ಕ್ರಿಸ್‌ಮಸ್: ಪ್ಲಮ್ ಕೇಕ್‌ಗಳಿಗಾಗಿ ಮಾರುಕಟ್ಟೆಗೆ ಮುಗಿಬಿದ್ದ ಕೇರಳಿಗರು
ತಿರುವನಂತಪುರಂ, ಡಿಸೆಂಬರ್ 25: ಕೋವಿಡ್ -19 ಮತ್ತು ಏಕಾಏಕಿ ಲಾಕ್‌ಡೌನ್‌ಗಳ ಕಾರಣ ಎರಡು ವರ್ಷಗಳ ವಿರಾಮದ ನಂತರ ಕೇರಳದಾದ್ಯಂತ ಜನರು ಈ ವರ್ಷ ಕ್ರಿಸ್ಮಸ್ ಅನ್ನು ಹೆಚ್ಚು ಉತ್ಸಾಹ ಮತ್ತು ಸಂತೋಷದಿಂದ ಆಚರಿಸಿದರು.
ರಾಜ್ಯದ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳು ಅಲಂಕಾರಿಕ ದೀಪಗಳಿಂದ ಅಲಂಕರಿಸಲ್ಪಟ್ಟಿದ್ದವು. ಯೇಸುವನ್ನು ಸ್ವಾಗತಿಸಲು ಚರ್ಚ್‌ಗಳಲ್ಲಿ ಮಧ್ಯರಾತ್ರಿಯ ಸಾಮೂಹಿಕ ಪ್ರಾರ್ಥನೆಗಳು ನಡೆದವು. ಕ್ರಿಸ್‌ಮಸ್ ಮುನ್ನಾದಿನ ಮತ್ತು ಭಾನುವಾರದಂದು ಕೇರಳದ ರಾಜಧಾನಿಯಲ್ಲಿ ಜನರು ಕೇಕ್ ಅಂಗಡಿಗಳಲ್ಲಿ ನೆರೆದಿದ್ದರು. ಈ ಹಬ್ಬದಲ್ಲಿ ಫ್ಲಮ್ ಕೇಕ್ ಆಚರಣೆಯ ದೊಡ್ಡ ಭಾಗವಾಗಿದೆ.
ಕ್ರಿಸ್‌ಮಸ್ ಮುನ್ನಾದಿನದಂದು ಜನರು ಕೇಕ್ ಖರೀದಿಸುವಲ್ಲಿ ನಿರತರಾಗಿದ್ದರು. ಹೆಚ್ಚಿನವರು ಕೋವಿಡ್ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಿದ್ದಾರೆ. ತಿರುವನಂತಪುರಂನಲ್ಲಿ ಈ ವರ್ಷದ ಟ್ರೆಂಡ್ ಪ್ಲಮ್ ಕೇಕ್ ಆಗಿತ್ತು. ಈ ವರ್ಷ ಕೇಕ್‌ಗಳ ಬೆಲೆ ಶೇಕಡಾ 10 ರಷ್ಟು ಏರಿಕೆಯಾಗಿದ್ದರೂ, ಜನರು ಹೆಚ್ಚಿನ ಕೇಕ್‌ಗಳಿಗೆ ಬೇಡಿಕೆಯಿಟ್ಟಿದ್ದಾರೆ. ವಿಶೇಷವಾಗಿ ಈ ನಿರ್ದಿಷ್ಟ ವರ್ಷಾಂತ್ಯದ ಆಚರಣೆಯ ಪ್ರಮುಖ ಭಾಗ ಪ್ರಸಿದ್ಧ ಪ್ಲಮ್ ಕೇಕ್‌ಗಳಾಗಿದ್ದವು.
ತಿರುವನಂತಪುರಂನಲ್ಲಿರುವ ಪ್ರಸಿದ್ಧ ಕೇಕ್ ಶಾಪ್ ಆಂಬ್ರೋಸಿಯಾ, ಕ್ರಿಸ್ಮಸ್ ಮತ್ತು ಹೊಸ ವರ್ಷದ ಕೇಕ್‌ಗಳ ವ್ಯಾಪಕ ಶ್ರೇಣಿಯನ್ನು ಏರ್ಪಡಿಸಿತ್ತು. ಆಂಬ್ರೋಸಿಯಾ ಮಾಲೀಕ ಕುಕ್ಕು ವಿನೋದ್, "ಈ ವರ್ಷ ನಾವು ಕ್ರಿಸ್‌ಮಸ್‌ಗೆ ಉತ್ತಮವಾಗಿ ತಯಾರಿ ನಡೆಸಿದ್ದೇವೆ. ಈ ವರ್ಷ ಪ್ರವೃತ್ತಿಯಲ್ಲಿ ಬದಲಾವಣೆಯನ್ನು ನಾವು ಕಂಡುಕೊಂಡಿದ್ದೇವೆ, ಜನರು ಪ್ಲಮ್‌ಕೇಕ್‌ಗಳನ್ನು ಕೇಳಲು ಮುಂದೆ ಬರುತ್ತಿದ್ದಾರೆ ಎಂದರು.
"ಕಳೆದ ಐದು ವರ್ಷಗಳಲ್ಲಿ ನಾವು ಯಾವಾಗಲೂ ಇಲ್ಲಿಗೆ ಬರುತ್ತೇವೆ ಮತ್ತು ನಮ್ಮ ಕುಟುಂಬಕ್ಕಾಗಿ ಮತ್ತು ಮನೆಕೆಲಸಗಾರರಿಗೆ ಪ್ಲಮ್ ಕೇಕ್‌ಗಳನ್ನು ಖರೀದಿಸುತ್ತೇವೆ. ನಾವು ಯಾವಾಗಲೂ ಪ್ಲಮ್ ಕೇಕ್ ಅನ್ನು ತರುತ್ತೇವೆ. ಏಕೆಂದರೆ ಇದು ನಮ್ಮ ಪೋಷಕರ ಅಚ್ಚುಮೆಚ್ಚಿನದ್ದಾಗಿದೆ ಎಂದು ಗ್ರಾಹಕರಾದ ಅಟೀನಾ ಹೇಳಿದರು.

