Class 11th Result 2024: 11ನೇ ತರಗತಿ ಪಲಿತಾಂಶ ಪ್ರಕಟ-ವೀಕ್ಷಿಸುವುದೇಗೆ?-ಇಲ್ಲಿದೆ ವಿಧಾನಗಳು

Class 11th Result 2024: ಈಗಾಗಲೇ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಬೋರ್ಡ್‌, ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಹಾಗೆಯೇ ಇದೀಗ ಇಂದು (ಮೇ 14) ತಮಿಳುನಾಡು ಸರ್ಕಾರಿ ಪರೀಕ್ಷೆಗಳ ನಿರ್ದೇಶನಾಲಯ (DGE) 11ನೇ ತರಗತಿಯ ಫಲಿತಾಂಶ 2024 ಪ್ರಕಟಿಸಿದೆ. ಹಾಗಾದರೆ ಫಲಿತಾಂಶವನ್ನು ವೀಕ್ಷಣೆ ಮಾಡುವುದು ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ತಮಿಳುನಾಡಿನಲ್ಲಿ 2024ರ ಸಾಲಿನ 11ನೇ ತರಗತಿ ಪರೀಕ್ಷೆಗಳು ಮಾರ್ಚ್ 4 ರಿಂದ ಮಾರ್ಚ್ 25ರವರೆಗೆ ನಡೆದಿದ್ದು, ತಮಿಳುನಾಡು ಸರ್ಕಾರಿ ಪರೀಕ್ಷೆಗಳ ನಿರ್ದೇಶನಾಲಯ (DGE) ಅಧಿಕೃತವಾಗಿ 11ನೇ ತರಗತಿ ಫಲಿತಾಂಶವನ್ನು ಇಂದು (ಮೇ 14) ಬೆಳಗ್ಗೆ 9:30ಕ್ಕೆ ಪ್ರಕಟಿಸಿದೆ. ಕುತೂಹಲದಿಂದ ಕಾಯುತ್ತಿರುವ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ tnresults.nic.inನಲ್ಲಿ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ. ಅಲ್ಲದೆ ವಿದ್ಯಾರ್ಥಿಗಳು dge.tn.gov.inನಲ್ಲಿ ತಮ್ಮ ಫಲಿತಾಂಶಗಳನ್ನು ವೀಕ್ಷಣೆ ಮಾಡಬಹುದಾಗಿದೆ.

Class 11th Result 2024 in Tamil Nadu How to check know details

ಫಲಿತಾಂಶಗಳನ್ನು ವೀಕ್ಷಿಸಲು, ವಿದ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ವೆಬ್‌ಸೈಟ್‌ನಲ್ಲಿ ನಮೂದಿಸಬೇಕು. ಅಷ್ಟೇ ಅಲ್ಲದೆ, DGE TN ಪ್ರಕಾರ, ಫಲಿತಾಂಶಗಳು ಕೇಂದ್ರ ಮತ್ತು ಶಾಖಾ ಗ್ರಂಥಾಲಯಗಳಲ್ಲಿರುವ ರಾಷ್ಟ್ರೀಯ ಮಾಹಿತಿ ಕೇಂದ್ರಗಳಲ್ಲಿ (NIC) ಮತ್ತು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ.

ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ?

* ತಮಿಳುನಾಡು ಶಿಕ್ಷಣ ಮಂಡಳಿಯ tnresults.nic.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
* ಮುಂದಿನ ಪುಟದಲ್ಲಿ ಕ್ಲಿಕ್ ಮಾಡಿ: HSE(+1) ಪರೀಕ್ಷೆಯ ಫಲಿತಾಂಶಗಳು ಮಾರ್ಚ್ 2024
* ತೆರೆದುಕೊಳ್ಳುವ ಮುಂದಿನ ಪುಟದಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಬೇಕಾಗುತ್ತದೆ.
* 2024ರ 11ನೇ ತರಗತಿ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ವೀಕ್ಷೀಸಿದ ಬಳಿಕ ಆ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಇನ್ನು ಉತ್ತೀರ್ಣರಾಗಲು, ವಿದ್ಯಾರ್ಥಿಗಳು 100ಕ್ಕೆ ಕನಿಷ್ಠ 35 ಅಂಕಗಳನ್ನು ಗಳಿಸಬೇಕು. 70 ಅಂಕಗಳನ್ನು ಹೊಂದಿರುವ ಥಿಯರಿ ಪರೀಕ್ಷೆಗಳಿಗೆ ಉತ್ತೀರ್ಣ ದರ್ಜೆಯ ಅಗತ್ಯವಿದ್ದರೂ, ಪ್ರಾಯೋಗಿಕ ಪರೀಕ್ಷೆಗಳಿಗೆ ಯಾವುದೇ ನಿರ್ದಿಷ್ಟ ಕನಿಷ್ಠ ಉತ್ತೀರ್ಣ ಅಂಕವಿಲ್ಲ. ಆದರೂ ಪ್ರಾಯೋಗಿಕ ಪರೀಕ್ಷೆಯ ಸಮಯದಲ್ಲಿ ಹಾಜರಾತಿ ಕಡ್ಡಾಯವಾಗಿದೆ.

ಇನ್ನು ಹೆಚ್ಚುವರಿಯಾಗಿ, ತಮಿಳುನಾಡು ಸರ್ಕಾರಿ ಪರೀಕ್ಷೆಗಳ ನಿರ್ದೇಶನಾಲಯ 11ನೇ ತರಗತಿಯ ಫಲಿತಾಂಶಗಳನ್ನು ಶಾಲೆಗಳಲ್ಲಿ ಹಾಕಲಾಗುವುದು ಎಂದು ತಿಳಿಸಿದೆ. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗಳಲ್ಲಿ SMS ಮೂಲಕ ತಮ್ಮ ಅಂಕಗಳನ್ನು ನೋಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+