ನಿಮ್ಮ ದಕ್ಷತೆಯೇ ಮುಳ್ಳಾಗಬಹುದು : ಕೊಟ್ಟ ಕೆಲಸ ತಕ್ಷಣ ಮುಗಿಸುವವರಿಗೆ ಇಲ್ಲೊಂದು ಸಲಹೆ
Corporate Jobs: ಕಾಯಕವೇ ಕೈಲಾಸ ಅನ್ನೋದು ಬಸವಣ್ಣನವರು ಹೇಳಿ ಕೊಟ್ಟ ಮಂತ್ರ. ಯಾವತ್ತಿಗೂ ಸೋಮಾರಿ ಆಗ ಬಾರದು, ಕಾಯಕ ನಿಷ್ಠೆ ತೋರಬೇಕು ಎನ್ನುವುದು ಬಸವಣ್ಣನವರ ಆಶಯ. ಇದು ಎಲ್ಲಾ ಕಾಲದಲ್ಲೂ, ಎಲ್ಲಾ ಸ್ಥಳದಲ್ಲೂ ಅನ್ವಯವಾಗುವಂತಹ ಸಂಗತಿ. ಆದರೆ ಕಾರ್ಪೋರೇಟ್ ಜಗತ್ತಿನ ಕೆಲಸದಲ್ಲಿ ನಾವು ಪರಿಪೂರ್ಣವಾಗಿ ತೊಡಗಿಕೊಂಡರೆ ಅದು ಮುಂದೆ ನಮಗೆ ಸಮಸ್ಯೆ ಆಗುತ್ತದೆ ಅನ್ನೋದು ಹಲವರ ಅಭಿಪ್ರಾಯ. ಕೆಲಸದಲ್ಲಿ ಯಾವತ್ತಿಗೂ 100 ಪರ್ಸೆಂಟ್ ಕೊಡಲೇ ಬಾರದು. ಕೊಟ್ಟರೆ ಮುಂದಿನ ದಿನಗಳಲ್ಲಿ ಬಾಸ್ ಕಡೆಯ ನಿರೀಕ್ಷೆಗಳು ದೊಡ್ಡದಾಗುತ್ತದೆ. ಜೊತೆ ನಿಮ್ಮ ಕೆಲಸದ ವೇಗವೇ ಕೆಲಸದ ಹೊಸ ಮಾನದಂಡವಾಗುತ್ತದೆ ಎಂಬ ತರ್ಕ ವ್ಯಾಪಕವಾಗಿದೆ.

ಇದಕ್ಕೆ ಪೂರಕ ಎನ್ನುವಂತೆ ಈ ಡಿಜಿಟಲ್ ಜಮಾನದಲ್ಲಿ ಕಾರ್ಪೋರೇಟ್ ಜಗತ್ತಿನ () ಉದ್ಯೋಗಿಯೊಬ್ಬರು, ಯಾವತ್ತಿಗೂ ಕೆಲಸದ ವಿಷಯದಲ್ಲಿ ನಿಮ್ಮ 100 ಪರ್ಸೆಂಟ್ ಬೆಸ್ಟ್ ಕೊಡಬೇಡಿ. ಕೊಟ್ರೆ ನೀವು ಕೆಡ್ತೀರಿ. ಮುಂದೇ ಅದೇ 100 ಪರ್ಸೆಂಟ್ ಬೆಸ್ಟನ್ನೇ ಎಲ್ಲರೂ, ಎಲ್ಲಾ ಸಮಯದಲ್ಲೂ ನಿರೀಕ್ಷೆ ಮಾಡ್ತಾರೆ. ಅದೇ ನಿಮ್ಮನ್ನು ಅಳೆಯುವ ಮಾನದಂಡ ಆಗುತ್ತೆ. ನಿಮ್ಮ ದೈಹಿಕ ಕ್ಷಮತೆ ಕಡಿಮೆ ಇರುವಾಗಲೂ ಕೂಡಾ 100 ಪರ್ಸೆಂಟ್ ಬೆಸ್ಟನ್ನೇ ಎಲ್ಲರೂ ನಿರೀಕ್ಷೆ ಮಾಡ್ತಾರೆ. ಆ ಅತ್ಯುತ್ತಮ ಸಾಧನೆ ಕೊಡಲು ಆಗದೇ ಹೋದಾಗ ಎಲ್ಲರಿಗೂ ನಿರಾಶೆ ಆಗುತ್ತೆ. ಹಾಗಾಗಿ, ಯಾವತ್ತಿಗೂ 80 ಪರ್ಸೆಂಟ್ ಬೆಸ್ಟ್ ಕೊಡಿ. ಉಳಿದ ಕ್ಷಮತೆಯನ್ನು ಕಷ್ಟದ ದಿನಗಳಿಗೆ ಉಳಿಸಿಕೊಳ್ಳಿ ಅಂತಿದ್ದಾರೆ. ಹೀಗೆ ಹೇಳಿದ್ದು ಅರ್ವೀನ್ ಎಂಬ ಕಾರ್ಪೋರೇಟ್ ಜಗತ್ತಿನ ಉದ್ಯೋಗಿ.
