ಕೇರಳದ ಶಾಸಕ ಪಿಕೆ ಶಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ತಿರುವನಂತಪುರಂ, ಸೆಪ್ಟೆಂಬರ್ 04: ಕೇರಳದ ಶೋರನೂರು ಶಾಸಕ ಪಿಕೆ ಶಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಯೂಥ್ ವಿಂಗ್ ನ ಮಹಿಳಾ ಸದಸ್ಯೆಯೊಬ್ಬರು ಆರೋಪ ಹೊರೆಸಿ, ಪಕ್ಷದ ಹಿರಿಯ ಮುಖಂಡರಿಗೆ ಪತ್ರ ಬರೆದಿದ್ದಾರೆ. ಈ ಕುರಿತಂತೆ ತನಿಖೆ ಆರಂಭವಾಗಿದೆ ಎಂದು ಸಿಪಿಐಎಂ ಹೇಳಿದೆ.

ಡೆಮಾಕ್ರಾಟಿಕ್ ಯೂಥ್ ಫೆಡೆರೇಷನ್ ಆಫ್ ಇಂಡಿಯಾ (ಡಿಎಫ್ ವೈಐ)ನ ಮಹಿಳಾ ಸದಸ್ಯೆಯೊಬ್ಬರು, ತಮಗಾದ ನೋವನ್ನು ಪತ್ರದ ಮೂಲಕ ತೋಡಿಕೊಂಡಿದ್ದರು. ಕಳೆದ ಆಗಸ್ಟ್ ತಿಂಗಳಿನಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೆರಿ ಬಾಲಕೃಷ್ಣನ್ ಗೆ ಪತ್ರ ತಲುಪಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ನಂತರ ಮಾರ್ಕ್ಸ್ ವಾಗಿ ಪಕ್ಷದ ಹಿರಿಯ ನಾಯಕಿ ಬೃಂದಾ ಕಾರಟ್ ಹಾಗೂ ಸೀತಾರಾಮ್ ಯೆಚೂರಿಗೂ ಪತ್ರ ಕಳಿಸಲಾಗಿದೆ.

CPI-M starts probe after woman accuses Kerala MLA PK Sasi of sexual harassment

ಕಳೆದ ಒಂದು ವರ್ಷದಿಂದ ಕಿರುಕುಳ ಅನುಭವಿಸುತ್ತಿದ್ದೇನೆ, ಈ ಬಗ್ಗೆ ಅನೇಕ ಹಿರಿಯ ನಾಯಕರಿಗೆ ತಿಳಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮಹಿಳೆ ನೊಂದು ಪತ್ರ ಬರೆದಿದ್ದಾರೆ.

ಪಾಲಕ್ಕಾಡ್ ಜಿಲ್ಲೆಯ ಸಮಿತಿಯು, ಶಾಸಕ ಶಶಿ ಅವರ ಮೇಲೆ ಯಾವ ಕ್ರಮ ಜರುಗಿಸಬೇಕು ಎಂಬುದರ ಬಗ್ಗೆ ಸಭೆ ನಡೆಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಿ, ಇದು ನನ್ನ ರಾಜಕೀಯ ಬದುಕು ಅಂತ್ಯಗೊಳಿಸಲು ಮಾಡಿರುವ ಕುತಂತ್ರ, ನನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+