ಇಸ್ರೋದಿಂದ ಮತ್ತೊಂದು ಉಪಗ್ರಹ EOS-03 ಉಡಾವಣೆಗೆ ಕ್ಷಣಗಣನೆ
ಶ್ರೀಹರಿಕೋಟ, ಆಗಸ್ಟ್ 11: ಇಸ್ರೋದಿಂದ ಮತ್ತೊಂದು ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಭಾರತವು ತನ್ನ ಅತ್ಯಾಧುನಿಕ ಜಿಯೋ-ಇಮೇಜಿಂಗ್ ಉಪಗ್ರಹ ಜಿಎಸ್ ಎಲ್ ವಿ-ಎಫ್ 10/ಇಒಎಸ್-03ಯನ್ನು ಆಗಸ್ಟ್ 12ರ ಬೆಳಗ್ಗೆ 5.43 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಡಾವಣೆಯಾಗಲಿದೆ.
ಉಡಾವಣೆಗೆ 26 ಗಂಟೆಗಳ ಕ್ಷಣಗಣನೆ ಇಂದು ಬುಧವಾರ ನಸುಕಿನ ಜಾವ 3.43 ಕ್ಕೆ ಆರಂಭವಾಯಿತು. ಜಿಎಸ್‌ಎಲ್‌ವಿ-ಎಫ್ 10 ರ ಎರಡನೇ ಹಂತಕ್ಕೆ (ಜಿಎಸ್ 2) ಪ್ರೊಪೆಲ್ಲಂಟ್ ತುಂಬುವುದು ಮುಗಿದಿದ್ದು, ಲಿಕ್ವಿಡ್ ಸ್ಟ್ರಾಪ್ ಗೆ ಪ್ರೊಪಲ್ಲಂಟ್ ತುಂಬುವ ಕಾರ್ಯ ಆರಂಭವಾಗಿದೆ.

ಕಳೆದ ಫೆಬ್ರವರಿ 28 ರಂದು, ಇಸ್ರೋ 18 ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಅದರಲ್ಲಿ ಪ್ರಾಥಮಿಕ ಬ್ರೆಜಿಲ್‌ನ ಅಮೆಜೋನಿಯಾ -1 ಉಪಗ್ರಹ ಮತ್ತು ಕೆಲವು ದೇಸಿ ಉಪಗ್ರಹಗಳನ್ನು ಹೊಂದಿದೆ.
ಇಒಎಸ್-03 ಉಪಗ್ರಹವನ್ನು ಜಿಎಸ್ ಎಲ್ ವಿ-ಎಫ್-10ನ್ನು ಹೊತ್ತೊಯ್ಯಲಿದೆ ಎಂದು ಇಸ್ರೊ ತಿಳಿಸಿದೆ. EOS-3 ಉಪಗ್ರಹವನ್ನು ಈ ಹಿಂದೆ GISAT-1 ಎಂದೂ ಕರೆಯಲ್ಪಡುತ್ತಿತ್ತು. ಇದು ಎರಡು ಜೋಡಿಯಾಗಿರುವ ಉಪಗ್ರಹಗಳಲ್ಲಿ ಒಂದಾಗಿದೆ, ಇನ್ನೊಂದು GISAT-2 ಅಥವಾ EOS-5. ಪ್ರತಿ 30 ನಿಮಿಷಗಳಿಗೊಮ್ಮೆ ಭಾರತೀಯ ಭೂಪ್ರದೇಶದ ಚಿತ್ರವನ್ನು ಒದಗಿಸಲು ಇದರಿಂದ ಸಾಧ್ಯವಾಗಲಿದೆ.
ಬಾಹ್ಯಾಕಾಶವಾಹನದ ಪೇಲೋಡ್ ಫೇರಿಂಗ್, ಉಪಗ್ರಹಗಳನ್ನು ಹೊತ್ತೊಯ್ಯುವ ರಾಕೆಟ್ ನ ತುದಿ 4 ಮೀ ಓಜಿವ್ ಆಗಿರುವುದು ಇದೇ ಮೊದಲು. ಈ ಬದಲಾವಣೆಗಳು ವಾಹನವನ್ನು ಹೆಚ್ಚು ವಾಯುಬಲ ಹೊಂದುವಂತೆ ಮಾಡುತ್ತದೆ ಮತ್ತು ಅದೇ ಪೇಲೋಡ್ ಫೈರಿಂಗ್ ದೇಶದ ಮಾನವ ಅಂತರಿಕ್ಷಯಾನಕ್ಕೆ ಬಳಸುವ ಸಾಧ್ಯತೆ ಇದೆ.
ಬಾಹ್ಯಾಕಾಶ ಸಂಸ್ಥೆ ಮುಂದಿನ ಐದು ತಿಂಗಳಲ್ಲಿ ನಾಲ್ಕು ಉಡಾವಣೆಗಳನ್ನು ನಡೆಸಲಿದ್ದು ಇವು ಎಲ್ಲಾ ಭೂಮಿಯ ವೀಕ್ಷಣೆ ಉಪಗ್ರಹಗಳು. ನಾಲ್ಕರಲ್ಲಿ ಒಂದು ಸಣ್ಣ ಉಪಗ್ರಹವನ್ನು ಉಡಾವಣಾ ವಾಹನವು ತನ್ನ ಮೊದಲ ಹಾರಾಟದಲ್ಲಿ ಕೊಂಡೊಯ್ಯುತ್ತದೆ.
