ಬೆಂಗಳೂರಿಗೆ ಭರ್ಜರಿ ಟಕ್ಕರ್ ಕೊಡಲು ಮುಂದಾದ ಚೆನ್ನೈ!
ಬೆಂಗಳೂರು ಅಭಿವೃದ್ಧಿಯಲ್ಲಿ ವೇಗವಾಗಿದೆ. ಇದೀಗ ಬೆಂಗಳೂರಿಗೆ ಪೈಪೋಟಿ ಕೊಡುವುದಕ್ಕೆ ನಾ ಮುಂದು.. ತಾ ಮುಂದು ಎಂದು ದಕ್ಷಿಣ ಭಾರತದ ವಿವಿಧ ಪ್ರಮುಖ ನಗರಗಳು ಬರುತ್ತಿವೆ. ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಷಯ ಹೆಚ್ಚು ಚರ್ಚೆಯಾಗುತ್ತಿರುವಾಗಲೇ ತಮಿಳುನಾಡು ಸರ್ಕಾರವು ಹೊಸೂರಿನ ಜೊತೆ.. ಜೊತೆಗೇ ಮತ್ತೊಂದು ಪ್ರಮುಖ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭರ್ಜರಿ ಸಿದ್ಧತೆ ಶುರು ಮಾಡಿಕೊಂಡಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಹೌದು, ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಪೈಪೋಟಿ ಕೊಡುವುದಕ್ಕೆ ತಮಿಳುನಾಡು ಸರ್ಕಾರವು ಮುಂದಾಗಿದೆ. ಈ ರೀತಿ ಇರುವಾಗಲೇ ಚೆನ್ನೈನಲ್ಲಿ ಭರ್ಜರಿ ಸಿದ್ಧತೆ ಶುರುವಾಗಿದೆ. ಚೆನ್ನೈನಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಸಿದ್ಧತೆ ಜೋರಾಗಿದೆ. ಬರೋಬ್ಬರಿ 20,000 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಪರಂದೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ. ವಿಮಾನ ನಿಲ್ದಾಣ ಯೋಜನೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಶುರುವಾಗಿದೆ.

ಇನ್ನು ಹೊಸ ಪರಂದೂರು ವಿಮಾನ ನಿಲ್ದಾಣವು ಚೆನ್ನೈನ ಎರಡನೇ ವಿಮಾನ ನಿಲ್ದಾಣವಾಗಿ ಕಾರ್ಯನಿರ್ವಹಿಸಲಿದೆ. ಬೆಂಗಳೂರಿಗೂ ಎರಡನೇ ವಿಮಾನ ನಿಲ್ದಾಣದ ಅವಶ್ಯಕತೆ ಇದೆ. ಆದರೆ, ತಮಿಳುನಾಡು ಡಬಲ್ ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗಲೇ ಹೊಸೂರಿನಲ್ಲಿ ವಿಮಾನ ನಿಲ್ದಾಣಕ್ಕೂ ಸಿದ್ಧತೆ ಮಾಡಿಕೊಂಡಿದ್ದು ಇದರ ನಡುವೆ ಚೆನ್ನೈನಲ್ಲೂ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದೆ. ಈ ವಿಮಾನ ನಿಲ್ದಾಣದ ಮೂಲಕ ವಾರ್ಷಿಕವಾಗಿ 100 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಲಿದ್ದಾರೆ ಎಂದು ಹೇಳಲಾಗಿದೆ.
ಚೆನ್ನೈನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಕೇಂದ್ರ ಸರ್ಕಾರವು ಇನ್ನಷ್ಟೇ ಅಂತಿಮ ಅನುಮತಿ ನೀಡಬೇಕಿದೆ. ಈ ರೀತಿ ಇರುವಾಗಲೇ ಒಂದು ಹೆಜ್ಜೆ ಮುಂದಕ್ಕೆ ಹೋಗಿ ತಮಿಳುನಾಡು ಸರ್ಕಾರವು ಚೆನ್ನೈನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಬಂಪರ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಇದು ಬೆಂಗಳೂರಿಗೆ ಪೈಪೋಟಿ ಕೊಡುವ ಎಲ್ಲಾ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಎಲ್ಲಿ ನಿರ್ಮಾಣವಾಗಲಿದೆ ಚೆನ್ನೈ ಎರಡನೇ ವಿಮಾನ ನಿಲ್ದಾಣ
ಚೆನ್ನೈನಲ್ಲಿ ಈಗಾಗಲೇ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದೀಗ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಿದ್ಧತೆ ಶುರು ಮಾಡಿಕೊಳ್ಳಲಾಗಿದೆ. ಚೆನ್ನೈನಿಂದ ಹೊಸ ವಿಮಾನ ನಿಲ್ದಾಣಕ್ಕೆ ಗುರುತು ಮಾಡಲಾಗಿರುವ ಜಾಗವು ಅಂದಾಜು 70 ಕಿ.ಮೀ ದೂರದಲ್ಲಿ ಇದೆ. ಈ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರವು ಈಗಾಗಲೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಶುರು ಮಾಡಿದೆ.
ಬೆಂಗಳೂರಿಗೆ ಪೈಪೋಟಿ: ಇನ್ನು ದಕ್ಷಿಣ ಭಾರತದಲ್ಲಿ ಬೆಂಗಳೂರಿಗೆ ಪ್ರಮುಖವಾಗಿ ಹೈದರಾಬಾದ್ ಹಾಗೂ ಚೆನ್ನೈ ನಗರಗಳು ಪೈಪೋಟಿ ನೀಡುತ್ತಿವೆ. ಇದೀಗ ಚೆನ್ನೈನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವುದರಿಂದ ಬೆಂಗಳೂರಿಗೆ ಇನ್ನಷ್ಟು ಪೈಪೋಟಿ ಎದುರಾಗಲಿದೆ ಹೇಳಲಾಗುತ್ತಿದೆ.











Click it and Unblock the Notifications