ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲಿ ಸ್ಪೈವೇರ್ ಪೆಗಾಸಸ್: ಎನ್‌ಎಸ್‌ಒ ಗ್ರೂಪ್ ಸಿಇಒ ರಾಜೀನಾಮೆ

|
Google Oneindia Kannada News

ಜೆರುಸಲೆಂ, ಆಗಸ್ಟ್ 22: ಪೆಗಾಸಸ್ ಸ್ಪೈವೇರ್ ತಯಾರಕ ಸಂಸ್ಥೆ ಎನ್‌ಎಸ್‌ಒ ಗ್ರೂಪ್‌ನ ಸಿಇಒ ಶಾಲೆವ್ ಹುಲಿಯೋ ಕೆಳಗಿಳಿದಿದ್ದಾರೆ. ಮುಂದಿನ ಸಿಇಒ ನೇಮಕ ಆಗುವವರೆಗೂ ಸಂಸ್ಥೆಯ ಸಿಒಒ ಯಾರೋನ್ ಶೋಹತ್ ಅವರೇ ಮುಂದಾಳತ್ವ ವಹಿಸಲಿದ್ದಾರೆ.

ಯಾರೋನ್ ಶೋಹತ್ ಎನ್‌ಎಸ್‌ಒ ಗ್ರೂಪ್‌ನ ಮರುರಚನೆ ಕಾರ್ಯವನ್ನು ನೋಡಿಕೊಳ್ಳುತ್ತಿದ್ದು ಅದರ ಭಾಗವಾಗಿ ಸುಮಾರು ನೂರು ಉದ್ಯೋಗಿಗಳನ್ನು ಕೆಲಸದಿಂದ ಹೊರಕಳುಹಿಸಲಾಗಿದೆ.

ಸುಪ್ರೀಂಕೋರ್ಟ್ ಕೈ ಸೇರಿದ ಪೆಗಾಸಸ್ ಸಮಿತಿ ವರದಿಸುಪ್ರೀಂಕೋರ್ಟ್ ಕೈ ಸೇರಿದ ಪೆಗಾಸಸ್ ಸಮಿತಿ ವರದಿ

ಪೆಗಾಸಸ್ ಸಾಫ್ಟ್‌ವೇರ್ ಅನ್ನು ವಿವಿಧ ದೇಶಗಳ ಸರಕಾರಗಳು ನಿರ್ದಿಷ್ಟ ಮಂದಿಯ ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಲು ದುರ್ಬಳಕೆ ಮಾಡಿಕೊಂಡಿರುವ ಆರೋಪಗಳು ಬಹಳ ಇವೆ. ಈ ಹಿನ್ನೆಲೆಯಲ್ಲಿ ಎನ್‌ಎಸ್‌ಒ ಗ್ರೂಪ್ ಕಾನೂನು ವಿಚಾರಣೆ ಎದುರಿಸುತ್ತಿದೆ.

Israel Spyware Pegasus NSO Group CEO Resigns

ಆದರೆ, ಭಯೋತ್ಪಾದಕರು, ಶಿಶುಕಾಮಿಗಳು, ದೊಡ್ಡ ಕ್ರಿಮಿನಲ್‌ಗಳನ್ನು ಹಿಡಿಯಲು ಪೆಗಾಸಸ್ ತಂತ್ರಾಂಶ ತಯಾರಿಸಿದ್ದೇವೆ. ಅದನ್ನು ವಿಶ್ವಾಸಾರ್ಹ ಸರಕಾರಗಳಿಗೆ ಮಾತ್ರ ಮಾರಾಟ ಮಾಡಿದ್ದೇವೆ ಎಂಬುದು ಎನ್‌ಎಸ್‌ಒ ಗ್ರೂಪ್‌ನ ಸ್ಪಷ್ಟನೆ.

ಕಂಪನಿಯ ಉತ್ಪನ್ನಗಳಿಗೆ ಅದರ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅಪರಾಧ ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರ ಸಾಬೀತಾದ ಸಾಮರ್ಥ್ಯದಿಂದಾಗಿ ಗ್ರಾಹಕರಿಗೆ ಸಹಾಯ ಮಾಡಲು ಸಾಧ್ಯವಿರುವುದರಿಂದ ಸರ್ಕಾರಗಳು ಮತ್ತು ಕಾನೂನು ಜಾರಿ ಸಂಸ್ಥೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಎನ್‌ಎಸ್‌ಒ ಕಂಪನಿಯ ಅದ್ಭುತ ತಂತ್ರಜ್ಞಾನಗಳನ್ನು ಸರಿಯಾದ ಮತ್ತು ಯೋಗ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಎಂದು ಶೋಹತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Israel Spyware Pegasus NSO Group CEO Resigns

ಪೆಗಾಸಸ್‌ ಸ್ಪೈ ವೇರ್‌ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದ ರಾಜಕಾರಣಿಗಳು, ಗಣ್ಯರು ಹಾಗೂ ಪತ್ರಕರ್ತರ ಮೇಲೆ ಬೇಹುಗಾರಿಕೆ ಮಾಡಲಾಗುತ್ತಿದೆ ಎಂದು ದೇಶದಲ್ಲಿ ಭಾರಿ ರಾದ್ಧಾಂತ ಸೃಷ್ಟಿಯಾಗಿತ್ತು. ಅಲ್ಲದೆ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲನ್ನು ಏರಿತ್ತು.

English summary
Israeli spyware firm NSO Group has announced that its Chief Executive Officer (CEO) Shalev Hulio is stepping down, effective immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X