ಕ್ರೀಮ್ ಕೇಕ್‌ಗಳಿಗೆ ಆದ್ಯತೆ
ಅಂಬ್ರೋಸಿಯಾ ಅಂಗಡಿಯವರು ವಿಭಿನ್ನ ವಿನ್ಯಾಸಗಳಲ್ಲಿ ಉತ್ತಮ ಕೇಕ್‌ಗಳ ಸಂಗ್ರಹವನ್ನು ಹೊಂದಿದ್ದಾರೆ. ಇದು ಪಾಕೆಟ್ ಸ್ನೇಹಿಯಾಗಿದೆ ಎಂದು ಅಟೀನಾ ಫ್ಯಾನ್ಸಿ, ಕ್ರೀಮ್ ಮತ್ತು ಪ್ಲಮ್ ಕೇಕ್‌ಗಳನ್ನು ತೋರಿಸುತ್ತಾ ಹೇಳಿದರು. ನಾವು ಕ್ರೀಮ್ ಕೇಕ್‌ಗಳಿಗೆ ಆದ್ಯತೆ ನೀಡುತ್ತೇವೆ. ಏಕೆಂದರೆ ಅದು ನೋಡಲು ಮತ್ತು ಕ್ರಿಸ್ಮಸ್ ಪರಿಮಳ ಮತ್ತು ಅಲಂಕಾರದಲ್ಲಿ ಸುಂದರವಾಗಿರುತ್ತದೆ. ನಾನು ವೈಯಕ್ತಿಕವಾಗಿ ಚೀಸ್ ಮತ್ತು ಹನಿ ಕೇಕ್‌ಳನ್ನು ಇಷ್ಟಪಡುತ್ತೇನೆ. ನಾವು ಅವುಗಳನ್ನು ಮನೆಯಲ್ಲಿಯೇ ಮಾಡುತ್ತೇವೆ. ಇಂದು ನಾವು ಪ್ಲಮ್ ಕೇಕ್‌ಗಳ ಮೇಲೆ ಮಾತ್ರ ಗಮನಹರಿಸುತ್ತಿದ್ದೇನೆ ಎಂದು ಅಟೀನಾ ಹೇಳಿದರು.

