CM Vijay: ವಿಜಯ್ ಪುತ್ರ ಜೇಸನ್ ಸಂಜಯ್‌ಗೆ ವಿಜಯ್ ಟಿವಿಕೆ ಪಕ್ಷದಿಂದ ಮುಜುಗರ: ಸಿಗ್ಮಾ ಪ್ರೀ-ರಿಲೀಸ್‌ನಲ್ಲಿ ಗದ್ದಲ!
ತಮಿಳುನಾಡಿನ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಅವರಿಗೆ ವಿಜಯ್ ಅವರ ಪಕ್ಷದ ಕಾರ್ಯಕರ್ತರಿಂದಲೇ ಸಂಕಷ್ಟ ಎದುರಾಗಿದೆ. ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಅವರು ತಮಿಳು ನಿರ್ದೇಶಕರಾಗಿದ್ದಾರೆ. ಈಚೆಗೆ ತಮಿಳುನಾಡಿನ ಸೇಲಂನಲ್ಲಿ ಸಿಗ್ಮಾ ಎನ್ನುವ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆದರೆ, ಸಿನಿಮಾದ ಪ್ರೀ - ರಿಲೀಸ್ ಕಾರ್ಯಕ್ರಮದಲ್ಲಿ ಕಿರಿಕಿರಿ ಆಗಿದೆ. ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷದಿಂದಲೇ ಮುಜುಗರಕ್ಕೆ ಒಳಗಾಗುವಂತಹ ಪರಿಸ್ಥಿತಿ ಎದುರಾಗಿದೆ.
ತಮಿಳುನಾಡಿನ ಮುಖ್ಯಮಂತ್ರಿ ಆಗುವುದಕ್ಕೂ ಮೊದಲು ಹಾಗೂ ರಾಜಕೀಯ ಪ್ರವೇಶ ಮಾಡಿದ ಕೆಲವೇ ದಿನಗಳಲ್ಲಿ ವಿಜಯ್ ಅವರ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಜಗ್ಗಜಾಹೀರಾತಾಗಿತ್ತು. ನಟಿಯೊಬ್ಬರೊಂದಿಗೆ ವಿಜಯ್ ಅವರು ವಿವಾಹೇತರ ಸಂಬಂಧವನ್ನು ಹೊಂದಿದ್ದಾರೆ. ಆ ನಟಿಯಿಂದ ಕುಟುಂಬದಲ್ಲಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ವಿಜಯ್ ಅವರ ಪತ್ನಿ ಸಂಗೀತಾ ಅವರು ಡಿವೋರ್ಸ್ ಅರ್ಜಿ ಸಲ್ಲಿಸಿದ್ದರು. ನಂತರ ಈಚೆಗೆ ಅರ್ಜಿಯನ್ನು ವಾಪಸ್ ಸಹ ಪಡೆದಿದ್ದಾರೆ ಎಂದೂ ಸುದ್ದಿಯಾಗಿತ್ತು. ಆದರೆ ವಿಜಯ್ ಮತ್ತು ಅವರು ಕುಟುಂಬದವರು ಈ ವರೆಗೂ ಈ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡಿಲ್ಲ. ಆದರೆ, ಈ ವಿಷಯವು ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ.

ಇದೀಗ ವಿಜಯ್ ಅವರ ಮಗ ಜೇಸನ್ ಸಂಜಯ್ ಅವರು ನಿರ್ದೇಶನ ಮಾಡಿರುವ ಸಿಗ್ಮಾ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವರ ತಂದೆಯ ರಾಜಕೀಯ ಪಕ್ಷವಾದ ಟಿವಿಕೆ (ತಮಿಳಗ ವೆಟ್ರಿ ಕಳಗಂ)ದ ಕಾರ್ಯಕರ್ತರು ಜೋರಾಗಿ ಘೋಷಣೆಗಳನ್ನು ಕೂಗುವ ಮೂಲಕ ಅಡ್ಡಿಪಡಿಸಿದ್ದಾರೆ. ಅವರ ತಂದೆ, ತಮಿಳು ಇಂಡಸ್ಟ್ರಿಯಲ್ಲಿ ದಳಪತಿ ಎಂದೇ ಖ್ಯಾತಿ ಗಳಿಸಿರುವ ಸಿಎಂ ವಿಜಯ್ ಸ್ಥಾಪಿಸಿರುವ ರಾಜಕೀಯ ಪಕ್ಷಕ್ಕೆ ಟಿವಿಕೆ ಕಾರ್ಯಕರ್ತರು ಹಾಗೂ ಜನ ಪದೇ ಪದೇ ಜೈಕಾರ ಹಾಕಿದ್ದಾರೆ.
