ಪೆಗಾಸಸ್: ಭಾರತ, ಇಸ್ರೇಲ್ ಶಸ್ತ್ರಾಸ್ತ್ರ ಒಪ್ಪಂದದ ತನಿಖೆಗೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆ
ನವದೆಹಲಿ, ಜನವರಿ 30: ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಪೆಗಾಸಸ್ ಸ್ಪೈವೇರ್ ಖರೀದಿಗೆ ಭಾರತ ಮತ್ತು ಇಸ್ರೇಲ್ ನಡುವೆ ನಡೆದಿದೆ ಎನ್ನಲಾದ ರಕ್ಷಣಾ ಒಪ್ಪಂದದ ಕುರಿತು ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಸಲಾಗಿದೆ. ಈ ವ್ಯವಹಾರಕ್ಕೆ ಸಂಬಂಧಪಟ್ಟ ಅಧಿಕಾರಿ ಅಥವಾ ಪ್ರಾಧಿಕಾರದ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಬೇಕು ಎಂದು ಆಗ್ರಹಿಸಿ ಹಿರಿಯ ವಕೀಲ ಎಂಎಲ್ ಶರ್ಮಾ ಅರ್ಜಿ ಸಲ್ಲಿಸಿದ್ದಾರೆ.
ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಯು 2017 ರಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಸುಮಾರು 2 ಬಿಲಿಯನ್ ಡಾಲರ್ ಒಪ್ಪಂದದ "ಕೇಂದ್ರ" ಗಳಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿದ ಒಂದು ದಿನದ ನಂತರ ಈ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು, ರಾಜಕಾರಣಿಗಳು ಮತ್ತು ಇತರರ ಮೇಲೆ ಕಣ್ಣಿಡಲು ಕೆಲವು ಸರ್ಕಾರಗಳು ಇಸ್ರೇಲ್‌ನ ಪೆಗಾಸಸ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡಿದೆ ಎಂಬ ವರದಿಯು ಈಗ ಮತ್ತೆ ಭಾರತದಲ್ಲಿ ಕಿಡಿ ಹೆಚ್ಚಿಸಿದೆ. ಭಾರತ ಮತ್ತು ಇಸ್ರೇಲ್ ನಡುವಿನ ಒಪ್ಪಂದದ ಬಗ್ಗೆ ಬಜೆಟ್ ಅಧಿವೇಶನಕ್ಕೂ ಮುನ್ನ ಬಂದಿರುವ ಈ ವರದಿಯ ಹಿನ್ನೆಲೆ ಬಜೆಟ್ ಅಧಿವೇಶನದಲ್ಲಿಯೂ ಇದು ಭಾರೀ ಸದ್ದು ಮಾಡುವ ಸಾಧ್ಯತೆ ಇದೆ.

ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಏನಿದೆ?
ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಯು 2017 ರಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಸುಮಾರು 2 ಬಿಲಿಯನ್ ಡಾಲರ್ ಒಪ್ಪಂದದ "ಕೇಂದ್ರ" ಗಳಾಗಿವೆ ಎಂದು 'ದಿ ಬ್ಯಾಟಲ್ ಫಾರ್ ದಿ ವರ್ಲ್ಡ್ಸ್ ಮೋಸ್ಟ್ ಪವರ್ ಫುಲ್ ಸೈಬರ್ ವೆಪನ್' ಎಂಬ ನ್ಯೂಯಾರ್ಕ್ ಟೈಮ್ಸ್ ವರದಿ ಉಲ್ಲೇಖ ಮಾಡಿದೆ. ವರದಿಯು ಜುಲೈ 2017 ರಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿಯವರ ಭೇಟಿಯನ್ನು ಉಲ್ಲೇಖಿಸಿದೆ.
