ಕೊರೊನಾ: ಪ್ರಯಾಣಿಕರ ಕೊರತೆ, ರಾಜ್ಯದ 3 ಸೇರಿ, 168 ರೈಲು ಸಂಚಾರ ರದ್ದು
ನವದೆಹಲಿ, ಮಾರ್ಚ್ 19: ಮಾರಣಾಂತಿಕ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ, ಭಾರತೀಯ ರೈಲ್ವೇ, ದೇಶದ ವಿವಿಧ ಭಾಗದ 168 ರೈಲು ಸಂಚಾರವನ್ನು ರದ್ದುಪಡಿಸಿದೆ.
"ತೀವ್ರವಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿರುವುದರಿಂದ, ಮಾರ್ಚ್ 20-31ರ ಅವಧಿಯಲ್ಲಿ 168 ರೈಲುಗಳ ಸಂಚಾರವನ್ನು ಹಿಂದಕ್ಕೆ ಪಡೆಯುವ ನಿರ್ಧಾರಕ್ಕೆ ಬರಲಾಗಿದೆ" ಎಂದು ರೈಲ್ವೇಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಚಾರವನ್ನು ರದ್ದುಪಡಿಸಿರುವ ವಿಚಾರವನ್ನು ಎಲ್ಲಾ ಪ್ರಯಾಣಿಕರಿಗೆ ಪ್ರತ್ಯೇಕ ಪ್ರತ್ಯೇಕವಾಗಿ ತಿಳಿಸಲಾಗುವುದು ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. 99 ರೈಲುಗಳ ಸಂಚಾರವನ್ನು ಬುಧವಾರ ರಾತ್ರಿ (ಮಾ 18) ರೈಲ್ವೇಸ್ ಹಿಂದಕ್ಕೆ ಪಡೆದಿತ್ತು.

ರೈಲ್ವೆಗೆ ಕೊರೊನಾ ಹೊಡೆತ; ವಾರಕ್ಕೆ 450 ಕೋಟಿ ನಷ್ಟ
ರದ್ದಾದ ಪ್ರಮುಖ ರೈಲು ಸಂಚಾರದ ಪಟ್ಟಿ ಇಂತಿದೆ:
12081/2 - ಕಣ್ಣೂರು - ತಿರುವನಂತಪುರಂ ಜನಶತಾಬ್ದಿ
22609/10 - ಮಂಗಳೂರು - ಕೊಯಂಬತ್ತೂರು ಇಂಟರ್ ಸಿಟಿ
16629/30 - ಮಂಗಳೂರು - ತಿರುವನಂತಪುರಂ - ಮಲಬಾರ್ ಎಕ್ಸ್ ಪ್ರೆಸ್
12223/24- ಎರ್ನಾಕುಲಂ - ಕುರ್ಲಾ - ಡ್ಯುರಂಟೋ ಎಕ್ಸ್ ಪ್ರೆಸ್
12697/98 - ತಿರುವನಂತಪುರಂ - ಚೆನ್ನೈ - ವೀಕ್ಲಿ ಎಕ್ಸ್ ಪ್ರೆಸ್
07327/8 - ವಿಜಯಪುರ - ಮಂಗಳೂರು - ಸ್ಪೆಷಲ್












Click it and Unblock the Notifications