ಸಾಂಕ್ರಾಮಿಕ ರೋಗದಿಂದಾಗಿ ಗಗನಯಾನ್ ಮಿಷನ್, ಚಂದ್ರಯಾನ -3 ಮಿಷನ್, ಮತ್ತು ಭಾರತದ ಮೊದಲ ಸೌರ ಮಿಷನ್ ಆದಿತ್ಯ ಎಲ್ 1 ಕಾರ್ಯಾಚರಣೆಗಳು ವಿಳಂಬವಾಗಿವೆ.
2 ಸಾವಿರದ 268 ಕೆಜಿ ತೂಕದ ಜಿಎಸ್ ಎಲ್ ವಿ-ಎಫ್ 10 ಸಂಕೇತನಾಮ ಇಒಎಸ್ -3, ಜಿಯೋ-ಉಪಗ್ರಹಗಳ ಹೊಸ ಸರಣಿಯ ಭಾಗವಾಗಿದೆ, ಇದು ನಾಗರಿಕ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಇಸ್ರೋದ ಜಿಎಸ್‌ಎಲ್‌ವಿ-ಎಫ್ 10 ರಾಕೆಟ್ ಮೂಲಕ ಕಕ್ಷೆಗೆ ಸೇರಿಸಲಿದೆ. ಭಾರತ ನಿರ್ಮಿತ ಪ್ರಮುಖ ಉಪಗ್ರಹದ ಈ ವರ್ಷದ ಮೊದಲ ಉಡಾವಣೆ ಇದಾಗಿದೆ.
ಬಾಹ್ಯಾಕಾಶವಾಹನದ ಪೇಲೋಡ್ ಫೇರಿಂಗ್, ಉಪಗ್ರಹಗಳನ್ನು ಹೊತ್ತೊಯ್ಯುವ ರಾಕೆಟ್ ನ ತುದಿ 4 ಮೀ ಓಜಿವ್ (ಬುಲೆಟ್ ತರಹದ ಆಕಾರ) ಆಗಿರುವುದು ಇದೇ ಮೊದಲು. ಈ ಬದಲಾವಣೆಗಳು ವಾಹನವನ್ನು ಹೆಚ್ಚು ವಾಯುಬಲ ಹೊಂದುವಂತೆ ಮಾಡುತ್ತದೆ ಮತ್ತು ಅದೇ ಪೇಲೋಡ್ ಫೈರಿಂಗ್ ದೇಶದ ಮಾನವ ಅಂತರಿಕ್ಷಯಾನಕ್ಕೆ ಬಳಸುವ ಸಾಧ್ಯತೆ ಇದೆ.
ಜಿಎಸ್‌ಎಲ್‌ವಿ-ಎಫ್ 10 ಮಿಷನ್ ಭೌಗೋಳಿಕ ಇಮೇಜಿಂಗ್ ಉಪಗ್ರಹ ಜಿಐಸ್ಯಾಟ್1ನ್ನು ಒಯ್ಯಲಿದೆ. ಭೂಮಿಯ ಕಕ್ಷೆ ಇದು ಸೇರಿದ ಬಳಿಕ, ಇದು ಭಾರತದ ಐ ಇನ್ ದ ಸ್ಕೈ ಆಗಿ ಕಾರ್ಯನಿರ್ವಹಿಸಲಿದೆ. ಅಂದರೆ ನಿರ್ದಿಷ್ಟ ಆಸಕ್ತಿಯ ಸ್ಥಳಗಳ ಮೇಲೆ ನಿಶ್ಚಲ ಸ್ಥಿತಿಯಲ್ಲಿ ಕಣ್ಗಾವಲು ಇಡಲು ಇದು ಸಹಕಾರಿಯಾಗಲಿದೆ.
ಇದು ಚಂದ್ರಯಾನ -2 ಕಾರ್ಯಾಚರಣೆಯ ನಂತರ ಜಿಎಸ್‌ಎಲ್‌ವಿ ಎಂಕೆ III ನ ಎರಡನೇ ಕಾರ್ಯಾಚರಣೆಯ ಹಾರಾಟವಾಗಿದ್ದು, ಉಡಾವಣಾ ವಾಹನವು "ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ" ಬಾಹ್ಯಾಕಾಶ ನೌಕೆಯನ್ನು ಹೆಚ್ಚಿನ ಕಕ್ಷೆಯಲ್ಲಿ ಇರಿಸಿದಾಗ ಮತ್ತು ಮುಂಬರುವ ಕುಶಲತೆಗೆ ಇಂಧನವನ್ನು ಉಳಿಸುತ್ತದೆ ಎಂದು ಇಸ್ರೊ ಹೇಳಿದೆ.











Click it and Unblock the Notifications