"ದಶಕಗಳ ಕಾಲ, ಭಾರತವು 'ಪ್ಯಾಲೆಸ್ಟೀನಿಯನ್ ಕಾರಣಕ್ಕೆ ಬದ್ಧತೆ' ಎಂದು ಕರೆಯುವ ನೀತಿಯನ್ನು ಉಳಿಸಿಕೊಂಡಿದೆ. ಇಸ್ರೇಲ್‌ನೊಂದಿಗಿನ ಸಂಬಂಧಗಳು ಸರಿಯಾಗಿರಲಿಲ್ಲ. ಆದರೆ ಪ್ರಧಾನಿ ಆದ ಬಳಿಕ ನರೇಂದ್ರ ಮೋದಿ ಇಸ್ರೇಲ್ ಭೇಟಿಯು ಗಮನಾರ್ಹವಾಗಿ ಸೌಹಾರ್ದತೆಯನ್ನು ಪ್ರತಿನಿಧಿಸಿದೆ. ಇಸ್ರೇಲಿ ಪ್ರಧಾನ ಮಂತ್ರಿ ನೆತನ್ಯಾಹು ಆಗ ಬೆಚ್ಚಗಿನ ಭಾವನೆಯನ್ನು ಹೊಂದಿದ್ದರು. ಅದಕ್ಕೆ ಕಾರಣವೂ ಇದೆ. ಅದಕ್ಕೆ ಕಾರಣ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ಒಳಗೊಂಡ 2017 ರಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಸುಮಾರು 2 ಬಿಲಿಯನ್ ಡಾಲರ್ ಒಪ್ಪಂದವೇ ಆಗಿದೆ," ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಉಲ್ಲೇಖ ಮಾಡಿದೆ.
ಪೆಗಾಸಸ್ ಬಗ್ಗೆ ಉಲ್ಲೇಖ
ಇಸ್ರೇಲಿ ಸಂಸ್ಥೆ ಎನ್‌ಎಸ್‌ಒ ಗ್ರೂಪ್ ಸುಮಾರು ಒಂದು ದಶಕದಿಂದ "ತನ್ನ ಕಣ್ಗಾವಲು ಸಾಫ್ಟ್‌ವೇರ್ ಅನ್ನು ಚಂದಾದಾರಿಕೆಯ ಆಧಾರದ ಮೇಲೆ ಪ್ರಪಂಚದಾದ್ಯಂತ ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ. ಅದು ಬೇರೆ ಯಾರೂ ಮಾಡದ ಕೆಲಸವನ್ನು ಮಾಡಬಹುದೆಂದು ಭರವಸೆ ನೀಡಿದೆ. ಯಾವುದೇ ಐಫೋನ್ ಅಥವಾ ಸ್ಮಾರ್ಟ್‌ಫೋನ್‌ನ ಎನ್‌ಕ್ರಿಪ್ಟ್ ಮಾಡಲಾದ ಮಾತುಕತೆ, ಮಾಹಿತಿಯನ್ನು ಭೇದಿಸುವ ಕಾರ್ಯವನ್ನು ಈ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಸ್ಫೈವೇರ್ ಮಾಡುತ್ತದೆ," ಎಂದು ಹೇಳಿರುವ ಈ ವರದಿಯು ಜುಲೈ 2017 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ಗೆ ನೀಡಿದ ಭೇಟಿಯನ್ನು ಉಲ್ಲೇಖ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂಬುವುದನ್ನು ನಾವಿಲ್ಲಿ ಸ್ಮರಿಸಬಹುದು.
"ತಿಂಗಳ ನಂತರ, ನೆತನ್ಯಾಹು ಭಾರತಕ್ಕೆ ಅಪರೂಪದ ಭೇಟಿ ನೀಡಿದರು. ಜೂನ್ 2019 ರಲ್ಲಿ, ಪ್ಯಾಲೆಸ್ತೀನ್ ಮಾನವ ಹಕ್ಕುಗಳ ಸಂಘಟನೆಗೆ ವೀಕ್ಷಕ ಸ್ಥಾನಮಾನವನ್ನು ನಿರಾಕರಿಸಲು ಯುಎನ್‌ನ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ಭಾರತವು ಇಸ್ರೇಲ್ ಅನ್ನು ಬೆಂಬಲಿಸಲು ಮತ ಹಾಕಿದೆ. ಇದು ಮೊದಲ ಬಾರಿ ನಡೆದಿದೆ," ಎಂಬ ವಿಚಾರವನ್ನು ಕೂಡಾ ತಿಳಿಸಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications