2025ರ ಫೆಬ್ರವರಿ 1ರಿಂದ ಎಲ್‌ಪಿಜಿ ಸಿಲಿಂಡರ್ ದರ ಸೇರಿದಂತೆ ಹಲವು ಪ್ರಮುಖ ನಿಯಮಗಳಲ್ಲಿ ಬದಲಾವಣೆ

ಇನ್ನೇನು ಕೆಲವೇ ದಿನಗಳಲ್ಲಿ 2025ರ ಜನವರಿ ತಿಂಗಳು ಮುಕ್ತಾಯಗೊಂಡು ಫೆಬ್ರವರಿಗೆ ಆಗಮನಕ್ಕೆ ಎರಡೇ ದಿನಗಳು ಮಾತ್ರ ಬಾಕಿಯಿವೆ. ಪ್ರತಿ ತಿಂಗಳಿನಂತೆ ಮುಂಬರಲಿರುವ ಫೆಬ್ರವರಿಯಿಂದ ಹಲವು ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಹಾಗಾದರೆ ಏನೆಲ್ಲಾ ಬದಲಾವಣೆಗಳು ಆಗಲಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಫೆಬ್ರವರಿ ತಿಂಗಳಲ್ಲಿ ಪ್ರಮುಖ ನಿಯಮಗಳು ಬದಲಾಗಲಿದ್ದು, ಇವು ನೇರವಾಗಿ ಸಾಮಾನ್ಯ ಜನರ ಜೇಬಿನ ಮೇಲೆ ಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದ್ದರಿಂದ ಯಾವುದೇ ಪ್ರಮುಖ ಕೆಲಸಗಳು ಬಾಕಿಯಿದ್ದರೆ ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಿ. ಇಲ್ಲದಿದ್ದರೆ ನಿಮ್ಮ ಜೇಬಿಗೆ ಹೆಚ್ಚುವರಿಯಾಗಿ ಖರ್ಚುಗಳೆಂಬ ಕತ್ತರಿ ಬಿದ್ದರೂ ಆಶ್ಚರ್ಯವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ.

Changes in many important rules Including LPG Cylinder Price from February 1 2025

ಅದರಲ್ಲೂ ಫೆಬ್ರವರಿ 1ರಂದೇ ಕೇಂದ್ರ ಬಜೆಟ್‌ ಮಂಡನೆ ಆಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಅವರು ಮಂಡನೆ ಮಾಡಲಿರುವ 8 ಬಜೆಟ್‌ ಆಗಲಿದ್ದು, ಈ ಮೂಲಕ ಅವರು ಅತೀ ಹೆಚ್ಚು ಬಜೆಟ್‌ ಮಂಡನೆ ಮಾಡಿದ ಕೀರ್ತಿಗೆ ಪಾತ್ರರಾಗಲಿದ್ದಾರೆ. ಇನ್ನು ಈ ನಡುವೆಯೇ ಫೆಬ್ರವರಿ ಆರಂಭದಿಂದಲೇ ಹಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

LPG ಸಿಲಿಂಡರ್ ದರ: ಪ್ರತಿ ತಿಂಗಳ ಮೊದಲನೆಯ ದಿನ, ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು (ಎಲ್‌ಪಿಜಿ ಸಿಲಿಂಡರ್ ದರ) ಬದಲಾಯಿಸುತ್ತಲೇ ಇರುತ್ತವೆ ಮತ್ತು ಹೊಸ ದರಗಳನ್ನು ಬಿಡುಗಡೆ ಮಾಡುತ್ತವೆ. ಈ ಬಾರಿಯೂ ಎಲ್‌ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ. ಸ್ಥಿರವಾಗಿರುವ 14 ಕೆಜಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಈ ಬಾರಿ ಇಳಿಕೆ ಆಗುವ ನಿರೀಕ್ಷೆಯಲ್ಲಿದ್ದಾರೆ.

ಯುಪಿಐ ಪಾವತಿ ನಿಯಮ: ಯಾವುದೇ ಯುಪಿಐ ಪಾವತಿ ಅಪ್ಲಿಕೇಶನ್ ವಹಿವಾಟು ಐಡಿಗಳನ್ನು ರಚಿಸಲು ವಿಶೇಷ ಅಕ್ಷರಗಳನ್ನು ಬಳಸುವಂತಿಲ್ಲ. ವಹಿವಾಟು ಐಡಿಯಲ್ಲಿ ವಿಶೇಷ ಅಕ್ಷರಗಳನ್ನು ಬಳಸುವಂತಹ ಯಾವುದೇ ಯುಪಿಐ ಅಪ್ಲಿಕೇಶನ್ ಅನ್ನು ನೀವು ಬಳಸುತ್ತಿದ್ದರೆ, ವ್ಯವಹಾರವನ್ನು ಕೇಂದ್ರ ವ್ಯವಸ್ಥೆ ತಿರಸ್ಕರಿಸುತ್ತದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಯುಪಿಐ ವಹಿವಾಟು ಐಡಿ ಉತ್ಪಾದನಾ ಪ್ರಕ್ರಿಯೆಯನ್ನ ಪ್ರಮಾಣೀಕರಿಸಲು ಬಯಸುತ್ತದೆ. ಆಲ್ಫಾನ್ಯೂಮೆರಿಕ್ ಅಕ್ಷರಗಳನ್ನ ಮಾತ್ರ ಬಳಸಬೇಕು & ವಿಶೇಷ ಅಕ್ಷರಗಳನ್ನು ಬಳಸಬಾರದೆಂದು ಹೇಳಿದೆ.