ಸಂಜಯ್ ಅವರು ತಮ್ಮ ಚೊಚ್ಚಲ ಚಲನಚಿತ್ರದ ಬಗ್ಗೆ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಪ್ರೇಕ್ಷಕರು ಜೋರು ಧ್ವನಿಯಲ್ಲಿ ಕಿರುಚಿದ್ದು, ಟಿವಿಕೆ.. ಟಿವಿಕೆ ಅಂತ ಕೂಗಿದ್ದಾರೆ. ಜೇಸನ್ ಅವರು ತಮ್ಮ ತಂಡಕ್ಕೆ ಧನ್ಯವಾದ ಹೇಳಿ, "ನನ್ನ ಕುಟುಂಬಕ್ಕೆ ವಿಶೇಷ ಧನ್ಯವಾದಗಳು' ಅಂತಲೂ ಈ ವೇದಿಕೆಯಲ್ಲಿ ಹೇಳಿದ್ದಾರೆ. ಇದಾದ ನಂತರ ಟಿವಿಕೆ ಕಾರ್ಯಕರ್ತರು ಜೋರಾಗಿ ಕಿರುಚಲು ಪ್ರಾರಂಭಿಸಿದರು. ಗದ್ದಲ ಮುಂದುವರಿದಂತೆ, ಸಿಗ್ಮಾ ನಟರಾದ ಸಂದೀಪ್ ಕಿಶನ್ ಮತ್ತು ಫರಿಯಾ ಅಬ್ದುಲ್ಲಾ ಜನಸಮೂಹಕ್ಕೆ ಪ್ರತಿಕ್ರಿಯಿಸಿದರು. ಆದರೆ ಜೇಸನ್ ಅವರು ಮಾತ್ರ ಮುಗುಳ್ನಕ್ಕು ತಲೆಯಾಡಿಸಿದರು. ಟಿವಿಕೆಯ ಘೋಷಣೆಗಳು ಜೋರಾಗುವ ಮೊದಲು ನಿರೂಪಕ ಮೈಕ್ರೊಫೋನ್ ವಾಲ್ಯೂಮ್ ಅನ್ನು ಸರಿಹೊಂದಿಸಲು ಪ್ರಯತ್ನಿಸಿದರು. ನಂತರ ಜೇಸನ್ ಜನಸಮೂಹಕ್ಕೆ ಥಂಬ್ಸ್-ಅಪ್ ನೀಡಿ, ತಮ್ಮ ಭಾಷಣವನ್ನು ಮುಂದುವರಿಸಿದರು.
CM Vijay: ಸಿಗ್ಮಾ ಸಿನಿಮಾದ ಬಗ್ಗೆ ಜೇಸನ್ ಸಂಜಯ್ ಹೇಳಿದ್ದೇನು ?
ನಮ್ಮೆಲ್ಲರ ಜೀವನದಲ್ಲಿ ಒಂದು ಸಿಗ್ಮಾ ಕ್ಷಣವನ್ನು ಇರುತ್ತೆ. ನಾವು ತೆಗೆದುಕೊಂಡ ಕೆಲವು ನಿರ್ಧಾರಗಳಿಂದಾಗಿ ನಾವು ದೊಡ್ಡ ತೊಂದರೆಗಳನ್ನು ಎದುರಿಸಿದ್ದೇವೆ, ಆದರೆ ಅವುಗಳಿಂದ ಮೇಲೇರಿದ್ದೇವೆ. ಸಾಮಾನ್ಯ ಮನುಷ್ಯನ ಕುರಿತಾದ ಈ ಕಥೆ ಎಲ್ಲರಿಗೂ ಅರ್ಥವಾಗುವಂತಹದ್ದಾಗಿದೆ ಎಂದು ನಾನು ನಂಬುತ್ತೇನೆ ಎಂದು ಜೇಸನ್ ಹೇಳಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಜೇಸನ್ ತಮ್ಮ ಕುಟುಂಬದ ಬಗ್ಗೆಯೂ ಪ್ರೀತಿಯಿಂದ ಮಾತನಾಡಿದ್ದಾರೆ. ನೀವು ನೋಡಿದ ಮೊದಲ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ ನಟ ವಿಜಯ್ ಮತ್ತು ನಟಿ ಜ್ಯೋತಿಕಾ ಅವರ ತಿರುಮಲೈ ಸಿನಿಮಾ ಎಂದಿದ್ದಾರೆ. ಅಧಿಕೃತವಾಗಿ ನಿರ್ದೇಶಕರಾದ ನಂತರ ಅವರು ಕರೆ ಮಾಡಿದ ಮೊದಲ ವ್ಯಕ್ತಿ ಅವರ ತಾಯಿ ಅಂತ ಹೇಳಿದ್ದಾರೆ.


Click it and Unblock the Notifications
