Cigarette Prices: ಸಿಗರೇಟ್ ಬೆಲೆ ಬಲು ದುಬಾರಿ: ವ್ಯಸನಿಗಳಿಗೆ ಬಿಗ್ ಶಾಕ್
Cigarette Prices: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರ ಭಾನುವಾರದಂದು ಕೇಂದ್ರ ಬಜೆಟ್ ಮಂಡನೆ ಮಾಡಿದರು. ಈ ವೇಳೆ ಕೆಲವು ವಸ್ತುಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಹಾಗೆಯೇ ಕೇಂದ್ರ ಬಜೆಟ್ 2026ರ ಬಳಿಕ ದೇಶದಲ್ಲಿ ಹೊಗೆ ಬಿಡುವ ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳ ಮೇಲೆ ವಿಧಿಸಲಾದ ಹೆಚ್ಚುವರಿ ಅಬಕಾರಿ ಸುಂಕ ಜಾರಿಗೆ ಬಂದಿದ್ದು, ಇದರ ಪರಿಣಾಮವಾಗಿ ಇವುಗಳ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಹಾಗಾದ್ರೆ ಯಾವುದಕ್ಕೆ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಿಗರೇಟ್, ತಂಬಾಕು ಉತ್ಪನ್ನಗಳ ದರ ಏರಿಕೆ: ಫೆಬ್ರವರಿ 1ರಿಂದ ಜಾರಿಗೆ ಬಂದಿರುವ ಹೊಸ ತೆರಿಗೆ ವ್ಯವಸ್ಥೆಯಿಂದಾಗಿ 10 ಸ್ಟಿಕ್‌ಗಳ ಸಿಗರೇಟ್ ಪ್ಯಾಕ್‌ಗೆ ಕನಿಷ್ಠ 22ರಿಂದ 25 ರೂಪಾಯಿವರೆಗೆ ಬೆಲೆ ಹೆಚ್ಚಳವಾಗಿದೆ. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಎಕ್ಸೈಸ್ ಸುಂಕ ವಿಧಿಸಿರುವುದರ ಜೊತೆಗೆ, ಪಾನ್ ಮಸಾಲಾ ಮೇಲೂ ಆರೋಗ್ಯ ಸೆಸ್ ಜಾರಿಯಾಗಿದೆ. ಇದುವರೆಗೆ ಜಾರಿಯಲ್ಲಿದ್ದ ಗರಿಷ್ಠ 40 ಶೇಕಡಾ ಜಿಎಸ್‌ಟಿಗೆ ಹೆಚ್ಚುವರಿಯಾಗಿ ಈ ತೆರಿಗೆ ವಿಧಿಸಲಾಗಿದೆ.

ಯಾವ ಸಿಗರೇಟ್‌ಗೆ ಎಷ್ಟು ದರ ಏರಿಕೆ?: ವಿತರಕರ ಮಾಹಿತಿಯಂತೆ, 76 ಎಂ.ಎಂ. ಉದ್ದದ ಪ್ರೀಮಿಯಂ ಸಿಗರೇಟ್ ಪ್ಯಾಕ್‌ಗಳ ಬೆಲೆ ಬ್ರ್ಯಾಂಡ್ ಅವಲಂಬಿಸಿ 50 ರಿಂದ 55 ರೂವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ತಯಾರಕರು ಇನ್ನೂ ಹೊಸ ಎಂಆರ್‌ಪಿ ಪ್ರಕಟಿಸಿಲ್ಲ. ಈ ನಡುವೆ ಹಳೆಯ ಸ್ಟಾಕ್‌ಗಳನ್ನು ವಿತರಕರು ಚಿಲ್ಲರೆ ವ್ಯಾಪಾರಿಗಳಿಗೆ 40 ಶೇಕಡಾ ಜಿಎಸ್‌ಟಿ ಅನ್ವಯ ಬಿಲ್ ಮಾಡುತ್ತಿದ್ದಾರೆ.
ಭಾನುವಾರ ಹೋಲ್‌ಸೇಲ್ ಮಾರುಕಟ್ಟೆಗಳು ಬಂದ್ ಆಗಿದ್ದರಿಂದ, ಸೋಮವಾರದಿಂದ ಹೊಸ ಎಂಆರ್‌ಪಿ ಹೊಂದಿರುವ ಸ್ಟಾಕ್ ಮಾರುಕಟ್ಟೆಗೆ ಲಭ್ಯವಾಗಲಿದೆ ಎಂದು ವಿತರಕರು ತಿಳಿಸಿದ್ದಾರೆ. ಪ್ರಸ್ತುತ 10 ಸ್ಟಿಕ್‌ಗಳ ಪ್ಯಾಕ್‌ಗೆ 95 ರೂಪಾಯಿ ಬೆಲೆ ಇರುವ 76 ಎಂ.ಎಂ. ಉದ್ದದ ಸಿಗರೇಟ್ ಪ್ಯಾಕ್ ಹೊಸ ದರದಲ್ಲಿ ಸುಮಾರು 120 ರೂಪಾಯಿ ಆಗುವ ನಿರೀಕ್ಷೆಯಿದೆ. ಇದೇ ರೀತಿ, 84 ಎಂ.ಎಂ. ಉದ್ದದ ಗೋಲ್ಡ್ ಫ್ಲೇಕ್ ಲೈಟ್ಸ್, ವಿಲ್ಸ್ ಕ್ಲಾಸಿಕ್, ವಿಲ್ಸ್ ಕ್ಲಾಸಿಕ್ ಮೈಲ್ಡ್ಸ್ ಮೊದಲಾದ ಸಿಗರೇಟ್‌ಗಳು ಈಗಿರುವ 170 ರೂಪಾಯಿ ದರದಿಂದ 220 ರಿಂದ 225 ರೂಪಾಯಿವರೆಗೆ ಏರಿಕೆ ಆಗುವ ಸಾಧ್ಯತೆ ಇದೆ.
