ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ: ತೇಲಿ ಬಂತೊಂದು ಅಚ್ಚರಿಯ ಹೆಸರು?

ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಯಾರನ್ನು ಆಯ್ಕೆ ಮಾಡಬಹುದು ಎನ್ನುವ ಕುರಿತು ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಚರ್ಚೆಗಳು ಆರಂಭವಾಗಿವೆ. ರಾಹುಲ್ ಗಾಂಧಿ ಅಲ್ಲದೇ ಪಕ್ಷದ ಹಿರಿಯ ನಾಯಕರುಗಳ ಹೆಸರನ್ನು ಬಿಟ್ಟು ಬೇರೊಂದು ಹೆಸರು ದೆಹಲಿಯ ಶೀತಲ ಗಾಳಿಯ ನಡುವೆ ಬರಲಾರಂಭಿಸಿದೆ.

ರಾಹುಲ್ ಗಾಂಧಿ, ಚಿದಂಬರಂ, ಆಂಟನಿ, ಶಿಂಧೆ ಅಲ್ಲದೇ ಇನ್ನೊಂದು ಹೆಸರು ಸಂಭಾವ್ಯ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯ ಪಟ್ಟಿಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಹೌದು, ಆ ಹೆಸರು ಬೇರೆ ಯಾರೂ ಅಲ್ಲ none other than ಬೆಂಗಳೂರಿನ ನಂದನ್ ನಿಲೇಕಣಿ.

ಐದು ರಾಜ್ಯಗಳ ಚುನಾವಣೆಯಲ್ಲಿ 1-4 ಅಂತರದಿಂದ ಸೋತು ಮುಖಭಂಗ ಅನುಭವಿಸಿದ ನಂತರ ಸೋನಿಯಾ ಗಾಂಧಿ ಸೂಕ್ತ ಸಮಯದಲ್ಲಿ ನಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದರು.

Congress PM Candidate, Buzz around Nandan Nilekani

ಕ್ಲೀನ್ ಇಮೇಜ್ ಹೊಂದಿರುವ, ಆಧಾರ್ ಯೋಜನೆಯ ಮುಖ್ಯಸ್ಥ ನಂದನ್ ನಿಲೇಕಣಿ ಹೆಸರು ಕಾಂಗ್ರೆಸ್ ಹೈಕಮಾಂಡ್ ಪಡಶಾಲೆಯಲ್ಲಿ ಚಾಲ್ತಿಯಲ್ಲಿದೆ ಎನ್ನುವ ಸುದ್ದಿ ಹರಿದಾಡುತಿದೆ. ಈ ಬಗ್ಗೆ ನಿಲೇಕಣಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ 'this is complete rubbish' ಎಂದು ಹೇಳಿದ್ದಾರೆ. ಇದು ಅವರ ತಕ್ಷಣದ ಪ್ರತಿಕ್ರಿಯೆ.

ಶುದ್ದ ಹಸ್ತರಾಗಿರುವ ನಿಲೇಕಣಿ, ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಸಂಸ್ಥೆಗೆ ಉತ್ತಮ ಸೇವೆ ಸಲ್ಲಿಸಿ ಉತ್ತಮ ತಾಂತ್ರಿಕ ಆಡಳಿತಗಾರ ಎನ್ನುವ ಹೆಸರನ್ನೂ ಪಡೆದಿದ್ದರು. ಐಐಟಿ ವಿದ್ಯಾರ್ಥಿಯಾಗಿರುವ ನಿಲೇಕಣಿ, ಸೋನಿಯಾ ಮತ್ತು ರಾಹುಲ್ ಗಾಂಧಿ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.

ಸುಮಾರು ನಾಲ್ಕು ವರ್ಷಗಳಿಂದ ಆಧಾರ್ ಯೋಜನೆಯಡಿಯಲಿ ಕೆಲಸ ನಿರ್ವಹಿಸುತ್ತಿರುವ ನಿಲೇಕಣಿ, ವಿವಿಧ ಸಚಿವರು ಮತ್ತು ರಾಜಕೀಯ ಪಕ್ಷಗಳ ಜೊತೆ ಉತ್ತಮ ಸಂಪರ್ಕವನ್ನೂ ಹೊಂದಿದ್ದಾರೆ.

ಈಗಾಗಲೇ ನಿಲೇಕಣಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿಯೂ ಹರಿದಾಡುತಿದೆ. 58ವರ್ಷವಾದರೂ ಯುವಕರನ್ನು ಸೆಳೆಯುವ ಸಾಮರ್ಥ್ಯವನ್ನು ಹೊಂದಿರುವ ನಿಲೇಕಣಿ, ಆಧಾರ ಯೋಜನೆಯಲ್ಲಿ ತನಗೆ ಪ್ರಧಾನ ಮಂತ್ರಿ ಕಾರ್ಯಾಲಯ ನೀಡಿದ್ದ 600 ಮಿಲಿಯನ್ ಕಾರ್ಡ್ ವಿತರಣೆಯ ಟಾರ್ಗೆಟ್ ನಲ್ಲಿ 510 ಮಿಲಿಯನ್ ಕಾರ್ಡ್ ವಿತರಿಸಿ ಪ್ರಧಾನಿಯಿಂದ ಮೆಚ್ಚುಗೆಯನ್ನೂ ಪಡೆದುಕೊಂಡಿದ್ದಾರೆ.

ನರೇಂದ್ರ ಮೋದಿ ಹವಾ ಜೋರಾಗಿರುವ ಈ ಸಮಯದಲ್ಲಿ ನಿಲೇಕಣಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿ ಹೊಸ ಗೇಮ್ ಪ್ಲಾನ್ ಆಡಲು ಕಾಂಗ್ರೆಸ್ ಸಿದ್ದವಾಗುತ್ತಿದೆ ಎನ್ನುವುದು ಸದ್ಯ ಹರಿದಾಡುತ್ತಿರುವ ಸುದ್ದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+