ಝಿಕಾ ವೈರಸ್‌ಗೆ ಮದ್ದು ನಿಮ್ಮ ಮನೆಯ ಕೈದೋಟದಲ್ಲೇ ಇದೆ

Subscribe to Oneindia Kannada

ನವದೆಹಲಿ, ಫೆಬ್ರವರಿ, 10: ಪ್ರಪಂಚವನ್ನೇ ಬೆಚ್ಚಿ ಬೀಳಿಸಲು ಹೊರಟಿರುವ ಝಿಕಾ ವೈರಸ್ ಪ್ರಕರಣಗಳು ಅಲ್ಲಲ್ಲಿ ದಾಖಲಾಗುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ವೆನಿಜ್ಯುಯೇಲಾದಿಂದ ಚೈನಾಗೆ ಆಗಮಿಸಿದ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿದ್ದು ಚೀನಾದಲ್ಲಿ ಮೊದಲ ಪ್ರಕರಣ ದಾಖಲಾದಂತಾಗಿದೆ.

ಚೀನಾದ ದಕ್ಷಿಣ ಭಾಗದ ಗಂಜೌ ನಗರದ 34 ವರ್ಷದ ಈ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ. ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿಯೂ ಹೊಸ ಪ್ರಕರಣಗಳು ದಾಖಲಾಗಿವೆ. ಇತ್ತ ಭಾರತದಲ್ಲಿ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.[ಝಿಕಾ ವೈರಸ್ ಎಂದರೇನು? ಹೇಗೆ ಹರಡುತ್ತದೆ?]

ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು ಕರ್ನಾಟಕ ರಾಜ್ಯ ಸರ್ಕಾರ ಗರ್ಭಿಣಿಯರಿಗೆ ನಿಂಬೆ ಹುಲ್ಲಿನ ತೈಲ (ಲೆಮನ್ ಗ್ರಾಸ್ ಆಯಿಲ್) ಹಾಗೂ ಮಡಿಲು ಕಿಟ್ ವಿತರಿಸಲು ಮುಂದಾಗಿದೆ. ಸೊಳ್ಳೆಯಿಂದ ಸೋಂಕು ಹರಡುವುದು ದೃಢಪಟ್ಟಿದ್ದು ಸೊಳ್ಳೆ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ.[ಸೊಳ್ಳೆ ಒದ್ದು ಓಡಿಸುವ ಗಿಡಗಳ ಬಗ್ಗೆ ನಿಮಗೆಷ್ಟು ಗೊತ್ತು?]

ತುರ್ತು ಪರಿಸ್ಥಿತಿ

ತುರ್ತು ಪರಿಸ್ಥಿತಿ

ಝಿಕಾ ವೈರಸ್ ಸೋಂಕಿನ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯದ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಹಾಗಾಗಿ ಪ್ರತಿಯೊಂದು ದೇಶದ ಆರೋಗ್ಯ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಸೊಳ್ಳೆ ನಿಯಂತ್ರಣ

ಸೊಳ್ಳೆ ನಿಯಂತ್ರಣ

ಮುನ್ನೆಚ್ಚರಿಕೆ ಕ್ರಮದ ಒಂದು ಭಾಗವಾಗಿ ಗರ್ಭಿಣಿಯರನ್ನು ಝಿಕಾ ವೈರಸ್‌ನಿಂದ ದೂರವಿರಿಸಲು ನೈಸರ್ಗಿಕ ನಿಂಬೆ ಹುಲ್ಲಿನ ತೈಲ ವಿತರಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

15 ದಿನದಲ್ಲಿ ಅನುಷ್ಠಾನ

15 ದಿನದಲ್ಲಿ ಅನುಷ್ಠಾನ

10-15 ದಿನಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ ನಿಂಬೆಹುಲ್ಲಿನ ತೈಲ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಸವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ನೀಡುವ ಮಡಿಲು ಕಿಟ್‌ನ ಜತೆ ನಿಂಬೆ ಹುಲ್ಲಿನ ತೈಲ ಕೂಡ ವಿತರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಜಿಗೆ 1300 ರು. ಇದೆ

ಕೆಜಿಗೆ 1300 ರು. ಇದೆ

ಸಾಬೂನು ತಯಾರಿಕೆಯಲ್ಲಿ ಬಳಸುವ ನಿಂಬೆ ಹುಲ್ಲಿನ ತೈಲ ಕೆಜಿಗೆ 1300 ರು. ಇದೆ. ಗುಜರಾತ್ ಮೂಲದ ಕಂಪನಿಯಿಂದ ನಿಂಬೆ ಹುಲ್ಲಿನ ತೈಲ ಖರೀದಿ ಮಾಡಲಾಗುತ್ತಿದೆ ಎಂದು ಕೆಎಸ್‌ಡಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka State Health and Family Welfare department is making preparations to distribute lemon grass oil to poor pregnant women, to help prevent them from getting bitten by mosquitoes. Lemon grass oil, a natural extract, acts as a mosquito/insect repellent. The department aims to provide the repellent to the beneficiaries in the next 10 to 15 days. This is one of the few measures the department has initiated after the World Health Organisation (WHO) declared an ‘emergency’ over the explosive pandemic of Zika virus.
Please Wait while comments are loading...