Corporate Jobs ಇನ್ಸ್ಟಾದಲ್ಲಿ ವಿಡಿಯೋ ಶೇರ್ ಮಾಡಿದ ಅರ್ವೀನಾ :
ಅರ್ವೀನ್ ಇನ್ಸ್ಟಾದಲ್ಲಿ (instagram) ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಅರ್ವೀನ್ ಕೆಲಸದ ದಕ್ಷತೆ ಕುರಿತ ತನ್ನ ಅಭಿಪ್ರಾಯವನ್ನು ಶೇರ್ ಮಾಡಿದ್ದಾರೆ. ಅರ್ವೀನ್ ವಿಡಿಯೋಗೆ ನೆಟ್ಟಿಗರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಆರು ಗಂಟೆಗಳಲ್ಲಿ ಮಾಡಬಹುದಾದ ಕೆಲಸವನ್ನು ನೀವು 3 ಗಂಟೆಗಳಲ್ಲಿ ಮಾಡಿದಿರಿ ಅಂದುಕೊಳ್ಳೋಣ. ಅದು ನಿಮ್ಮ ದಕ್ಷತೆಯನ್ನು ಸೂಚಿಸುತ್ತದೆ. ಆದರೆ, ಮುಂದಿನ ದಿನಗಳಲ್ಲಿ ಆ ಕೆಲಸವನ್ನು ಶಾಶ್ವತವಾಗಿ ಮೂರು ಗಂಟೆಗಳಲ್ಲೇ ಪೂರ್ಣಗೊಳಿಸಬೇಕಾದ ಡೆಡ್ ಲೈನ್ ನಿಮಗೆ ಸಿಗುತ್ತದೆ. ನೀವು ರಾತ್ರಿ ಹತ್ತು ಗಂಟೆಗೂ ಮೀಟಿಂಗ್ ಕಾಲ್ ಎತ್ತಿದ್ರಿ ಅಂದುಕೊಳ್ಳೋಣ, ಮುಂದಿನ ದಿನಗಳಲ್ಲಿ ನೀವು ರಾತ್ರಿ ಹತ್ತು ಗಂಟೆಗೆ ಕಾಲ್ ಎತ್ತಲೇ ಬೇಕಾದ ಅಲಿಖಿತ ನಿಯಮ ಕಾರ್ಪೋರೇಟ್ ಜಗತ್ತಿನಲ್ಲಿ ಸಿದ್ದಗೊಂಡಿರುತ್ತದೆ. ಹಾಗಾಗಿ ನೂರಕ್ಕೆ ನೂರು ದಕ್ಷತೆಯನ್ನು ಕೆಲಸದಲ್ಲಿ ತೋರಿಸಲೇ ಬಾರದು ಎನ್ನುತ್ತಾರೆ ಅರ್ವೀನ್.
ನೆಟ್ಟಿಗರ ಕಮೆಂಟ್ ಹೇಗಿದೆ ಗೊತ್ತಾ? :
ಅರ್ವೀನ್ ವಿಡಿಯೋಗೆ ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ. ಕೆಲಸಕ್ಕೆ ಮಿತಿಗಳನ್ನು ಹಾಕಿಕೊಳ್ಳುವುದು ಮುಖ್ಯ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಅರ್ವೀನ್ ಸತ್ಯ ಹೇಳಿದ್ದಾರೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಕಾರ್ಪೋರೇಟ್ ಜಗತ್ತಿನ ಸತ್ಯವನ್ನು ಅರ್ವೀನ್ ಹೇಳಿದ್ದಾರೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಸ್ಮಾರ್ಟ್ ಆಗಿ ಕೆಲಸ ಮಾಡಿ, ಆದರೆ ಕೊನೆತನಕ ಹಾಗೇ ಮಾಡಬೇಡಿ ಅಂತ ಇನ್ನೊಬ್ಬರು ಹೇಳಿದ್ದಾರೆ. ಕೆಲಸದಲ್ಲಿ ಕೊನೆಯ ತನಕ ಎನರ್ಜಿ ಉಳಿಸಿಕೊಳ್ಳುವುದು ಬಹಳ ಕೆಲಸ. ಎನರ್ಜಿ ( energy) ಉಳಿಸಿಕೊಂಡು ದಕ್ಷತೆಯಿಂದ ಕೆಲಸ ಮಾಡುವುದು ಇನ್ನೂ ಕಠಿಣ. ನಿಮ್ಮ ಪ್ರತಿಭೆ, ಫಟಾಫಟ್ ಕೆಲಸ ಮುಗಿಸುವ ನಿಮ್ಮ ಯೋಚನೆ ಮುಂದೊಂದು ದಿನ ನಿಮಗೇ ಮುಳುವಾದ್ರೆ, ಅಚ್ಚರಿ ಏನಿಲ್ಲ. ಅರ್ವೀನ್ ನಿಲುವಿಗೆ ಕಾರ್ಪೋರೇಟ್ ನೌಕರರ ಸಹಮತ ಇರಬಹುದು. ಆದರೆ, ಕಾರ್ಪೋರೇಟ್ ಜಗತ್ತನ್ನು ನಿಯಂತ್ರಿಸುವ ಮ್ಯಾನೇಜ್ಮೆಂಟ್ ಸಹಮತ ಸಿಗೋದು ಕಷ್ಟ. ನೌಕರರ ದಕ್ಷತೆ ಹೆಚ್ಚಿಸಿ, ಅವರಿಂದ ಹೆಚ್ಚು ಸಾಧ್ಯವೋ ಅಷ್ಟು ದುಡಿಸಿಕೊಳ್ಳಲು ಮ್ಯಾನೇಜ್ಮೆಂಟ್ ಹಾತೊರೆಯುತ್ತಿರುತ್ತದೆ.


Click it and Unblock the Notifications