ಅದೇ ರೀತಿ, 97 ಎಂ.ಎಂ. ಉದ್ದದ ಕ್ಲಾಸಿಕ್ ಕನೆಕ್ಟ್‌ನಂತಹ ಸ್ಲಿಮ್ ಸಿಗರೇಟ್‌ಗಳು ಈಗ 20 ಸ್ಟಿಕ್‌ಗಳ ಪ್ಯಾಕ್‌ಗೆ 300 ರೂಪಾಯಿ ದರದಲ್ಲಿದ್ದು, ಹೊಸ ಎಂಆರ್‌ಪಿ ಸುಮಾರು 350 ರೂಪಾಯಿ ಆಗುವ ನಿರೀಕ್ಷೆಯಿದೆ. ಹೊಸ ಎಂಆರ್‌ಪಿ ಹೊಂದಿರುವ ಸಿಗರೇಟ್ ಪ್ಯಾಕ್‌ಗಳು ತಿಂಗಳ ಅಂತ್ಯದ ವೇಳೆಗೆ ತಯಾರಕರಿಂದ ಮಾರುಕಟ್ಟೆಗೆ ಬರಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಕೆಲ ಕಂಪನಿಗಳು ಈಗಾಗಲೇ ತಮ್ಮ ಸ್ಟಾಕ್ ಬಿಡುಗಡೆಗೆ ತಾತ್ಕಾಲಿಕ ವಿರಾಮ ನೀಡಿದ್ದು, ಹೊಸ ತೆರಿಗೆ ರಚನೆಯಡಿ ಬಿಲ್ಲಿಂಗ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಸರಬರಾಜು ಆರಂಭಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕೇಂದ್ರ ಸರ್ಕಾರ ಆಡಳಿತದ ಬಗ್ಗೆ ವಿವರ: ಕೇಂದ್ರ ಸರ್ಕಾರ ಭಾರತದ ಆಡಳಿತ ವ್ಯವಸ್ಥೆಯ ಪ್ರಮುಖ ಅಂಗವಾಗಿದೆ. ಭಾರತ ಸಂವಿಧಾನದ ಪ್ರಕಾರ ದೇಶವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಾಗಿ ವಿಭಜಿಸಲಾಗಿದ್ದು, ರಾಷ್ಟ್ರದ ಮಟ್ಟದಲ್ಲಿ ಆಡಳಿತ ನಡೆಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ರಾಷ್ಟ್ರಪತಿ ರಾಷ್ಟ್ರದ ಮುಖ್ಯಸ್ಥರಾಗಿದ್ದರೂ, ನೈಜ ಆಡಳಿತಾಧಿಕಾರ ಪ್ರಧಾನಮಂತ್ರಿ ಹಾಗೂ ಅವರ ನೇತೃತ್ವದ ಸಚಿವ ಸಂಪುಟದ ಕೈಯಲ್ಲಿರುತ್ತದೆ.
ಕೇಂದ್ರ ಸರ್ಕಾರವು ರಕ್ಷಣಾ ವ್ಯವಸ್ಥೆ, ವಿದೇಶಾಂಗ ವ್ಯವಹಾರಗಳು, ಕರೆನ್ಸಿ, ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳು, ಸಂವಹನ ವ್ಯವಸ್ಥೆ, ತೆರಿಗೆ ನೀತಿ ಹಾಗೂ ರಾಷ್ಟ್ರೀಯ ಮಟ್ಟದ ಯೋಜನೆಗಳನ್ನು ನಿರ್ವಹಿಸುತ್ತದೆ. ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಕಲ್ಯಾಣ, ಕಾನೂನು ರಚನೆ ಮತ್ತು ರಾಷ್ಟ್ರೀಯ ಭದ್ರತೆ ಸಂಬಂಧಿತ ನೀತಿಗಳನ್ನು ರೂಪಿಸುವ ಜವಾಬ್ದಾರಿಯೂ ಕೇಂದ್ರ ಸರ್ಕಾರದ ಮೇಲಿದೆ.












Click it and Unblock the Notifications