೆ.

ದಿ ವೈರ್ ಪ್ರಕಾರ, ದಲೈ ಲಾಮಾ ಸುತ್ತಮುತ್ತಲಿನವರ ಮೇಲೆ ಕಣ್ಗಾವಲಿನ ಮೊದಲ ದಾಖಲೆಗಳು 17 ನೇ ಗಯಾಲ್ವಾಂಗ್ ಕರ್ಮಪಾ ಸಿಬ್ಬಂದಿಗೆ ಸಂಬಂಧಿಸಿವೆ. ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಅತ್ಯುನ್ನತ ಶ್ರೇಣಿಯ ಸನ್ಯಾಸಿ ಉರ್ಗೆನ್ ಟ್ರಿನ್ಲೆ ಡೋರ್ಜಿಗೂ ಸಂಬಂಧಿಸಿದ, ಆದರೆ ಅವರು 2017 ರ ಆರಂಭದಿಂದಲೂ ಭಾರತದ ಹೊರಗೆ ವಾಸಿಸುತ್ತಿದ್ದಾರೆ.

ಪೆಗಾಸಸ್‌ ಬೇಹುಗಾರಿಕೆ ಬಗ್ಗೆ ಎಸ್‌ಐಟಿ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿಪೆಗಾಸಸ್‌ ಬೇಹುಗಾರಿಕೆ ಬಗ್ಗೆ ಎಸ್‌ಐಟಿ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಹದಿಹರೆಯದವರಾಗಿದ್ದಾಗ 2000 ರಲ್ಲಿ ಭಾರತಕ್ಕೆ ಪಲಾಯನ ಮಾಡಿದ ಕರ್ಮಪಾ, ಭಾರತೀಯ ಗುಪ್ತಚರ ಸಮುದಾಯದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಮಾರ್ಚ್ 2018 ರಲ್ಲಿ, ಭಾರತಕ್ಕೆ ತಿಳಿದಿಲ್ಲದೆ ಡೊಮಿನಿಕನ್ ಪಾಸ್ಪೋರ್ಟ್ ಪಡೆದರು ಎಂದು ಸುದ್ದಿ ವೆಬ್‌ಸೈಟ್ ವರದಿ ಮಾಡಿದೆ.

ನವದೆಹಲಿಯ ದಲೈ ಲಾಮಾ ದೀರ್ಘಕಾಲದ ರಾಯಭಾರಿ, ಪ್ರಸ್ತುತ ಭಾರತ ಮತ್ತು ಪೂರ್ವ ಏಷ್ಯಾದ ನಿರ್ದೇಶಕರಾಗಿರುವ ಟೆಂಪಾ ತ್ಸೆರಿಂಗ್, ನವದೆಹಲಿಯ ಆಫೀಸ್ ಹಿಸ್ ಹೋಲಿನೆಸ್ ದಲೈ ಲಾಮಾ ಸಹ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಅದು ಹೇಳಿದೆ.

ಫೋನ್‌ಗಳನ್ನು ಕಣ್ಗಾವಲುಗಾಗಿ ಆಯ್ಕೆ ಮಾಡಿದ ಅವಧಿಯಲ್ಲಿ, ದಲೈ ಲಾಮಾ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರನ್ನು ದೆಹಲಿಯಲ್ಲಿ ಭೇಟಿಯಾದರು. ಡೋಕ್ಲಾಮ್ ಬಿಕ್ಕಟ್ಟಿನ ನಂತರ ಚೀನಾದೊಂದಿಗಿನ ಭಾರತದ ಸಂಬಂಧವು ಚೇತರಿಸಿಕೊಳ್ಳುತ್ತಿದೆ.

"ಡೇಟಾಬೇಸ್‌ನಲ್ಲಿರುವ ಇತರ ಹೆಸರುಗಳು ಹಿರಿಯ ಸಹಾಯಕರಾದ ಟೆನ್ಜಿನ್ ತಕ್ಲ್ಹಾ ಮತ್ತು ಚಿಮ್ಮಿ ರಿಗ್ಜೆನ್‌. ದಲೈ ಲಾಮಾ ಆಯ್ಕೆ ಮಾಡುವ ಸೂಕ್ಷ್ಮ ಕಾರ್ಯವನ್ನು ಮೇಲ್ವಿಚಾರಣೆ ಮಾಡುವ ಟ್ರಸ್ಟ್‌ನ ಮುಖ್ಯಸ್ಥ ಸ್ಯಾಮ್‌ಡಾಂಗ್ ರಿನ್‌ಪೊಚೆ 2018 ರ ಮಧ್ಯದಲ್ಲಿ ಪಟ್ಟಿಯಲ್ಲಿ ಸೇರಿಸಲಾಗಿದೆ," ಎಂದು ವೈರದ್‌ ವರದಿ ಮಾಡಿದೆ.

ದೇಶಭ್ರಷ್ಟರಾಗಿದ್ದ ಅಂದಿನ ಟಿಬೆಟಿಯನ್ ಸರ್ಕಾರದ ಮುಖ್ಯಸ್ಥ ಲೋಬ್ಸಾಂಗ್ ಸಂಗೇ ಮತ್ತು ಭಾರತದ ಹಲವಾರು ಟಿಬೆಟಿಯನ್ ಕಾರ್ಯಕರ್ತರ ದೂರವಾಣಿ ಸಂಖ್ಯೆಗಳೂ ಈ ದಾಖಲೆಗಳಲ್ಲಿವೆ ಎಂದು ಅದು ಹೇಳಿದೆ.

ಈ ತನಿಖಾ ವರದಿಯನ್ನು ಪ್ರಕಟಿಸುತ್ತಿರುವ 17 ಮಾಧ್ಯಮ ಸಂಸ್ಥೆಗಳಲ್ಲಿ ದಿ ವೈರ್ ಸೇರಿದೆ. ಮಾಲ್ವೇರ್ ಬಳಸಿ ಪೆಗಾಸಸ್ ಅನ್ನು ಸ್ಮಾರ್ಟ್‌ಫೋನ್‌ಗಳಿಗೆ ಹಾಕಲಾಗುತ್ತದೆ. ಬಳಿಕ ಎಲ್ಲಾ ಮಾಹಿತಿಯನ್ನು ಹೊರತೆಗೆಯುತ್ತದೆ ಎಂದು ಈ ವರದಿಗಳು ಆರೋಪ ಮಾಡಿದೆ. ಸ್ಪೈವೇರ್ ತಯಾರಕ ಎನ್ಎಸ್ಒ, ತನ್ನ ಸ್ಪೈವೇರ್ ಅನ್ನು "ಪರಿಶೀಲಿಸಿದ ಸರ್ಕಾರಗಳಿಗೆ" ಮಾತ್ರ ಮಾರಾಟ ಮಾಡುತ್ತದೆ ಎಂದು ಹೇಳಿದೆ. ವರದಿಗಳು ತಪ್ಪಾದದ್ದು ಎಂದು ಹೇಳಿದೆ.

(ಒನ್‌ಇಂಡಿಯಾ ಸುದ್ದಿ)

English summary
Tibetan spiritual leader Dalai Lama's Advisers Were On List Of Potential Pegasus Targets says The Wire Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X