ಐಸಿಂಗ್ ಕೇಕ್ ಮತ್ತು ತಾಜಾ ಕ್ರೀಮ್ ಕೇಕ್
ಅಂಬ್ರೋಸಿಯಾ ವ್ಯವಸ್ಥಾಪಕರು ರಿಜಾಯ್, ಈ ವರ್ಷ ಹೆಚ್ಚು ಉತ್ತಮವಾಗಿದೆ. ನಮ್ಮಲ್ಲಿ ಹೊಸ ರುಚಿಗಳು ಮತ್ತು ಹೊಸ ಸಂಪ್ರದಾಯಗಳಿವೆ. ಕಳೆದ ವರ್ಷ ಎಲ್ಲರೂ ಐಸಿಂಗ್ ಕೇಕ್ ಮತ್ತು ತಾಜಾ ಕ್ರೀಮ್ ಕೇಕ್‌ಗಳನ್ನು ಸೇವಿಸುತ್ತಿದ್ದರು. ಆದರೆ ಈ ವರ್ಷ ಎಲ್ಲರೂ ಆ ಪ್ಲಮ್ ಕೇಕ್ ಸಂಪ್ರದಾಯಕ್ಕೆ ಮರಳಿದ್ದಾರೆ. ಕ್ಲಾಸಿಕ್ ಪ್ಲಮ್ ನಮ್ಮ ಹೊಸ ವಿಧವಾಗಿದ್ದು, ನಮ್ಮ ಬಾಣಸಿಗರು ಹೆಚ್ಚಿನ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದು ಈ ವರ್ಷ ಪ್ರೀಮಿಯಂ ಮತ್ತು ವೇಗವಾಗಿ ಚಲಿಸುವ ಐಟಂ ಅವರು ಹೇಳಿದರು.

ಕೋವಿಡ್ ನಂತರ ಪ್ರತಿಯೊಬ್ಬರ ಶಾಪಿಂಗ್
ಅಬ್ರೋಸಿಯಾ ಅಂಗಡಿಯಲ್ಲಿ ಪ್ಲಮ್ ಕೇಕ್‌ಗಳು ಮತ್ತು ಐಸಿಂಗ್ ಕೇಕ್‌ಗಳು 700 ರಿಂದ 6,000 ರೂಪಾಯಿ ವರೆಗೂ ಇವೆ. ನಾವು ವಿವಿಧ ವಿಧದ ಪ್ಲಮ್ ಕೇಕ್‌ಗಳನ್ನು ಮಾಡುದ್ದೇವೆ. ಈ ವರ್ಷವು ಹೆಚ್ಚು ಉತ್ತಮವಾಗಿದೆ. ಕೋವಿಡ್ ನಂತರ ಪ್ರತಿಯೊಬ್ಬರೂ ಶಾಪಿಂಗ್ ಅನ್ನು ಆನಂದಿಸುತ್ತಿದ್ದಾರೆ. ಸಂಜೆಯ ಸಮಯದಲ್ಲಿ ನಾವು ಹೆಚ್ಚು ಜನಸಂದಣಿಯನ್ನು ನಿರೀಕ್ಷಿಸುತ್ತೇವೆ ಎಂದು ರೆಜಾಯ್ ಹೇಳಿದರು.

ಪ್ರತಿ ಗಂಟೆಗೆ ವೈವಿಧ್ಯಮಯ ಕೇಕ್
ಅಬ್ರೋಸಿಯಾದಲ್ಲಿ ಐಸಿಂಗ್ ಕೇಕ್ ಮತ್ತು ಕ್ರೀಮ್ ಕೇಕ್‌ಗಳ ಬೆಲೆ 730 ರೂ.ಗಳಿಂದ ಪ್ರಾರಂಭವಾಗಿದೆ. ನಮ್ಮಲ್ಲಿ ವಿವಿಧ ರೀತಿಯ ಕೇಕ್‌ಗಳಿವೆ. ಅದು 6,000 ರೂ.ವರೆಗೆ ಇರುತ್ತದೆ. ಪ್ರತಿ ಗಂಟೆಗೆ ವೈವಿಧ್ಯಮಯ ಕೇಕ್‌ಗಗಳು ಬರುತ್ತಿವೆ. ನಮ್ಮ ಬಾಣಸಿಗರು ತಮ್ಮದೇ ಆದ ಪಾಕವಿಧಾನಗಳನ್ನು ಪ್ರಯತ್ನಿಸುತ್ತಿದ್ದಾರೆ. ಹೊಸ ವಿನ್ಯಾಸಗಳನ್ನು ತರುತ್ತಿದ್ದಾರೆ. ಈ ವರ್ಷ ನಾವು ಸಕ್ಕರೆ ರಹಿತ ಮತ್ತು ಮೊಟ್ಟೆರಹಿತ ಪ್ಲಮ್ ಕೇಕ್ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ರಿಜಾಯ್ ಹೇಳಿದರು.












Click it and Unblock the Notifications