IMPS ನಿಯಮಗಳ ಬದಲಾವಣೆ: ಆರ್‌ಬಿಐ ಸಾಮಾನ್ಯ ಜನರಿಗೆ ದೊಡ್ಡ ಪರಿಹಾರ ನೀಡುವ ಬದಲಾವಣೆಯನ್ನ ಮಾಡಿದೆ. ಈಗ ನೀವು ಫಲಾನುಭವಿಯ ಹೆಸರನ್ನು ಸೇರಿಸದೆಯೇ ನಿಮ್ಮ ಬ್ಯಾಂಕ್ ಖಾತೆಯಿಂದ 5,00,000 ರೂಪಾಯಿಗಳವರೆಗೆ ವರ್ಗಾಯಿಸಲು ಸಾಧ್ಯ ಆಗುತ್ತದೆ. ಕಳೆದ ವರ್ಷ ಅಕ್ಟೋಬರ್ 31ರಂದು ಎನ್‌ಪಿಸಿಐ ಈ ಬಗ್ಗೆ ಸುತ್ತೋಲೆ ಹೊರಡಿಸಿತ್ತು.

ಫಾಸ್ಟ್ಯಾಗ್ KYC: ಫಾಸ್ಟ್‌ಟ್ಯಾಗ್‌ಗಳ KYC ಅನ್ನು ಇನ್ನೂ ಪೂರ್ಣಗೊಳಿಸದವರು ಈ ಕೆಲಸವನ್ನು ಶೀಘ್ರದಲ್ಲೇ ಮಾಡಿ. ಇಲ್ಲದಿದ್ದರೆ, ಅಂತಹವರ ಫಾಸ್ಟ್‌ಟ್ಯಾಗ್‌ಗಳನ್ನು ನಿಷೇಧಿಸಲಾಗುತ್ತದೆ. ಫಾಸ್ಟ್‌ಟ್ಯಾಗ್ ಕೆವೈಸಿ ಮಾಡಿಸಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜನವರಿ 31ರ ವರೆಗೆ ಅವಕಾಶ ಕಲ್ಪಿಸಿದೆ. ಒಂದು ವೇಳೆ ಇದರೊಳಗೆ ಕೆವೈಸಿ ಮಾಡಿಸದವರ ಪಾಸ್ಟ್ಯಾಗ್‌ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎನ್ನುವ ಮಾಹಿತಿ ಇದೆ.

NPS ನಿಯಮಗಳಲ್ಲಿ ಬದಲಾವಣೆ: ಈಗಾಗಲೇ PFRDA NPS ಭಾಗಶಃ ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಸುತ್ತೋಲೆಯನ್ನು ಹೊರಡಿಸಿತು. ಇದು ಫೆಬ್ರವರಿ 1ರಿಂದ ಜಾರಿಗೆ ಬರಲಿದೆ. ಈ ಸುತ್ತೋಲೆಯಲ್ಲಿ, ಉದ್ಯೋಗದಾತರ ಕೊಡುಗೆಯನ್ನು ಹೊರತುಪಡಿಸಿ, NPS ಖಾತೆದಾರರ ವೈಯಕ್ತಿಕ ಪಿಂಚಣಿ ಖಾತೆಯಿಂದ 25% ವರೆಗೆ ಮೊತ್ತವನ್ನು ಹಿಂಪಡೆಯಬಹುದು ಎಂದು ಹೇಳಲಾಗಿದೆ. ಆದ್ದರಿಂದ ನೀವು ಮೊದಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಬಳಿಕ ಸರ್ಕಾರಿ ನೋಡಲ್ ಕಚೇರಿಯು ಪರಿಶೀಲನೆ ನಡಸುತ್ತದೆ.

ಎಸ್‌ಬಿಐ ಗೃಹ ಸಾಲ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಗೃಹ ಸಾಲ ಅಭಿಯಾನವನ್ನು ನಡೆಸುತ್ತಿದೆ. ಇದರಲ್ಲಿ ಗೃಹ ಸಾಲಗಳ ಮೇಲೆ 65 ಬೇಸಿಸ್ ಪಾಯಿಂಟ್‌ಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಈ ರಿಯಾಯಿತಿ ಫೆಬ್ರವರಿ 1ರಿಂದ ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+